yogeendra teertha, rayara mutt yati 1688 praying moola rama
yati's ankita 'shreerama'
" ಶ್ರೀ ಮೂಲರಾಮ ಸ್ತುತಿ "
ರಾಗ : ಭೈರವಿ ತಾಳ : ತ್ರಿವಿಡಿ
ಯನ್ನನನ್ಯನಾ । ಮಾ ।
ಡಿ ನೋಡದೆ ಪಾಲಿಸಾಬೇಕೋ ।
ನಿನ್ನ ಮನದಲಿಟ್ಟರೆ ಸಾಕೋ ।। ಪಲ್ಲವಿ ।।
ದುರಂತ ದುರಿತಾ । ರಾ ।
ಶಿ ರೂಪಾ ನಾನಾದಾಡೇನೋ ನಿನ್ನ ಪಾದ ।
ಸರಸೀರುಹ ಸ್ಮರಣೆ ಮಾಡಲು ।
ದುರಿತಾ ಉಂಟೆ ।।
ತರಣಿ ಕಿರಣಾ ಧರಣಿ ವ್ಯಾಪಿಸೆ ।
ಘೋರ ತಿಮರಾ ದೂರಾವಲ್ಲದೆ ।
ಕರುಣದಿಂದಲಿ ಕಾಯದಿದ್ದೊಡೆ ।
ಶರಣರಾರೋ ನೀನೆ ಪೇಳೋ ।। ಚರಣ ।।
ಕರ್ಮ ಕಾಲ ಕಾಮ ।
ವಿಮತಿ ಪೂರ್ವ ಸರ್ವ ಕಾರಣಂಗಳು ।
ಹರಿಯೇ ನಿನ್ನ ತಂತ್ರವಲ್ಲದೆ ।
ಸ್ವತಂತ್ರ ನೀನೆ ।।
ಪ್ರೇರಕನಾಗಿ ಕರ್ಮಫಲವು ।
ಕ್ಯಲವನುಣಿಸಿ ಕ್ಯಲವನಳಿಸಿ ।
ಹರಿಯೇ ನಿನ್ನ ದರುಶನವಾನಿತ್ತು ।
ದೀನ ಜನರನ ಸಾಕುವಿಯಾಗಿ ।। ಚರಣ ।।
ಮೀನ ಕೂರ್ಮ ವರಹ ರೂಪಾ ।
ಶ್ರೀ ನಾರಸಿಂಹ ವಾಮನ ।
ವಾನಾನಿ ರಾಮ । ರಾಮ ।
ಕೃಷ್ಣ ಬುದ್ಧ ಕಲ್ಕ್ಯಾದಿ ।।
ಅನೇಕ ರೂಪನಾಗಿ । ಚತು ।
ರಾನನಾದಿ ಭಕುತರಿಗೆ ।
ಜ್ಞಾನವಿತ್ತು ರಕ್ಷಿಸಿ ನೀ ।
ಮಾನಾದಾನೆ ಸಿರಿರಾಮ ।। ಚರಣ ।।
ಯನ್ನನನ್ಯನಾ ಮಾಡಿ ನೋಡದೆ ಪಾಲಿಸಾ ಬೇಕೋ ।
ನಿನ್ನ ಮನದಲಿಟ್ಟರೆ ಸಾಕೋ ।। ಪ।।
ದುರಂತ ದುರಿತಾ । ರಾ ।
ಶಿ ರೂಪಾ ನಾನಾದಾಡೇನು ನಿನ್ನ ಪಾದ ।
ಸರಸೀರುಹ ಸ್ಮರಣೆ ಮಾಡಲು।
ದುರಿತಾ ಉಂಟೆ ।।
ತರಣಿ ಕಿರಣಾ ಧರಣಿ ವ್ಯಾಪಿಸೆ ।
ಘೋರ ತಿಮಿರಾ ದೂರಾವಲ್ಲದೆ ।
ಕರುಣದಿಂದಲಿ ಕಾಯದಿದ್ದಡೆ ।
ಶರಣರಾರೋ ನೀನೇ ಪೇಳೋ ।। 1 ||
ಕರ್ಮ ಕಾಲಾ ಕಾಮ ।
ವಿಮತಿ ಸರ್ವ ಕಾರಣಂಗಳು ।
ಹರಿಯೇ ನಿನ್ನ ತಂತ್ರವಲ್ಲದೆ ಸ್ವತಂತ್ರ ನೀನೆ ।।
ಪ್ರೇರಕನಾಗಿ ಕರ್ಮಫಲವು ಕ್ಯಲವನುಣಿಸಿ ಕ್ಯಲವನಳಿಸಿ ।
ಹರಿಯೇ ನಿನ್ನ ದರುಶನವಾನಿತ್ತು
ದೀನ ಜನರನ ಸಾಕುವಿಯಾಗಿ ।। 2 ।।
ಮೀನ ಕೂರ್ಮ ವರಾಹ ।
ಶ್ರೀ ನರಾಸಿಂಹ ವಾಮನ ।
ವಾನಾನಿ ರಾಮ ಕೃಷ್ಣ ಬುದ್ಧ ಕಲ್ಕ್ಯಾದಿ ।।
ಅನೇಕ ರೂಪನಾಗಿ । ಚತು ।
ರಾನನಾದಿ ಭಕುತರಿಗೆ ।
ಜ್ಞಾನವಿತ್ತು ರಕ್ಷಿಸಿ ನೀ ।
ಮಾನಾದಾನೆ ಸಿರಿರಾಮ ।।3||
********
No comments:
Post a Comment