Friday, 27 December 2019

ಬಂದಳು ಸಿರಿಲಕುಮಿಯು ನಮ್ಮ ankita tulasi

by ತುಳಸೀರಾಮದಾಸರು
ಬಂದಳು ಸಿರಿಲಕುಮಿಯು ನಮ್ಮ ಮನೆಗೆತಂದಳೈಶ್ವರ್ಯಂಗಳ ಪ

ಇಂದಿರೆಹರಿಯುರ ಮಂದಿರ ನಿತ್ಯಾನಂದನಿಲಯಭವಬಂಧ ವಿಮೋಚನಿಅ.ಪ

ಸುಂದರಾಂಗಿ ಸುಗುಣಾಸಿಂಧುಜಗಜ್ಜನನೀಇಂದುಸೋದರಿ ಪೂರ್ಣೇಂದು ಬಿಂಬಾನನೆ 1

ಯೆಂದಿಗೆ ಸಂಪದಕುಂದಬರವ ಹಾಂಗೆನಿಂದುಪಾಲಿಸುವನೆಂದು ದೀಕ್ಷೆಯು ಮಾಡಿ2

ಬೃಂದಾರಕಸಂಕ್ರಂದನವಂದಿತೆಮಂದಹಾಸದಿ ರಘು ನಂದನ ಸುಪ್ರಿಯೆ 3

ಕಂದ ತುಲಸಿದಾಸನೆಂದು ಸಂಭ್ರಮದಿ ಮುಚುಕುಂದವರದ ಪಾದದ್ವಂದ್ವ ಭಕ್ತಿಯು ಕೊಡಲು 4
******

No comments:

Post a Comment