ರಚನೆ:- ವಿಜಯ ದಾಸರು.
ಸೇರಿದೆ ನಿನ್ನ, ವೆಂಕಟ ರನ್ನ..,
ಪಾಲಿಸು ಯೆನ್ನ ಅಪಾರ ಜನುಮ ದೈವವಿಂದು..
ಸೇರಿದೆ ನಿನ್ನ, ವೆಂಕಟ ರನ್ನ..,
ಪಾಲಿಸು ಯೆನ್ನ ಅಪಾರ ಜನುಮ ದೈವವಿಂದು.. !!ಪ!!
ಶೂನ್ಯಗ್ನನು ನಾನು ಅನ್ಯಥಾ ಗತಿಯರಿಯೆ,
ಅನ್ಯರಲ್ಲಿಗೆ ಕೊಡದೆ, ಧನ್ಯನ ಮಾಡೋ ಬಿಡದೆ..
ಸೇರಿದೆ ನಿನ್ನ, ವೆಂಕಟ ರನ್ನ.. !!೧!!
ಕಲ್ಪತರುವೆ ಎಂದು ಒಪ್ಪದಿಂದಲ್ಲಿ ಬಂದೆ,
ಆಲ್ಪರಿಯದಂತೆ ನಾಗ ತಲ್ಪನೆ ಫಲವೀಯೊ..,
ಸೇರಿದೆ ನಿನ್ನ, ವೆಂಕಟ ರನ್ನ... !!೨!!
ವರುಷ ವರುಷ ಹೀಗೆ ದರುಶನ ಕೊಡುನನಗೆ,
ಹರುಷವಾಗಲಿ ಪರಮ ಪುರುಷ ವಿಜಯವಿಠ್ಠಲ...
ಸೇರಿದೆ ನಿನ್ನ, ವೆಂಕಟ ರನ್ನ... !!೩!!
***
pallavi
sEride ninna venkaTaranna pAlisu enna apArajanumake nInE daivavendu
caraNam 1
shUnyajnanu nAnu anyathA gati hariye anyaralli koDave dhanyana mADO biDade
caraNam 2
kalpataruvE endu oppadindali bande alparyadante nAgatalpane phalavIyO
caraNam 3
varuSA varuSa hIge darushana kOdu enage haruSavAgali parama puruSa vijayaviThalA
***
ವಿಜಯದಾಸ
ಸೇರಿದೆ ನಿನ್ನ ವೆಂಕಟರನ್ನ ಪಾಲಿಸು ಎನ್ನ ಅ- |
ಪಾರ ಜನುಮಕ್ಕೆ ನೀನೆ ದೈವವೆಂದು ಪ
ಶೂನ್ಯಜ್ಞನು ನಾನು ಅನ್ಯಾಥಾ ಗತಿ ಅರಿಯೆ |
ಅನ್ಯರಲ್ಲಿಗೆ ಕೊಡದೆ ಧನ್ಯನ ಮಾಡೊ ಬಿಡದೆ 1
ಕಲ್ಪತರುವೆ ಎಂದು ವಪ್ಪದಿಂದಲಿ ಬಂದೆ |
ಆಲ್ಪರಿಯದಂತೆ ನಾಗತಲ್ಪನೆ ಫಲವೀಯೋ 2
ವರುಷಾವರುಷ ಹೀಗೆ ದರುಶನಕೊಡು ಎನಗೆ |
ಹರುಷವಾಗಲಿ ಪರಮಪುರುಷ ವಿಜಯವಿಠ್ಠಲಾ 3
*******
No comments:
Post a Comment