Wednesday 16 October 2019

ನದನದಿಗಳನು ಸ್ಮರಿಸಿರೋ ankita vijaya vittala

ನದನದಿಗಳನು ಸ್ಮರಿಸಿರೋ
ನದನದಿಗಳನು ಸ್ಮರಿಸಿ ಹೃದಯ ನಿರ್ಮಳರಾಗಿ
ಮುದದಿಂದ ನಿಮ್ಮ ಮನದಧಮತನ ಬಿಟ್ಟ ಸಂ
ಪದವಿಗೆ ಸೋಪಾನದಂತಾಗುವದು ಶ್ರೀ
ಪದುಮನಾಭನು ವೊಲಿವನು ||Pa||

ಸಿಂಧು ಮರುಧೃತಿ ಹೇಮವತಿ ನೇಮಿ ನೇತ್ರವತಿ
ತರಣಿಸುತೆ ನರ್ಮದಾ ಗಾಯತ್ರಿ ಗೋಮತಿ
ಗರುಡ ಸಾಧರ್ಮಾ
ಸರಸ್ವತಿ ಮಣಿಮುಕ್ತ ಮುಕ್ತನದಿಯು ಪ್ರಣತ
ವರದಕಾಗಿಣಿ ಕೃಷ್ಣವೇಣಿ ವೇದವತಿ
ಹರಿಧೃತಿ ಇಂದ್ರಾಣಿ ಪುನಃ ಪುನಃ ವಾಣಿವಂ
ಜರಫಣಿ ಭೀಮರಥಿನೀ||1||

ಧಾರಿ ತುಂಗಾ ಭದ್ರಿಗಣಪತಿ ಶತಭಾಗ
ನಾರದಿ ಉಭಯಪಿನಾಕಿ ಚಿತ್ರವತೀ
ಮೂರು ಲೋಕೋದ್ಭವ ಭವಾನೀ
ಚಾರು ಗಂಡಿಕೆ ಸರಯು ಶ್ರೋಣಿ ಭದ್ರನೀಲ
ಕ್ಷೀರನದಿ ಪಾಪಘ್ನ ಮಹಾನದಿ ಅಘನಾಶಿ
ವಾರಿಜಾಪ್ತಾವತಿ ಸುರ್ವಣ ಮುಖರೀ
ವಿಸ್ತಾರ ಹಾಟಕ ಅತ್ರಿಣೀ ||2||

ಸುಲಭ ಮಂದಾಕಿನಿ ಕೌಮೋದಕಿ ಶಾಂತಿ
ಕಪಿಲ ಚಂದ್ರಭಾಗ ಅರುಣೀ
ಪೊಳೆವ ಕಾಳಾವತಿ ತ್ರಿಪಥಿ ಗೌರಿ ಕುಂತಿ
ಅಳಕನಂದನ ಅಮಲವತಿ ಭೀಮಸಂಭೆ
ಸಿ ತಾಂಬ್ರ ಪರ್ಣಿಯು ಜಯ ಮಂ
ಸತಿ ಸತ್ಯವತಿ ವೈಷ್ಣವೀ ||3||
ಕನಿಕ ಶುಕ್ಲಾವತೀ ಬಾಹುನದಿಗೋವಿಂದ
ಮಿನಗುವ ಭೋಗವತಿ ಕಾಶ್ಯಪಿಂಕಾಳಿಂದಿ
ಅನುಸಿಂಧು ಐರಾವತಿ
ಋಣ ವಿಮೋಚನ ಮಯೂರ ಸಂಭವೆ
ನಿತ್ಯ ಪುಷ್ಕರಣಿ ಪಯೋ
ಶ್ವಿನಿ ಮಹಾಪಗ ಭದ್ರ ಭೈರವಿ ವಿಚಿತ್ರ ನದಿಗಳನು ||4||

ಅರುಣೋದಯಲೆದ್ದು ಧರೆಯೊಳುಗಳ್ಳ ಬಲು
ಸರಿತಗಳ ನೆನೆದು ಪುಳಕೋತ್ಸವದಲಿ
ಪರಮ ಧನ್ಯರಾಗಿ ಪಾಪಗಳ ಪೋಗಾಡಿ
ನಿರುತ ಮಾರುತ ಮತದಲೀ
ಚರಿಸಿ ನಿಜಭಕುತಿಯಲಿ ಹಗಲು ಇರಳು ಇನಿತು
ಸಿರಿಯರಸ ವಿಜಯವಿಠ್ಠಲನ ಚರಣಾಂಬುಜವ
ಸರಸದಿಂದಲಿ ಧ್ಯಾನಗೈದು ಈ ನದಿಗಳಲಿ
ಕರಣದಲಿ ತಿಳಿದು ನಿತ್ಯಾ||5||
******

No comments:

Post a Comment