Thursday, 17 October 2019

ಅಂತರಂಗದ ಕದವು ತೆರೆಯಿತಿಂದು ankita vijaya vittala ANTARANGADA KADAVU TEREYITINDU


 
1st Audio by Mrs. Nalini Parthasarathy


Raaga : Harikambhoji    Tala: Aadi  (AUDIO RAGA MAYBE DIFFERENT)

ಅಂತರಂಗದ ಕದವು ತೆರೆಯಿತಿಂದು 
ಎಂತೋ ಪುಣ್ಯದ ಫಲವಪ್ರಾಪ್ತಿಯಾಯಾತು ಇಂದು||ಪಲ್ಲ||

ಏಸು ದಿನವಾಯಿತೊ ಬೀಗಮುದ್ರೆಯ ಮಾಡಿ
ವಾಸವಾಗಿದ್ದರು ದುರುಳರಲ್ಲಿ
ಮೋಸಹೋಯಿತು ಇಂದಿನತನಕ ತಮಸಿನ
ಘಾಸಿಯೊಳಗೆ ಹೂಳೆ ಕಾಣೀಸುತ್ತಿರಲಿಲ್ಲ||೧||

ಹರಿಕರುಣವೆಂಬಂಥ ಕೀಲಿಕೈ ದೊರಕಿತು
ಗುರುಕರುಣವೆಂಬಂಥ ಶಕ್ತಿಯಿಂದ
ಪರಮಭಾಗವತರ ಸಹವಾಸದಲಿ ಪೋಗಿ
ಹರಿಸ್ಮರಣೆಯೆಂಬಂಥ ಬೀಗ ಮುದ್ರೆಯ ತೆರೆದೆ||೨||

ಸುತ್ತಲೀದ್ದವರೆಲ್ಲ ಪಲಾಯನರಾದರು
ಭಕ್ತಿ ಕಕ್ಕಡವೆಂಬ ಜ್ಞಾನದೀಪ
ಜತ್ತಾಗಿ ಹಿಡಕೊಂಡು ದ್ವಾರದೊಳಗೆ ಪೊಕ್ಕು
ಎತ್ತನೋಡಿದರತ್ತ ಶೃಂಗಾರ ಸದನ||೩||

ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು
ಪಾರದಾರಿಗೆ ಪ್ರಾಣ ಜಯ ವಿಜಯರು
ಮಿರಗೈವೋ ಮಧ್ಯ ಮಂಟಪಕೋಟಿ ರವಿಯಂತೆ
ಸರಸಿಜಾನಾಭನ ಅರಮನೆಯ ಸೊಬಗು||೪||

ಸ್ವರ ಮೂರ್ತಿ ಗಣಮಧ್ಯ ಸಚ್ಚಿದಾನಂದೈಕ
ರಮೆಧರೆಯಲಿಂದ ಇಂಗೀತ್ವದಿ
ಕಮಲಜಾತಿಗಳಿಂದ ಸ್ತುತಿಸಿಗೊಳುತಲಿ ಹೃದಯ
ಕಮಲದೊಳಗಿರುವಶ್ರೀ ವಿಜಯ ವಿಠಲನ ಕಂಡೆ||೫||
***

pallavi

antarangada kadavu tereyitindu

anupallavi

entu puNyada phalavu prApti dorakito enage

caraNam 1

Esu dinavayitO bIga mudraya mADi vAsavAgiddarO duruLarilli
mOsavayittu indind tanaka tamasina rAshiyoLage hULi kANi suttiralilla

caraNam 2

hari karuNavembanta kIli kaidorakittu guru karauNavembanta shakti inda
parama bhAgavatara sahavAsadali pOgi hari smaraNeyindalli bIga mudreya tegeda

caraNam 3

suttaliddavarella palayAnavAdaru bhakti kakkaLavemba jnAna dIpa
jattAgi hiDakoNDu dvAradoLage pokke ettanODidaratta shrngAra sadana

caraNam 4

horage dvArage nAlku oLagaidu dvAragaLu paradArige prANa jaya vijayaru
miruguvA madhya maNTapa kOTi raviyante sarasija nAbhana aramaneya sobagu

caraNam 5

svamUrtigaNa madhya saccidAnandaika rame dhareyarinda lAlingatvadi
kamala jAdigaLinda tutisi koLLuva hrdaya kamaladoLagiruva shrI vijayaviThalana kaNDe
***


ಅಂತರಂಗದ ಕದವು ತೆರೆಯಿತಿಂದು ||ಪ||
ಎಂತು ಪುಣ್ಯದ ಫಲವು ಪ್ರಾಪ್ತಿ ಯಾಯಿತೊ ಎನಗೆ ||ಅ||

ಏಸುದಿನವಾಯಿತೊ ಬೀಗಮುದ್ರೆಯ ಮಾಡಿ|
ವಾಸವಾಗಿದ್ದರೋ ದುರುಳರಿಲ್ಲಿ||
ಮೋಸವಾಯಿತು ಇಂದಿನ ತನಕ ತಮಸಿನ|
ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ||೧||

ಹರಿಕರುಣವೆಂಬಂಥ ಕೀಲಿಕೈ ದೊರಕಿತು|
ಗುರುಕರುಣವೆಂಬಂಥ ಶಕ್ತಿಯಿಂದ||
ಪರಮಭಾಗವತರ ಸಹವಾಸದಲಿ ಪೋಗಿ
ಹರಿಸ್ಮರಣೆಯಿಂದಲ್ಲಿ ಬೀಗಮುದ್ರೆಯ ತೆಗೆದೆ ||೨||

ಸುತ್ತಲಿದ್ದವರು ಪಲಾಯನವಮಾಡಿದರು|
ಭಕ್ತಿಕಕ್ಕಡವೆಂಬ ಜ್ಞಾನದೀಪ||
ಜತ್ತಾಗಿ ಹಿಡಕೊಂಡು ದ್ವಾರದೊಳಗೆ ಪೊಕ್ಕೆ|
ಎತ್ತನೋಡಿದರತ್ತ ಶೃಂಗಾರಸದನ ||೩||

ಹೊರಗೆ ದ್ವಾರವು ನಾಲ್ಕು , ಒಳಗೈದು ದ್ವಾರಗಳು|
ಪರ ದಾರಿಗೆ ಪ್ರಾಣ ಜಯವಿಜಯರು||
ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ
ಸರಸಿಜನಾಭನ ಅರಮನೆಯ ಸೊಬಗು ||೪||

ಸ್ವಮೂರ್ತಿಗಣ ಮಧ್ಯ ಸಚ್ಚಿದಾನಂದ|
ರಮೆಧರೆಯರಿಂದಲಾಲಿಂಗತ್ವದಿ||
ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯದ
ಕಮಲದೊಳಗಿರುವ ಶ್ರೀ ವಿಜಯವಿಠ್ಠಲನ ಕಂಡೆ ||೫||
*********


ಅಂತರಂಗದ ಕದವು ತೆರೆಯಿತಿಂದು ||ಪ||
ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತು ಎನಗೆ ||ಅ||

ಏಸುದಿನವಾಯಿತೊ ಬೀಗಮುದ್ರೆಯ ಮಾಡಿ
ವಾಸವಾಗಿದ್ದರೋ ದುರುಳರಿಲ್ಲಿ
ಮೋಸವಾಯಿತು ಇಂದಿನ ತನಕ ತಮಸಿನ
ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ||೧||

ಹರಿಕರುಣವೆಂಬಂಥ ಕೀಲಿಕೈ ದೊರಕಿತು
ಗುರುಕರುಣವೆಂಬಂಥ ಶಕ್ತಿಯಿಂದ
ಪರಮಭಾಗವತರ ಸಹವಾಸದಲಿ ಪೋಗಿ
ಹರಿಸ್ಮರಣೆಯಿಂದಲಿ ಬೀಗಮುದ್ರೆಯ ತೆಗೆದೆ ||೨||

ಸುತ್ತಲಿದ್ದವರು ಪಲಾಯನವಾದರು
ಭಕ್ತಿಕಕ್ಕಡವೆಂಬ ಜ್ಞಾನದೀಪ
ಜತ್ತಾಗಿ ಹಿಡಕೊಂಡು ದ್ವಾರದೊಳಗೆ ಪೊಕ್ಕೆ
ಎತ್ತನೋಡಿದರತ್ತ ಶೃಂಗಾರ ಸದನ ||೩||

ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು
ಪರ ದಾರಿಗೆ ಪ್ರಾಣ ಜಯವಿಜಯರು
ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ
ಸರಸಿಜನಾಭನ ಅರಮನೆಯ ಸೊಬಗು ||೪||

ಸ್ವಮೂರ್ತಿಗಣ ಮಧ್ಯ ಸಚ್ಚಿದಾನಂದೈಕ
ರಮೆಧರೆಯರಿಂದಲಾಲಿಂಗತ್ವದಿ
ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯ-


ಕಮಲದೊಳಗಿರುವ ಶ್ರೀ ವಿಜಯವಿಠಲನ ಕಂಡೆ ||೫||
*******

No comments:

Post a Comment