Friday, 27 December 2019

ಸರಿಯಾರೈ ಜಯಮುನಿ ಸಮರಾರೈ ankita vasudeva vittala

ಸರಿಯಾರೈ ಜಯಮುನಿ ಸಮರಾರೈ
ಗುರುಮಧ್ವಕೃತಿ ವಿವೃತಿ ರಚಿಸುವಲ್ಲಿ ||pa||

ವರ್ಣವಂದಾರು ಬಿಡದಲೆ ಬಹುಫಲ
ವರ್ಣಿಪೆ ಲೋಭದಿ ಶರಣ ಜನರಿಗೆ
ಕರ್ಣಸುಧಾರಸ ಬೆರೆದು ನೀ ಬಲುಗೂಢ
ಪೂರ್ಣಮತಿ ಭಾವವ ತೆಗೆವತಿ ಶೂರ ||1||

ಒಂದೊಂದು ವಚನವ ಹಿಂದಾಗಿ ಮುಂದಾಗಿ
ಛಂದಾಗಿ ತಿರಿಗಿಸಿ ತಿರೆಯ ಸಿಂಧುರದಂತೆ
ಬಂದಿಸಿ ಮುಂದಾಗಿ ಬಂದು ದುರ್ವಾದಿಯ
ಸಂದುಗಳನೆ ಸೀಳಿ ಮೆರೆದತಿ ಶೂರ ||2||

ಕತ್ತಿಯ ಒಂದೇ ಹಿಡದೆ ಬಿಡದಲೆವೆ
ಹತ್ತು ದಿಕ್ಕಿಗೆ ತಿರಿಗಿಪ್ಪ ವೀರನ ತೆರೆ
ಅತ್ಯರ್ಥ ಮೂಲದ ಹಿಡಿದು ಅದನ್ನು
ಸುತ್ತಿಸಿ ವಿಮತರ ತತ್ತರಿಸುವ ಧೀರ||3||

ಮೂಲ ವಚನಗಳ ಕಲ್ಪಲತೆಯ ಮಾಡಿ
ಮೇಲಾದ ತತ್ವಗಳೆಂಬೊ ಫಲಗಳು
ಶೀಲಮತಿಗಳುಳ್ಳ ಶಿಷ್ಯ ಶಿಶುವಿಗಳಿ
ಗಾಲಿಸಿ ಮೇಳಿಸುತ ಒಲಿಸುವ ಧೀರ ||4||

ಅಕ್ಷೋಭ್ಯ ಮುನಿಗಳ ಪುಣ್ಯಫಲಗಳೆಂತೊ
ಕರ್ಮ ಕಷ್ಟವೆ ಒದಗಿತು
ಈ ಕ್ಷೋಣಿತಳದಲ್ಲಿ ವಾಸುದೇವವಿಠಲನಕಕ್ಷವ
ವೊಹಿಸಿ ಪುಟ್ಟಿದ್ಯೊ ಜಯರಾಯ||5||
*******

No comments:

Post a Comment