Shreesha Keshava Vittala Dasaru
Old Name: Subbanna Dasa and disciple of Gopala dasaru
ರಾಘವೇಂದ್ರ ಗುರುರಾಜಾ – ಸುತೇಜಾ || ಪ ||
ಸಾನುರಾಗದಿ ನಿನ್ನ ಧ್ಯಾನ ಮಾಡದ
ಹೀನ ಮಾನವವಲ್ಲೆ ಅನುಮಾನವಿಲ್ಲದೆ ನಾ
ಮಾನಗೈಯಲಿಬೇಕೆಂದನುಮಾನದಲಿ ನಿ
ಧಾನಿಸಲಾಗೆ ಬಂದು ಸತ್ವರದಿಂದ
ನೀನೆ ಹೃದಯದಿ ನಿಂದು ಆ ಕ್ಷಣ ಎನ್ನ
ಜ್ಞಾನಾಂಧಕಾರಕೆ ಭಾನುರೂಪನಾದಿ || ೧ ||
ಕರುಣಾಸಾಗರ ನಿನ್ನ ಚರಣ ಸೋಕಲು – ಲೋಹ
ಪರಶು ತಾಕಲು ಚಾಮಿಕರನಾದ
ತೆರೆ ಎನ್ನ ದುರಿತರಾಶಿಯ ತರಿದು – ದೂತನ ಮೇಲೆ
ಪರಮಾನುಗ್ರಹ ಗರೆದು ಪೊರೆದೆನೆಂಬ ಬಿರುದು
ಲೋಕದಿ ಮೆರೆದು ಸಾರುತಲಿದೆ
ಪರಮಹಂಸ ಗುರು || ೨ ||
ಶ್ರೀಶಕೇಶವಿಠ್ಠಲನ ಕರುಣಾವಿಲಾಸ
ದಿ ಸುಖಿಸುವರೀ ಸಮಯದಲೆನ್ನ
ದೋಷ ವಿಚಾರಿಸದೆ ಮಮತೆಯಿಂದ
ಪೋಷಿಪರೆಂದರಿದೆ ಕಂಡ ಕಡಿ
ಆಶೆಯಿಂದಲೆ ಬರಿದೆ ಚರಿಸಲು ಉ
ದಾಸಿಸದೆಲೆ ಪೊರೆದು ಸುಕೃತ || ೩ |
****
ಸಾನುರಾಗದಿ ನಿನ್ನ ಧ್ಯಾನ ಮಾಡದ
ಹೀನ ಮಾನವವಲ್ಲೆ ಅನುಮಾನವಿಲ್ಲದೆ ನಾ
ಮಾನಗೈಯಲಿಬೇಕೆಂದನುಮಾನದಲಿ ನಿ
ಧಾನಿಸಲಾಗೆ ಬಂದು ಸತ್ವರದಿಂದ
ನೀನೆ ಹೃದಯದಿ ನಿಂದು ಆ ಕ್ಷಣ ಎನ್ನ
ಜ್ಞಾನಾಂಧಕಾರಕೆ ಭಾನುರೂಪನಾದಿ || ೧ ||
ಕರುಣಾಸಾಗರ ನಿನ್ನ ಚರಣ ಸೋಕಲು – ಲೋಹ
ಪರಶು ತಾಕಲು ಚಾಮಿಕರನಾದ
ತೆರೆ ಎನ್ನ ದುರಿತರಾಶಿಯ ತರಿದು – ದೂತನ ಮೇಲೆ
ಪರಮಾನುಗ್ರಹ ಗರೆದು ಪೊರೆದೆನೆಂಬ ಬಿರುದು
ಲೋಕದಿ ಮೆರೆದು ಸಾರುತಲಿದೆ
ಪರಮಹಂಸ ಗುರು || ೨ ||
ಶ್ರೀಶಕೇಶವಿಠ್ಠಲನ ಕರುಣಾವಿಲಾಸ
ದಿ ಸುಖಿಸುವರೀ ಸಮಯದಲೆನ್ನ
ದೋಷ ವಿಚಾರಿಸದೆ ಮಮತೆಯಿಂದ
ಪೋಷಿಪರೆಂದರಿದೆ ಕಂಡ ಕಡಿ
ಆಶೆಯಿಂದಲೆ ಬರಿದೆ ಚರಿಸಲು ಉ
ದಾಸಿಸದೆಲೆ ಪೊರೆದು ಸುಕೃತ || ೩ |
****
No comments:
Post a Comment