Monday, 18 November 2019

ಸಂಸಾರದೊಳು ಸಾರದಾವುದು ಸಾರದಾವುದಯ್ಯ ankita prasannavenkata

by ಪ್ರಸನ್ನವೆಂಕಟದಾಸರು
ಸಂಸಾರದೊಳು ಸಾರದಾವುದು ಸಾರದಾವುದಯ್ಯ ಸುಖತೀರಥಗುರುಸಾರಿದ ಮತಸೇರಿ ತತ್ವ ವಿಚಾರಿಸದೆ ಪ.

ದಾವಕಾಲಕೆದಾವಧರ್ಮವುಈ ವಿಚಾರದಿ ಜೀವಿಸುತ ಮತ್ತಾವ ತರತಮ ಭಾವದಲಿ ರಾಜೀವನೇತ್ರನ ಭಾವಿಸದೆ 1

ಇಂದಿರಾಧವಗೆಂದು ಆತ್ಮಗೆಹೊಂದಿಸದೆ ಸ್ವಾನಂದ ಬಯಕೆಗೆಇಂದುನಾಳೆಗೆ ಎಂದು ಅಲಸದೆತಂದೆ ಕೃಷ್ಣಗೆ ವಂದಿಸದೆ 2

ತನ್ನಗುರುಮತಿ ಸನ್ಮತದಿ ತಾಧನ್ಯನಾಗಿ ಚಿನ್ಮಯ ಪ್ರಸನ್ನವೆಂಕಟ ಎನ್ನಯ್ಯನವರಪೀಯೂಷವುಣ್ಣದ3
******

No comments:

Post a Comment