Sunday, 17 November 2019

ಶರಣು ಶುಭಾಮಲಕಾಯ ಋಜುಗಣಾ ankita prasannavenkata

by ಪ್ರಸನ್ನವೆಂಕಟದಾಸರು
ಶರಣು ಶುಭಾಮಲಕಾಯ ಋಜುಗಣಾಭರಣಾನಂದ ಮುನಿರಾಯಹರಿಗುಣಗಣವಾರಿಧಿಮಗ್ನನೆ ಜಯಪರಮಪದಜÕನೆ ಜಯತು ಸದಾ ಜಯ ಪ.

ಶುಕ್ಲರುಧಿರನಿರ್ಲಿಪ್ತ ಪರತತ್ವಕ್ಲುಪ್ತನೆ ತ್ರಿಜಗವ್ಯಾಪ್ತಅಕ್ಲೇಶಾನ್ವಿತ ಮಾಯಾಮನಹರಅಜÕಜನೋದ್ಧರ ಜಯತು ಸದಾ ಜಯ 1

ಶಲ್ಯರಾಜನ ಭಟಹಾರಿ ಮಹಾವಾತ್ಸಲ್ಯಾಂಕಿತ ಸುಖಕಾರಿಬಾಲ್ಯತನದಿ ಜಗದ್ಗುರುವೆನಿಸಿದೆ ಕೈವಲ್ಯದಾಯಕ ಪ್ರಭು ಜಯತು ಸದಾ ಜಯ 2

ಸೂತ್ರಾರ್ಥದ ಧೀ ಮಾತ್ರದೇಹಿ ವಿಧಾತೃ ಜನಕ ಪದಪ್ರೇಮಪಾತ್ರಪೌತ್ರ ಪ್ರಸನ್ನವೆಂಕಟಪತಿ ಪೂರ್ಣವೇತೃ ನಂಬಿದೆ ಜಯತು ಸದಾ ಜಯ 3
*******

No comments:

Post a Comment