Friday, 15 November 2019

ಮಂಗಳಾನನ ರಂಗ ಕರುಣಾ ankita prasannavenkata

by ಪ್ರಸನ್ನವೆಂಕಟದಾಸರು
ಮಂಗಳಾನನ ರಂಗ ಕರುಣಾಪಾಂಗವೆಂಬ ಪತಂಗದಿಂದಘತುಂಗತಿಮಿರವಿಭಂಗ ಭಕ್ತರ ಇಂಗಿತವನೀವುದು ಪ.

ಮಾರನ ಮನೋಹರ ಮದ ಅಂಧಕಾರ ಕವಿಯಲು ಕ್ರೂರವಿಷಯವಿಕಾರ ಭವವೆಂಬಪಾರಾಂಬುಧಿಯೊಳು ದಾರಿದೊಡಕಿದೆ ನಾಆರೆನಾರದತಾತಕರುಣಾಳುತೋರಿ ನಿನ್ನಯಚಾರುಮೂರುತಿಯಘೋರಕಲುಷವಿದೂರಮಾಡುಮಂದರಧರಮುಕುಂದ1

ಪ್ರಿಯ ಮನಮುನಿಗೇಹಮಲೆತಇಂದ್ರಿಯಗಳಿಗೆ ಸಹಾಯವಾಗಿದೆಹೇಯವಿಲ್ಲದ ನಾಯಿಮನವೆನ್ನ ನೋಯನೋಯಿಸುತಿದೆಕಾಯಬೇಕೆಲೆಜೀಯಕರಿಮಕರಿಯ ಬಾಧೆಗೆ ಬಾಯಿ ತೆರೆಯೆ ಪೊರೆಯಬೇಕೆಂದು ಕೆಲದೆ ಎಸೆದಿರಲು ತಾಯಿಪಿತನಾರೆಂದು 2

ಮನ್ಮಥಪಿತಚಿನ್ಮಯಾತ್ಮಕಮುನ್ನಸಂಚಿತಘನ್ನಕರ್ಮವುಬೆನ್ನ ಬಿಡದು ದುರ್ಜನ್ನ ಸಂಗದಿ ಖಿನ್ನನಾದೆ ನಾಉನ್ನತಗುಣಪೂರ್ಣಎಂದೆಂದುನಿನ್ನ ದಾಸರನ್ನು ಕೂಡಿಸುಪನ್ನಗಾದ್ರಿ ಪ್ರಸನ್ನವೆಂಕಟರನ್ನ ಜಗಜೀವನ್ನ 3
******

No comments:

Post a Comment