Thursday, 14 November 2019

ಬುದ್ಧಿ ಧೃತಿಯೆಂಬ ನಾರೇರು ಶ್ರೀಮುದ್ದು ankita prasannavenkata

by ಪ್ರಸನ್ನವೆಂಕಟದಾಸರು
ಬುದ್ಧಿ ಧೃತಿಯೆಂಬ ನಾರೇರು ಶ್ರೀಮುದ್ದು ಕೃಷ್ಣನ ಒಲಿಸಿಕೊಂಡರು ಪ.

ಅಕ್ಕ ಬುದ್ಧಿವಂತೆ ತಂಗಿಗೆ ಬಲುನಿಕ್ಕರದಲಿ ಹಿತವಾಡಿದಳುಚಿಕ್ಕವಳೆಂದಂಜದೆÉ ಧೃತಿಯು ತಮ್ಮಕ್ಕನೊಳು ಬಡಿದಾಡಿದಳು 1

ಕಟ್ಟಲೆ ಮೀರಿ ಮಾತಾಡದಿರೆ ತಂಗಿಸಿಟ್ಟು ಬರುತಿದೆ ಕಾಡದಿರೆಕಟ್ಟಲೆ ಮೀರಿ ಮೊದಲೆ ನವೆದೆ ನಿನ್ನಕಟ್ಟಿನೊಳಗೆ ಸಿಕ್ಕಿ ಬಲು ದಣಿದೆ 2

ಒಗತನ ದಾರದೆ ಸಣ್ಣವಳೆ ನೀಜಗಳಕ್ಕೆ ನಿಂತೆ ದೊಡ್ಡೆದೆಯವಳೆನಗೆಗೇಡು ಮಾಡಿಕೊಂಡೆಲೆಯಕ್ಕ ನಿನಗೊಗತನ ನನ್ನಿಂದ ತಗಲಕ್ಕ 3

ಹರಿನಿನಗೆ ದಕ್ಕಿದನೆಂದು ಉಣ್ಣದುರಿಯಬೇಡೆಲೆ ತಂಗಿ ಹೋಗಿಂದುಅರಸ ದಕ್ಕುವನೆ ಇನ್ನಾರಿಗೆ ಅಕ್ಕಕಿರುಕುಳು ಮಾತ್ಯಾಕೆ ಹಿರಿಯಳಿಗೆ 4

ನನ್ನ ಹಿರಿಯತನ ಕೆಣಕಿದ್ಯಲ್ಲೆನನ್ನ ಕಣ್ಣ ಮುಂದೆ ನಿನ್ನೆ ಬಂದವಳೆಹುಣ್ಣಿಮೆ ಚಂದ್ರ ದಿನಕೆ ಹಿರಿಯ ಜಗಮನ್ನಣೆಗೆ ಬಾಲಚಂದ್ರನಲ್ಲೆ 5

ಪಟ್ಟ ನನ್ನದು ಮೊನ್ನೆ ಬಂದವಳೆ ನಿನ್ನದಿಟ್ಟತನವನೇನ ಹೇಳಲೆಕೃಷ್ಣ ನಿನಗೆ ದೂರನಲ್ಲೆ ಅಕ್ಕ ಹರಿಯಗುಟ್ಟಿನ ಮೋಹವೆ ನನಗೆ ಅಕ್ಕ 6

ತಂಗಿ ಮನವ ನೋಯಿಸ್ಯಾಡದಿರೆ ಶ್ರೀರಂಗನೆನಗೆರವು ಮಾಡದಿರೆಮಂಗಳ ಮಹಿಮ ಮುರಾರಿಯ ಅರ್ಧಾಂಗಿಯೆ ನಾ ನಿನಗೆ ಸರಿಯೆ 7

ಹಿರಿಯ ಕಿರಿಯಳಲ್ಲ ಸರಿ ಹೇಳೆಹರಿಗೆರವಿನ ಮಾತಿಲ್ಲಖರೆಕೇಳೆಪರಮಪುರುಷ ವಾಸುದೇವನೆ ಕೊಟ್ಟವರಕೆಂದು ತಪ್ಪದೆ ಕಾವನೆ 8

ಕನ್ಯೆ ಲಕ್ಷುಮಿಯ ರಮಣನೆ ಸ್ವಾಮಿತನ್ನ ನಂಬಿದವರ ಹೊರೆವನೆಪುಣ್ಯ ಗೋಪೀಜನಜಾರನೆ ಪ್ರಸನ್ನವೆಂಕಟಪತಿ ಧೀರನೆ 9
*********

No comments:

Post a Comment