Tuesday, 12 November 2019

ದಯಮಾಡು ದಯಮಾಡು ಶ್ರೀನಿವಾಸ ankita prasannavenkata DAYAMAADU DAYAMAADU SRINIVASA,

Audio by Vidwan Sumukh Moudgalya

ಶ್ರೀ ಪ್ರಸನ್ನವೆಂಕಟದಾಸರ ಕೃತಿ

 ರಾಗ : ರೀತಿಗೌಳ             ತಾಳ : ಖಂಡಛಾಪು 

ದಯಮಾಡು ದಯಮಾಡು ಶ್ರೀನಿವಾಸ  ಭವ
ಭಯ ನಿವಾರಣ ಭಜಕಭಕ್ತರಘನಾಶ  ॥ಪ॥

ನೇಮವೆನ್ನಲಿಲ್ಲ ನಾಮಧರಿಕೆಯಿಲ್ಲ
ನಾ ಮಹಾ ಪಾಪಿಯು ಸ್ವಾಮಿ ನೀನೊಲಿದು ಗಡ ॥೧॥

ಸದ್ಧರ್ಮ ಸರಕಿಲ್ಲ ಶುದ್ಧ ಬುದ್ಧಿಯಿಲ್ಲ 
ಉದ್ಧರಿಸು ಎನ್ನ ಅನಿರುದ್ಧ ಹರಿ ಕರುಣಿ
ಸತ್ಕುಲ ಹೊಂದೇನು ಸತ್ಕರ್ಮ ಮಾರ್ಗಿಲ್ಲ 
ಭಕ್ತರಕ್ಷಕ ಪಾಪ ಮುಕ್ತ ದೇವರ ದೇವ  ॥೨॥

ಅವಗುಣದ ಎಣಿಕೆಯ ವಿವರ ನೋಡದೆ ಅಯ್ಯ
ಜವನ ಬಲೆಯನು ತಪ್ಪಿಸುವ ಸರೀಸೃಪ ಶಯ್ಯ
ಅಜಾಮಿಳ ವ್ಯಾಧ ಆ ಗಜ ಅಹಲ್ಯೋದ್ಧಾರ 
ನಿಜ ಪ್ರಸನ್ನವೆಂಕಟೇಶ ಸುಜನ ಪರಿಪೋಷ ॥೩॥
*********

by ಪ್ರಸನ್ನವೆಂಕಟದಾಸರು
ದಯಮಾಡು ದಯಮಾಡು ಶ್ರೀನಿವಾಸ ಭವಭಯ ನಿವಾರಣ ಭಜಕ ಭಕ್ತರಘನಾಶ ಪ.

ನೇಮವೆನ್ನಲಿಲ್ಲ ನಾಮದರಿಕೆಯಿಲ್ಲನಾ ಮಹಾಪಾಪಿಯು ಸ್ವಾಮಿ ನೀನೊಲಿದು ಗಡ 1

ಸದ್ಧರ್ಮ ಸರಕಿಲ್ಲ ಶುದ್ಧ ಬುದ್ಧಿಯಿಲ್ಲಉದ್ಧರಿಸೆನ್ನನಿರುದ್ಧಹರಿಕರುಣಿ2

ಸತ್ಕುಲ ಹೊಂದೇನು ಸತ್ಕರ್ಮ ಮಾರ್ಗಿಲ್ಲಭಕ್ತರಕ್ಷಕ ಪಾಪಮುಕ್ತ ದೇವರ ದೇವ 3

ಅವಗುಣದೆಣಿಕೆಯ ವಿವರ ನೋಡದೆ ಅಯ್ಯಜವನ ಬಲೆಯನು ತಪ್ಪಿಸುವ ಸರೀಸೃಪಶಯ್ಯ4

ಅಜಾಮಿಳವ್ಯಾಧಆಗಜಅಹಲ್ಯೋದ್ಧರನಿಜ ಪ್ರಸನ್ವೆಂಕಟೇಶಸುಜನಪರಿಪೋಷ5
*******

No comments:

Post a Comment