Monday, 18 November 2019

ಸುರರಾಜಪೂಜಿತರಾಜ ಪಂಕೇಜಸಖ ankita prasannavenkata

by ಪ್ರಸನ್ನವೆಂಕಟದಾಸರು
ಸುರರಾಜಪೂಜಿತರಾಜ ಪಂಕೇಜಸಖ ಶತತೇಜ ಪ.

ಶ್ರೀನುತ ಶ್ರೀನಿಧಿ ದೀನ ದಯಾನಿಧಿಜ್ಞಾನವಿಹೀನನ ನೀನೆಪೊರೆ1

ಜೀಮೂತಶಾಮಲ ರಾಮ ಶುಭಾಮಲನಾಮನೆ ಸಾಮಜಸ್ವಾಮಿ ಸಲಹು 2

ದೋಷವಿನಾಶ ಪರೇಶಾಮರೇಶನೆಶೇಷವರಾಸನ ಕೇಶವನೆ ನಮೊ 3

ದೂಷಕ ಭೀಷಣ ದಾಸ ವಿಪೋಷಕತೋಷ ವಿಕಾಸ ವಿಹಾಸ ಜಯತು 4

ಪಶುಪತಿವಿಷಹರ ಶಶಿನಿಭದಶನಪ್ರಸನ್ನವೆಂಕಟೇಶ ಕರುಣಾಶರಧಿಹರಿ5
*******

No comments:

Post a Comment