Sunday, 10 November 2019

ಏನು ಭ್ರಮೆ ಮನುಜ ನಿನಗ್ಯಾಕೆ ಹರಿಭಟರಹಗೆ ankita prasannavenkata

by ಪ್ರಸನ್ನವೆಂಕಟದಾಸರು
ಏನು ಭ್ರಮೆ ಮನುಜ ನಿನಗ್ಯಾಕೆ ಹರಿಭಟರಹಗೆ ಪ

ರಮಾನಿನಿಯ ಸಂಗ ನರಕದೊಳು ಬಲುಭಂಗಪ.ಮಬ್ಬು ಮುಸುಕಿದ ಪರಿಯ ನಿಜಸತಿಯ ನೋಡದೆ ಮತ್ತೊಬ್ಬಳ ಕುಚಕೆ ಕಮಲವ ಹೋಲಿಸಿಕೊಬ್ಬು ಮೈಯವಳ ಸಖವಿಡಿದರದು ಮಹಾಶೋಕತಬ್ಬಿಬ್ಬುಗೊಳುತ ನಿರಯಂಗಳುಂಬೆ 1

ಇಂದುಮುಖಿಯಳ ಸಂಗ ಎನಗಿಂದು ಕೈಗೂಡಲೆಂದೊಬ್ಬ ಕುಂಟಣಿಗೆ ಧನವಿತ್ತೆ ನಿನ್ನಸಂದುಗಳ ಕಡಿದು ವೈತರಣಿ ಸಲಿಲದಿ ದೇಹಹೊಂದಿಸುವರುಂಟು ಕಾಲನ ಕುಂಟಣಿಗರು 2

ಚಿಕ್ಕಬಲೆಯರ ಕಂಡು ಚಂಚಲಿತನಾಗ್ಯವರವಕ್ರನೋಟದಿ ಹಲವು ಸನ್ನೆಯಿಂದತರ್ಕೈಸಬೇಕೆಂಬ ಲಂಪಟದಿ ತಪ್ತಾದಶರ್ಕರಾಯಸ ಸ್ತಂಭವಪ್ಪಿ ಪೊರಳೇಳುವೆ 3

ಹರಿದಾಸರಾಚಾರ ಕೇಳಲಸಿ ಪಳಿದೊರೆದುಒರಟು ಮಾತಿನ ಸರಕಲಾಯುಗಳಿದೆವಿರತಿಜ್ಞಾನಾನ್ವಿತರ ವೆರಸದಂಧಕನಾದೆತರಣಿಯೊಳು ಹೊಂಬುಳವು ಗರುವಿಸಿದ ತೆರದಿ 4

ಜಂಬುಕವು ಹರಿಯೊಡನೆ ಸರಸವಾಡಿದ ಪರಿಯೊಳಂಬುಜಾಕ್ಷನ ದಾಸನಿಂದೆ ಮಾಡಸಲ್ಲಕುಂಭಿಪಾಕಿನಿಯಲ್ಲಿ ಮರಳಿಸುವ ಭಯವರಿತುನಂಬು ಪ್ರಸನ್ವೆಂಕಟೇಶನಂಘ್ರಿಯ 5
*********

No comments:

Post a Comment