Friday 15 November 2019

ಮಂಗಳಾರತಿಯ ತಂದೆತ್ತಿರೆ ಹೇಮಾಂಗನೆ ankita prasannavenkata

by ಪ್ರಸನ್ನವೆಂಕಟದಾಸರು
ಮಂಗಳಾರತಿಯ ತಂದೆತ್ತಿರೆ ಹೇಮಾಂಗನೆಯರು ವೆಂಕಟಪತಿಗೆ ಪ.

ಪೊಂಗಿಂಡಿಯುದಕ ಕಂಗಳಿಗೊತ್ತಿ ಪೊಸಬಗೆರಂಗು ಮಾಣಿಕದಕ್ಷತೆಯನಿಟ್ಟುಪೊಂಗಂಕಣ ಪೊಳೆವಿನ ಪ್ರಭೆಯಲಿ ಮರಿಭೃಂಗಕುಂತಳೆಯರೆಡಬಲದಿ 1

ಅನುದಿನಮಂಗಳ ಮನಸಿಜನಯ್ಯಗೆವನಮಾಲಿ ಕೌಸ್ತುಭಹಾರನಿಗೆಘನಮಹಿಮೆಯ ಜಗ( ದ?) ವರಿಗೆ ತೋರುವನಿಗೆಮುನಿ ಸನಕಾದಿ ವಂದಿತ ಪಾದಗೆ 2

ವಿಕ್ರಮಕೆ ಎದುರಾರಿಲ್ಲವೆಂದುಬಲಿಚಕ್ರನು ಸುರರ ಬಾಧಿಸುತಿರಲುಶಕ್ರನ ಪೊರೆದವನುಕ್ಕ ತಗ್ಗಿಸಿ ತ್ರಿವಿಕ್ರಮನೆನಿಸಿದ ದೇವನಿಗೆ 3

ವ್ರಜದ ಗೋಪಾಂಗನೆಯರ ಮನೋಹರಗೆಭುಜಗಶಾಯಿ ಭಕ್ತ ಭಯದೂರಗೆನಿಜ ಭಕ್ತ ಪಾರ್ಥರ ಪಥಿಕರಿಸಿದವನಿಗೆಗಜವನುದ್ಧರಿಸಿದ ದನುಜಾರಿಗೆ 4

ಕಡುಮೂರ್ಖ ಸೀತಾಕೃತಿಯನೊಯ್ದಸುರನಬಿಡದೆ ಮರ್ದಿಸಿದ ಶ್ರೀ ರಘುಪತಿಗೆಸಡಗರದಲಿ ಶೇಷಾದ್ರಿಲಿ ನಿಂತ ಎನ್ನೊಡೆಯ ಪ್ರಸನ್ನವೆಂಕಟಪತಿಗೆ 5
*********

No comments:

Post a Comment