by ಪ್ರಸನ್ನವೆಂಕಟದಾಸರು
ಎಷ್ಟು ಸುಖಿಗಳೊ ಗೋವು ಗೊಲ್ಲತಿ ಗೋಪರು ಶ್ರೀಕೃಷ್ಣನೊಡನೆ ಹಗಲಿರುಳು ಕ್ರೀಡೆಯಲಿ ಕಾಲವ ಕಳೆವರು ಪ.
ಕೋಹೋ ಕೋಹೋ ತೃವ್ವೆ ತೃವ್ವೆ ಅಂಬೆ ಅಂಬೆ ಬಾರೆ ಎಂದುಮೋಹದಿಂದ ಕರೆಸಿಕೊಂಡು ಓಡಿ ಓಡಿ ಬಂದುಶ್ರೀಹರಿಯ ಹೆಗಲ ಮೇಲೆ ಗಳಗಳಿಟ್ಟುಕದಪುಕಂಠಲೇಹಿಸಿ ಮೊಗದಿರುದಿರುಹಿ ಸಿರಿನಖದಿಂ ತುರಿಸಿಕೊಂಬರು 1
ತುಡುಗನೆಂದು ತುಡುವಿಡಿದು ಅಡಿಗಡಿಗೆ ಅಪ್ಪಿ ಚುಂಬಿಸಿಪಿಡಿಪಿಡಿದು ಗೋಪಿಯಡಿಗೆ ಒಪ್ಪಿಸಿ ಒಪ್ಪಿಸಿಮಡದೆರೆಲ್ಲ ಮಧುವೈರಿಯ ಸಂಗ ಸೊಬಗಿಲೋಲಾಡುತಲಿಒಡನೊಡನೆ ಗೋಪಾಲ ಮೂರುತಿಯ ಕಣ್ಣುಮನದಲಿಟ್ಟು ಸುಖಿಪರು 2ಸಣ್ಣವರಾಡಲೊಲ್ಲೆನೆನಲು ಗದ್ದವಿಡಿದು ಮುದ್ದಿಸಿ ನಮ್ಮಣ್ಣ ತಮ್ಮಗಳಿರಾ ಗೆಳೆಯರಿರಾ ಬನ್ನಿರೆಂದುಅಣ್ಣೆಕಲ್ಲೊಡ್ಡಿ ಗಜಗವಾಡಿ ಸೋಲಿಸಿಕೊಂಡಳುವಚಿಣ್ಣರ ಮನ್ನಿಪ ಪ್ರಸನ್ವೆಂಕಟೇಶನ ಉಣ್ಣುವೆಂಜಲಸೆಳೆದುಂಬುವರು 3
*******

No comments:
Post a Comment