Thursday, 14 November 2019

ಭಕ್ತವತ್ಸಲನಹುದೊ ವೆಂಕಟರೇಯ ankita prasannavenkata

by ಪ್ರಸನ್ನವೆಂಕಟದಾಸರು
ಭಕ್ತವತ್ಸಲನಹುದೊ ವೆಂಕಟರೇಯಭಕ್ತವತ್ಸಲನಹುದೊ ಪ.

ಕರಿಯ ಮೊರೆಯನರಿದು ಸಿರಿಯಜರಿದುಗರುಡನ ಕರೆಯದೆ ಭರದೊಳರಿಯಿಂದರಿ ಬಾಯ ಮುರಿಗೆಯ ಹರಿದ್ಯೆಂದುನಾರದಾದ್ಯರು ನಿನ್ನ ಬಿರುದು ಸಾರುವರೊ 1

ಅಂಬುಜಾಂಬಕನಂಬಿದೆನೆಂಬೆ ದಯಾಂಬುಧಿಹರಿನಿನ್ನಿಂಬುದೋರೆ ನಲವಿಲಂಬಲದಿ ಕಂಬದಿ ಬಿಂಬಿಸಿ ಡಂಬನಡಿಂಬವ ಬಿಗಿದೆ ಪೀತಾಂಬರಧರನೆ 2

ಚಿನ್ನ ತನ್ನ ತಾತನ್ನ ಜರಿದವನನ್ನವನುಣ್ಣದೆ ನಿನ್ನ ಬಣ್ಣಿಸಲವನುನ್ನತ ಭಕುತಿಗೆ ಮನ್ನಿಸಿ ಪೊರೆದೆ ಪ್ರಸನ್ನವೆಂಕಟರನ್ನ ಮೋಹನ್ನ 3
*******

No comments:

Post a Comment