Monday, 11 November 2019

ತಲ್ಲಿಕಾರರು ನಿನ್ನ ಬಂಟರು ರಂಗ ankita prasannavenkata

by ಪ್ರಸನ್ನವೆಂಕಟದಾಸರು
ತಲ್ಲಿಕಾರರು ನಿನ್ನ ಬಂಟರು ರಂಗನಿಲ್ಲಲೀಸರು ಸಂಸಾರಿಗಳನು ಕೃಷ್ಣ ಪ.

ಮಳ್ಳಿದರಾಗಿ ಮಾತಾಡಿ ಬಲುಂಡುಟ್ಟುಇಲ್ಲದ ತಪ್ಪನೆಣಿಸಿ ಹೊರಿಸಿಸುಳ್ಳುಕಳವು ಹಾದರದ ಪಾಪಭವಬಳ್ಳಿಯ ಹರಿದು ಮೊಳೆಯನೊತ್ತಗೊಡರು 1

ಕಾಂಚನವಿಡಿದು ಕಕ್ಕಸಬಟ್ಟು ಪೂರ್ವದಸಂಚಿತದಿ ನರಪಶುಗ್ರಾಸದಮುಂಚುವ ಬಣವೆಗೆ ಕಿಚ್ಚಿಕ್ಕಿ ಹುಡಿದೂರಿಪಂಚಾನನಂತೆ ಖೋ ಇಟ್ಟು ಕೂಗುವರು 2

ಇದಿರೆದ್ದು ಕರೆದು ಮನ್ನಿಸಿ ಪೂಜಿಸಿಪಾದೋದಕ ಪ್ರೋಕ್ಷಿಸಿಕೊಂಡು ಮರೆಹೊಕ್ಕರೆಬದಿಯ ಸಂಪದ ಬಂದ ಕಬ್ಬು ಬಾಳೆÉ ನೆಲ್ಲುಗದ್ದೆಯ ಸಂಹರಿಸುವರುಪಕಾರಿಗಳು 3

ಛಲದಿ ಮಂದಿರ ಹೊಕ್ಕು ಹರಿಸೇವೆ ಗೊಂದಣಗಳಲಿ ಬೇಡಿ ಚಾಮುಂಡೆರೋಡಿಸಿಹೊಲ ಮನೆ ಮಧ್ಯದ ಪಾಮರರ ಹಿಡಿ ತಂದುಬಲು ಕಾಸಿಸಿ ಮುದ್ರೆಯೊತ್ತದೆ ಬಿಡರು 4

ಈಪರಿಭವಸುಖಸೂರ್ಯಾಡಿಎಳೆದೊಯ್ದುಶ್ರೀಪದಪುರದಿ ಸೆರೆಯಿಕ್ಕುವರುಶ್ರೀಪ್ರಸನ್ವೆಂಕಟಪತಿ ಮುಖ್ಯ ಪ್ರಾಣೇಶಈ ಪುಂಡರಿಗೆ ಹೇಳೊ ಇವರ ಸಾಕೆಂದು 5
******

No comments:

Post a Comment