Monday, 18 November 2019

ಸುಳಿದವನಾರಮ್ಮಯ್ಯ ಬೆಟ್ಟದಮೇಲೆ ankita prasannavenkata

by ಪ್ರಸನ್ನವೆಂಕಟದಾಸರು
ರಾಗ -  :  ತಾಳ -

ಸುಳಿದವನಾರಮ್ಮಯ್ಯ ಬೆಟ್ಟದಮೇಲೆ
ಹಳುವದೊಳಿಹ ತಿಮ್ಮಣ್ಣ ll ಪ ll

ವಾರೆದುರುಬಿಗೆ ಸಂಪಿಗೆಗೂಡಿ ವಿಹಗವ
ನೇರಿ ಬರುವನಕ್ಕ
ವಾರಿಜಾನನ ವಜ್ರ ಮಣಿದಂಥಾನಗೆ ಸೊಬ
ಗೇರಿದ ಹರಿ ಕಾಣಕ್ಕ ll 1 ll

ಅಡಿಗೊಮ್ಮೆ ಜೀಯಾ ಪರಾಕೆಂಬ ಸುರಮುನಿ
ಗಡಣದ ವೀರನಾರಮ್ಮ
ನುಡಿದರೆ ನುಡಿವ ನುಡಿಯದಿದ್ದರೊಲ್ಲದ
ಬೆಡಗಿನ ಮಹಿಮ ನೀರೆ ll 2 ll

ಮಕರಕುಂಡಲ ಶಂಖ ಚಕ್ರ ಕೌಸ್ತುಭ ಶಿರಿ
ಯುಕುತ ವಕ್ಷದವನಾವನೆ
ಅಖಿಳ ಜಗವ ತನ್ನ ಬಸುರಲಿ ಬಚ್ಚಿಟ್ಟ
ಸಖ ಶ್ರೀನಿವಾಸದೇವನೆ ll 3 ll

ಸಾಮಗಾನವನಾದರಿಪ ಶಾಮಲಾಂಗದ
ಕೋಮಲ ದಾರು ಹೇಳೆ
ವ್ಯೋಮಕಚಾಜಾದಿ ವಂದಿತಾನನಜನ
ಪ್ರೇಮವಾರಿಧಿ ನೋಡೆಲೆ ll 4 ll

ಸಿರಿ ಅಂಜನಾದ್ರಿಯೊಳಾವಾಗ ಮಂಗಳ
ಚರಿತನು ದಾರೆ ತಂಗಿ
ಮರೆಹೊಕ್ಕವರ ಕಾವ ಪರಸನ್ನವೆಂಕಟ
ವರದನ ನಂಬು ಬೇಗ ll 5 ll
***

ಸುಳಿದವನಾರಮ್ಮಯ್ಯ ಬೆಟ್ಟದಮೇಲೆಹಳುವದೊಳಿಹ ತಿಮ್ಮಣ್ಣ ಪ.

ವಾರೆದುರುಬಿಗೆ ಸಂಪಿಗೆಗೂಡಿ ವಿಹಗವನೇರಿ ಬರುವನಕ್ಕವಾರಿಜಾನನವಜ್ರಮಣಿದಂಥಾನಗೆ ಸೊಬಗೇರಿದಹರಿಕಾಣಕ್ಕ1

ಅಡಿಗೊಮ್ಮೆ ಜೀಯಾ ಪರಾಕೆಂಬ ಸುರಮುನಿಗಡಣದ ವೀರನಾರಮ್ಮನುಡಿದರೆ ನುಡಿವ ನುಡಿಯದಿದ್ದರೊಲ್ಲದಬೆಡಗಿನ ಮಹಿಮ ನೀರೆ 2

ಮಕರಕುಂಡಲಶಂಖ ಚಕ್ರಕೌಸ್ತುಭಶಿರಿಯುಕುತ ವಕ್ಷದವನಾವನೆಅಖಿಳಜಗವ ತನ್ನ ಬಸುರಲಿ ಬಚ್ಚಿಟ್ಟಸಖಶ್ರೀನಿವಾಸದೇವನೆ3

ಸಾಮಗಾನವನಾದರಿಪ ಶಾಮಲಾಂಗದಕೋಮಲದಾರುಹೇಳೆವ್ಯೋಮಕಚಾಜಾದಿ ವಂದಿತಾನತಜನಪ್ರೇಮವಾರಿಧಿ ನೋಡೆಲೆ 4

ಸಿರಿಅಂಜನಾದ್ರಿಯೊಳಾವಾಗ ಮಂಗಳಚರಿತನು ದಾರೆ ತಂಗಿಮರೆಹೊಕ್ಕವರಕಾವಪರಸನ್ನವೆಂಕಟವರದನ ನಂಬು ಬೇಗ 5
*******

No comments:

Post a Comment