Friday, 8 November 2019

ಎಚ್ಚರ ಮನವೇ ಯದುಪತಿಯನೆಚ್ಚದಿರು ankita prasannavenkata

by ಪ್ರಸನ್ನವೆಂಕಟದಾಸರು
ಎಚ್ಚರ ಮನವೇ ಯದುಪತಿಯನೆಚ್ಚದಿರು ಚೋಹದನಿಕೆ ತನುವ ಪ.

ವೇಳ ವೇಳಾಯು ವೃಥಾ ಹೋಯಿತೆಚ್ಚರಕಾಲಪಮೃತಿ ವೃಕ ಕೊಲುವೆಚ್ಚರಕೋಳು ಹೋಗುತದಲ್ಪ ಕೃತ ಪುಣ್ಯವೆಚ್ಚರನಾಲಿಗೆಯಲಿ ಸಿರಿನಾಥನೆಚ್ಚರ 1

ಸತಿಸದನಾತ್ಮಜಸ್ಥಿರವ್ಯರ ವೆಚ್ಚರತಿಥಿ ಪೂಜೆಗಳಲಿ ಸತ್ವರ ಎಚ್ಚರಪ್ರತಿದಿನ ತತ್ವದಿ ಪ್ರವೀಣನಾಗೆಚ್ಚರಾಹಿತಲ್ಪನ ಕೀರುತಿ ಹೊಗಳೆಚ್ಚರ 2

ಹರಿಭಟರೌಘದಿ ಹಿಂಗದಿರೆಚ್ಚರದುರಿತಭಯ ದಂದುಗದೆಚ್ಚರಪರಾಪರದ ವಚನವಟ್ಟಿಸದಿರೆಚ್ಚರಪರಿಪರಿ ಸದ್ವ್ವ್ರತ ಪಿಡಿದೆಚ್ಚರ 3

ಸಂತವರಿಯರನುಸರಣಿಗಳೆಚ್ಚರೇಕಾಂತ ಬೀರುವ ಗುರುಕೃಪೆಯೆಚ್ಚರಸಂತ್ಯಿರಲಾಗಿ ಶಾಂತಸರಕುಕೊಳ್ಳೆಚ್ಚರಕಂತುಪಿತನ ನಾಮ ಕಡೆಗೆಚ್ಚರ 4

ವಿಷಯಗತೇಂದ್ರಿಯವಿಡಿದಾಳುವೆಚ್ಚರಮೀಸಲು ವೈರಾಗ್ಯ ಮುರಿಯದೆಚ್ಚರಬಿಸಜನಾಭನ ಭಕ್ತಿ ಬಲಿದಿರುವೆಚ್ಚರಪ್ರಸನ್ನವೆಂಕಟಪತಿ ಪದದೆಚ್ಚರ 5
*******

No comments:

Post a Comment