Thursday, 14 November 2019

ಭಾಪು ಹರಿಮತಸ್ಥಾಪಿತನೆ ankita prasannavenkata

by ಪ್ರಸನ್ನವೆಂಕಟದಾಸರು
ಭಾಪು ಹರಿಮತನೆ ಪ.

ಭಾಪು ಹರಿಮತಸ್ಥಾಪಿತನೆ ಮೂರುರೂಪಿನಲಿ ಬಂದು ಶ್ರೀಪತಿಯು ಮೆಚ್ಚುವಾ ಪರಾಕ್ರಮ ವ್ಯಾಪಿಸಿದೆ ಭಾರತೀಪತೆ ತೇ ನಮೊ ಅ.ಪ.

ಆದಿಯಲಿ ಅಂಜನಾದೇವಿಯ ಮಂಗಳೋದರದಿ ಪುಟ್ಟಿ ಶ್ರೀದ್ಯುಮಣಿಕುಲಮೇದಿನೀಶನ ಪಾದಕೆರಗಿ ಅಂಬೋಧಿದಾಟ್ಯಾಜÕದಿಆ ದಶಾಸ್ಯನ ಲಂಕಾ ದಹಿಸಿ ಜಾನಕೀದೇವಿಯ ಸುದ್ದಿ ಶ್ರೀಧರಗರುಹಿಯೋಧ ಬಾಧಿತರಾದ ಕಪಿಚೇತನದಾಯಕ ತೇ ನಮೊ 1

ತುಂಗಗಿರಿ ಶತಶೃಂಗಕೃತ ಸುವಜ್ರಾಂಗ ಅಗ್ನಿಜಾಸಂಗಮತ್ತನೃಪಂಗಳನು ಭುಜದಿಂ ಗೆಲಿದು ಯಜÕ ಸಂಗ್ರಹವ ಪೂರಿಸಿಸಂಗಡಿಸಿದರಿ ಸಂಗರವ ಪೊಕ್ಕುಸಿಂಗಗರ್ಜನೆಯಿಂ ಗದೆಯ ಕೊಂಡುಭಂಗಿಸಿದೆಯೊ ಯುಗ್ಮಾಂಗ ಕೃಷ್ಣ ಸೇವಾಂಗೀಕೃತ ತೇ ನಮೊ 2

ತುಚ್ಛರಿಳೆಯೊಳು ಪೆಚ್ಚಿ ಬಗೆ ಬಗೆಕುಚ್ಛಿತಾರ್ಥ ವಿರಚ್ಚಿಸ್ಯಾತ್ಮಗೆಅಚ್ಚುತೈಕ್ಯವ ಉಚ್ಚರಿಸುತಿರೆ ಸ್ವಚ್ಛ ಯತಿರೂಪದಿಮಚ್ಚರಿಪರನು ಕೊಚ್ಚಿ ತಂತ್ರಸಾರಾರ್ಚನೆಯಭೇದ ನಿಶ್ಚೈಸಿದೆ ಶಿರಿಸಚ್ಚಿದಾತ್ಮ ಶ್ರೀವತ್ಸ ಪ್ರಸನ್ವೆಂಕಟೇಚ್ಛಮತ ತೇ ನಮೊ 3
*******

No comments:

Post a Comment