Saturday 16 November 2019

ವಂದಿಸಿದರೆ ವಂದ್ಯರು ಪೂಜಿತರು ಮುಕುಂದ ankita prasannavenkata

by ಪ್ರಸನ್ನವೆಂಕಟದಾಸರು
ವಂದಿಸಿದರೆ ವಂದ್ಯರು ಪೂಜಿತರು ಮುಕುಂದಗೋವಿಂದ ಶ್ರೀಹರಿಯನ್ನುಎಂದೆಂದು ಕುಂದದಾನಂದವೈದಿಸುವಇಂದಿರೆಯರಸ ಭವಬಂಧಮೋಚಕನ ಪ.

ಹತ್ತಶ್ವಮೇಧಾವಭೃಥಸ್ನಾನ ಮಾಡಲುಮತ್ರ್ಯರ್ಗೆ ಪುನರ್ಜನ್ಮಗಳಿಲ್ಲವೊಸತ್ಯಭಾಮಾಧವನಿಗೆ ನಿಷ್ಕಾಮದಿ ನಮಿಸಿಮತ್ತೊಮ್ಮೆ ನಮಿಸೆ ಮುಕ್ತಿಗೆ ಸಾಧನ 1

ಕೋಟಿಸಹಸ್ರ ತೀರ್ಥಗಳಲಿ ಮಿಂದುಕೋಟಿಸಹಸ್ರ ವ್ರತಗಳಾಚರಿಸೆಕೋಟಿ ಭಾಂತಕಗೆ ನಮಿಸಿದ ಫಲಕೆ ಸರಿ ಪಾಸಟಿಷೋಡಶಕಳೆಯೊಳೊಂದಲ್ಲ2

ಹೇಳೆನೆ ಇಂದಾದರು ನಮಿಸಿ ಶ್ರೀಲೋಲಶಾಙ್ರ್ಗಪಾಣಿಯನಸಾಲು ಜನ್ಮದಘವ ಹಾಳುಮಾಡಿ ಮುಕ್ತಿಓಲಗಕೆ ಕರೆವ ವೈಷ್ಣವ ಜನರ 3

ಉರಶಿರದೃಷ್ಟಿಲಿ ಮನವಾಚದಲಿಚರಣಕರಗಳಲಿ ಜಾನುಗಳಲಿಧರೆಯಲಿ ಅಷ್ಟಾಂಗಪ್ರಣಾಮ ಮಾಳ್ಪರ್ಗೆಹರಿದು ಹೋಗೆ ಪಾಪವರ ಮುಕ್ತಿಈವ4

ಸರುವಾಂಗವ ಧರೆಗೊಂದಿಸಿ ಭಕುತಿಲಿಹೊರಳಾಡಿ ಭೂಮಿಲಿ ಪರವಶದಿಹರಿಗೆ ನಮಿಸಲು ಮೈಗೊರೆದ ಧೂಳಿಯ ಕಣಾಪರಿಮಿತ ಸಹಸ್ರಾಬ್ದ ಪರಮಾಣ ಪದವಕ್ಕು 5

ಸಿರಿಅಜಭವೇಂದ್ರಸುರರುಮಹಾಮುನಿನಿಕರನೃಪಮನುಜೋತ್ತಮರೆಲ್ಲಪರಮಭಕುತಿಲಿ ನಮಿಸೆ ಹರಿವಶನಾಗುವಹರಿಜನಕೆ ಮುಕ್ತಿಪಥಕಿದೆ ಪಾಥೇಯ 6

ಅರ್ಚಿತ ಕೃಷ್ಣನ ನೋಡುತಾನಂದಾಶ್ರುಹುಚ್ಚನಂತೆ ನಮಿಸಿ ನಗುತ ಸುರಿಸಿಅಚ್ಯುತಾನಂತ ಸದ್ಗುಣನಿಧಿ ಭಕ್ತಪ್ರಿಯನಿಚ್ಚಪ್ರಸನ್ವೆಂಕಟನೆಂದುಚ್ಚರಿಸಿ7
*********

No comments:

Post a Comment