Tuesday, 12 November 2019

ದಾಟುವೆನೆಂದರೆ ದಾಟು ಹೊಳೆಯು ankita prasannavenkata

by ಪ್ರಸನ್ನವೆಂಕಟದಾಸರು
ದಾಟುವೆನೆಂದರೆ ದಾಟು ಹೊಳೆಯು ಕೈಟಭಾಂತಕ ಭಟರಿಗೆ ಭವಜಲವು ಪ.

ಪೂರ್ವಯಾಮದಿ ಹರಿಗುಣಕರ್ಮನಾಮನಿರ್ವಚನದಿ ಕೀರ್ತನೆ ಮಾಡುವ ಮಹಿಮಉರ್ವಿಯ ಮೇಲಿದ್ದು ಒಲಿಸಿಕೊಂಡನು ಸುರಸಾರ್ವಭೌಮನ ಸೀತಾರಾಮನ 1

ಜಲದಲಿ ಮಿಂದೂಧ್ರ್ವ ತಿಲಕಿಟ್ಟು ನಲಿದುತುಲಸಿಕುಸುಮಗಂಧ ಅಗ್ರದ ಜಲದಿನಳಿನೇಶನಂಘ್ರಿಗರ್ಪಿಸಿ ಸಹಸ್ರನಾಮಾವಳಿಯಿಂದ ಧೂಪದೀಪಾರತಿ ಬೆಳಗಿ 2

ಪರಮಾನು ಯೋಗಾವಾಹನೆ ವಿಸರ್ಜನೆಯುಸ್ಮರಣೆ ವಂದನೆ ಪ್ರದಕ್ಷಿಣೆ ನರ್ತನವುವರಗೀತಪಠಣೆ ಭಾಗವತಾ ಶ್ರವಣವುತ್ವರಿಯದಿ ಭೂತಕೃಪೆಯಲ್ಲಿ ಮನವು 3

ಗುರುಪಾದಪದ್ಮದಿ ಬಲಿದು ವಿಶ್ವಾಸಗುರುಕೃಪೆಯಿಲ್ಲದ ಪುಣ್ಯ ನಿಶ್ಯೇಷಗುರುಬೆನ್ನಟ್ಟಿದ ಕರಿಗಡ್ಡಹಾಸ ಹಾಸಗುರುಗಳ ಮರೆದು ಕಳೆಯನೊಂದುಶ್ವಾಸ4

ಈಪರಿಹರಿಪುರ ದಾರಿಯ ತೊಲಗಿಕಾಪುರುಷರುಭವಮಡುವಲಿ ಮುಳುಗಿಆಪತ್ತು ಪಡುವರ ನೋಡಿ ಬೆರಗಾಗಿಶ್ರೀ ಪ್ರಸನ್ವೆಂಕಟಪತಿ ನಕ್ಕನಾಗಿ 5
********

No comments:

Post a Comment