Monday 18 November 2019

ಸಂಗವಿಡಿಸು ರಂಗಾ ವಿಬುಧರಹಿಂಗದೆ ankita prasannavenkata

by ಪ್ರಸನ್ನವೆಂಕಟದಾಸರು
ಸಂಗವಿಡಿಸು ರಂಗಾ ವಿಬುಧರಹಿಂಗದೆ ನಿನ್ನಯ ನಾಮ ಪಾಡ್ವ ಭಕುತರ ಪ.

ಸಂಗವಿಡಿಯೆಭವಹಿಂಗುವ ಲೆಕ್ಕದಅಂಗವಣೆಯನರಿತಂಗವಿವೇಕದಿಲಿಂಗವಪುವಿಭಂಗ ವಿಚಾರಕೆರಂಗಿ ವಿಷಯಭಯ ನುಂಗುವರ 1

ಹರಿದಿನ ನಿಶಿಜಾಗರದ್ಯಶನಂಗಳಮರೆದಂಬುಜಾಕ್ಷನ ಬಿರುದೊಕ್ಕಣಿಸುತಮರುದಂಶರ ಮತವರಿದಿತರಾಗಮಜರಿದುವಿರತಿಯಲಿ ಪಿರಿದಪ್ಪರ2

ಬೆನ್ನಬಿಡದೆ ಊರು ಬನ್ನವಬಡಿಸಲುತನ್ನ ವಿಮಲಮತಿಯನ್ನು ಬಿಸಾಡದೆಅನ್ಯವಧುವಿಗೆ ಬಿನ್ನವಿಸದೆ ಪಾವನ್ನವ ಮಾಳ್ಪ ಮಾನವರ 3

ಸರಿಸ ಸಮನಿಹ ಹರುಷಪಡೆನುತಲಿಸುರಸಂಪದಕೆ ಮನವಿರಿಸಿ ಪರಂಪರಾಅರಸಪದವಿ ಓಕರಿಸಿ ಪರೇಶನಸ್ಮರಿಸಿ ಪದಾಬ್ಜವ ಸ್ಮರಿಸಿಪ್ಪರ 4

ಅರಿಸಖರೊಳು ಸಮವೆರಸಿ ನೋಡುತಹರಿಯಿರಿಸಿದೊಲಂಗೀಕರಿಸಿ ನಿರಂತರಪರಸನ್ನ ವೆಂಕಟಗಿರೀಶ ನಾಮಾಸ್ತ್ರವಧರಿಸಿ ಸಂಸಾರವ ಉತ್ತರಿಸುವರ 5
*******

No comments:

Post a Comment