Saturday 16 November 2019

ವಿಠಲ ಎನ್ನನು ಕಾಯೊ ವಿಠಲ ಪಂಢರಿರಾಯ ankita prasannavenkata

by ಪ್ರಸನ್ನವೆಂಕಟದಾಸರು
ವಿಠಲ ಎನ್ನನು ಕಾಯೊ ವಿಠಲ ಪಂಢರಿರಾಯವಿಠಲ ಭಕ್ತವತ್ಸಲ ವಿಠಲಹರಿವಿಠಲ ಪ.

ದಿಟ್ಟ ಪುಂಡಲೀಕ ತನ್ನ ಪುಟ್ಟಿಸಿದವರ ಮನಮುಟ್ಟಿ ಪೂಜಿಸಲು ಚಿತ್ತಗೊಟ್ಟು ಬಂದೆಯೊ ವಿಠಲಬಿಟ್ಟು ಬರದಲೆ ಒಡನಿಟ್ಟಿ ನೀಡಲು ಚೆಲುವಇಟ್ಟಂಗಿ ಮ್ಯಾಲಂಘ್ರಿಪದ್ಮವಿಟ್ಟು ನಿಂತ್ಯಯ್ಯ ವಿಠಲ 1

ಕೊಟ್ಟ ಭಾಷೆಗೆ ಭಕ್ತರ ಕಟ್ಟಲಿ ಸಿಲುಕಿದೆಯೊ ಕಂಗೆಟ್ಟೆನೊ ಭವದಿ ನಿನ್ನಗುಟ್ಟುತೋರಯ್ಯ ವಿಠಲಪಟ್ಟಗಟ್ಟ್ಟ್ಯಜಭವರ ಕಟ್ಟಿಲೆ ಇದ್ದ ವೈಕುಂಠಪಟ್ಟಣ ಭೀಮಾತೀರದಿ ನಟ್ಟು ನಿಂತ್ಯಯ್ಯ ವಿಠಲ 2

ನೆಟ್ಟನೆ ವೇದವ ತಂದು ಬೆಟ್ಟವೆತ್ತಿ ಇಳೆಯ ಪೊತ್ತಿಸಿಟ್ಟು ತಾಳ್ದೆವಟುಖಳರೊಟ್ಟಿಲೊದ್ಯೈಯ್ಯ ವಿಠಲಕಟ್ಟಿದೆ ಕಡಲ ಜಗಜಟ್ಟಿ ಗೋಪ ಬೌದ್ಧ ಕಲಿಯಮೆಟ್ಟಿ ಆಳ್ದೆ ಪ್ರಸನ್ವೆಂಕಟ ಕೃಷ್ಣಯ್ಯ ವಿಠಲ 3
*******

No comments:

Post a Comment