Thursday, 14 November 2019

ಬಂದಕೋ ರಾಮಚಂದ್ರಬಂದನದಕೋ ankita prasannavenkata

by ಪ್ರಸನ್ನವೆಂಕಟದಾಸರು
ಬಂದಕೋ ರಾಮಚಂದ್ರಬಂದನದಕೋ ರಾಮಚಂದ್ರನವನಿಜೆಯ ಕಳುಹೆಂದರೆ ವಿಭೀಷಣನಕುಂದನುಡಿದಣ್ಣ ಪ.

ಲೆಂಕರೊಳೊರ್ವನು ಮಾಭುಂಕರಿಸಿ ವನದಿಶಂಕ ರಕ್ಕಸರಳಿದು ಲಂಕೆ ಉರುಹಿದಸಂಖ್ಯೆರಹಿತ ಪ್ಲವಗರಂಕಪಡೆಯೊಡನೆ ಬಹಪಂಕರುಹಮುಖಿ ಕೊಡೆನಲಹಂಕರಿಸಿದಣ್ಣ 1  

ಜೀವರಂತಲ್ಲಹರಿಸಾವು ರಚಿತ ನಿಮಗುಶಿವನ ಬಿಲ್ಮುರಿದ ಭಾವರಿವಿರಿನೀವು ರಕ್ಕಸರಾಕೆ ದೇವರರಸಿಯ ಬಯಸಲಾವರಿಸದೆನೆ ಕೊಲ್ಲಲಿ ಕಾವರಿಸಿದಣ್ಣ 2

ಅನುಜವಾಕ್ಯವಕೇಳಿದನುಜನುಗ್ರದಿ ಹುಲುಮನುಜ ಸರಿಯೇ ನನ್ನರಣಜಯಿಪನೆಇನಜಭವ ಶುಭಕಂಠಾಂಜನಿಜ ಜಾಂಬವ ಮುಖ್ಯರದನುಜಗ್ರಹಿಸದರಿವನೆನೆ ಜಡಧಿಯಣ್ಣ3

ವಿಧಿಯಲೇಖನ ನೋಡಿ ಕುದಿಯಲಾರ್ದಟ್ಟಿಹರುಸುಧೆಯೆ ವಿಷವೈ ಕ್ರೂರ ಹೃದಯಗೆನಲುಬದಿಯ ತಿವಿದೆಲೆ ಹೇಡಿ ಮದೀಯಾರಿ ಹೋಗೆನ್ನೆ ಅಂಬುಧಿಯಿಳಿದ ರಾಮಕುಶಲುದಯವೆಲ್ಲಣ್ಣ 4

ದೂಷಣೋಕ್ತಿಯಿಂ ಚಿಂತಾಕೃಶನಾಗಿ ರಾಮಪದದರ್ಶನಾಪೇಕ್ಷದಲಿ ವಿಭೀಷಣ ನಿಲುತಪ್ರಸನ್ನವೆಂಕಟರಾಮನಶನಿಶರಕಂಗನಗನುಸಿ ನುಗ್ಗಹುದು ಸತ್ಯ ಪುಸಿನುಡಿಯೆನಣ್ಣ 5
********

No comments:

Post a Comment