Monday, 18 November 2019

ಶ್ರೀತುಳಸಿ ಮಹಿಮೆಯನು ಪೊಗಳಲಳವಲ್ಲ ankita prasannavenkata

by ಪ್ರಸನ್ನವೆಂಕಟದಾಸರು

ಶ್ರೀ ತುಳಸಿ ಮಹಿಮೆಯದು ಪೊಗಳಲಳಿವಿಲ್ಲ ಶ್ರೀ
ನಾಥ ನಾರಾಯಣನ ಅರ್ಚನೆಗೆ ಸರ್ವದಾ
ಪ್ರೀತಿಕರಳಾಗಿ ರಾಜಿಪಳು ಕಲಿಯುಗದಲ್ಲಿ ನೋಂತವರ ಭಾಗ್ಯವೆಂತೊ ||ಪ||

ಶ್ರೀ ಮದಾರ್ಚಿತ ಕ್ಷೀರವಾರಿಧಿಯ ಮಥಿಸುತಿರೆ
ಆ ಮಹಾವಿಷ್ಣುವಿನ ನೇತ್ರದಿಂದಲಿ ಹೊರಟ
ಪ್ರೇಮಜಲದುದ್ಭವಿಸಿ ನಳನಳಿಸಿ ದಿವ್ಯ ಆಮೋದ ಪೂರ್ಣಳಾಗಿ
ಭೂಮಿ ಪಾವನವ ಮಾಡುತಲಿ ಭೂನಿರ್ಜರರ
ಧಾಮ ಧಾಮಗಳಲ್ಲಿ ವೃಂದಾವನದಿ ನೆಲೆಸಿ
ಕಾಮಿತ ಫಲನೀವ ಕಲ್ಯಾಣಿ ಕೃಷ್ಣನಿಗೆ ನೇಮದಿಂ ಪ್ರಿಯಳಾದ. || ೧ ||

ಈ ಮನುಜ ದೇಹದಲಿ ದಾವ ಪ್ರಾಣಿಯು ಪಿತೃ-
ಸ್ತೋಮವನ್ನುದ್ಧರಿಪೆನೆಂದರೆ ಸುಲಭ ಸಾಧ್ಯ
ಕೋಮಲ ದಳವನೊಂದು ತಂದು ಶ್ರೀ ಮಾಧವನ ಚರಣ ತಾಮರಸಕರ್ಪಿಸುವದು
ತಾ ಮುನ್ನ ಮಾಡಿದಘ ಪಂಚಕಗಳೋಡಿದವು
ಸಾಮಾನ್ಯವಲ್ಲ ತುಳಸಿಯ ವನವ ಸೋಂಕಿ ಬಂ
ದಾ ಮರುತದಿಂದ ದೇಶ ಗ್ರಾಮಗಳು ಪಾವನವು ಧೀಮಂತ ಮಾನ್ಯಳಾದ || ೨ ||

ತುಳಸಿ ನೆಳಲಲ್ಲಿ ಅಂಕುರಗಳೆದ್ದಲ್ಲಿ ಪಿತೃ-
ಗಳಿಗೆ ಅನ್ನವಿತ್ತರೆ ಕ್ಷಯಫಲವು ಊರ್ಧ್ವಪುಂಡ್ರ
ತಳದಮೃತ್ತಿಕೆಯಲಿಟ್ಟರೆ ಕೋಟಿ ತೀರ್ಥಗಳ ಮುಳುಗೆದ್ದ ಫಲ ಸಿದ್ಧವು
ನಿಲಯದಲಿ ಪತ್ರ ಮೃತ್ತಿಕೆ ಕಾಷ್ಠವಿರಲಲ್ಲಿ
ಕಲಿ ಮುಟ್ಟಲಂಜಿ ತೊಲಗುವನು ಮಣಿಸರಗಳನು
ಕೊರಳಲ್ಲಿರೆ ಕಲುಷ ಸಂಹರವು ಸಹ ನಿಜ ಸಲೆ ವಿಷ್ಣುಪದವಿಯನೀವ || ೩ ||

ಶತಸಾಸಿರಪರಾಧವಿರಲಿನ್ನು ಮೃತ್ತಿಕೆಲಿ
ಪಿತ ಕಾಯದವನಿಗೆ ಬಹುಜನ ನೋಡೆ ವಿಘ್ನಗಳ
ಸ್ಥಿತಿಯ ಗತಿಯುಡುಗಿ ದುಷ್ಟಗ್ರಹಗಳೆಲ್ಲನುಕೂಲಗತಿಯಾದ ಫಲವೀವವು
ಪ್ರತಿದಿನದಿ ನಿರ್ಮಾಲ್ಯಗಳ ಧರಿಸಿ ಹರಿಪಾದ ತೀ
ರ್ಥವೊಮ್ಮೆ ಸೇವಿಸಿದವರ ಮುಕ್ತಿ ಕರತಳವಕ್ಕು ಪತಿತಪಾವನಿ ಎನಿಸುವಾ || ೪ ||

ದರುಶನದಿ ಸ್ಪರುಶನದಿ ಧ್ಯಾನದಿಂ ಕೀರ್ತನಿಯು
ನಿರುತ ಪ್ರಣಾಮಗಳು ಸ್ತೋತ್ರದಾರೋಪಣಿಂ
ಪರಮಜಲ ಶೇಚನಾರ್ಚನ ನಿಷ್ಠೆಯಿಂದ ನವ ಪರೀಕ್ಷೆಯನು ಮಾಡಲು
ಹರಿಚರಣ ಕಮಲರತಿ ದೊರಕಿ ಯುಗ ಕೋಟಿ ಸಾ-
ಸಿರ ಕಾಲ ತಿರುಗಿ ಬಂದರೆ ಸತತ ಮಾಂಗಲ್ಯ
ಹರಿಯ ಮನೆಯಲ್ಲಿ ನಿಜ ಹರುಷವನ್ನುಂಬುವರು ಮುರಾರಿ ವರದಂತೆ ಪದವ || ೫ ||

ಒಂದೊಂದು ದಳ ಕೋಟಿ ಸ್ವರ್ಣಭಾರಕೆ ಮಿಗಿಲು
ಎಂದು ವಿಶ್ವಾಸದಲಿ ತಂದು ಸಾಸಿರನಾಮ
ದಿಂದ ಗೋವಿಂದಗರ್ಪಿಸಿದರಿಲ್ಲಿಹ ಭವದುಂದುಗವು ಮಾನುಷ್ಯರಿಗೆ
ಸುಂದರ ತುಲಸಿ ಮೂಲವನ್ನು ತೊಡಕಿರ್ದ ಕಳೆ
ಯಂದೆಗೆದು ಶಾಖೋಪಶಾಖದಿಂ ವೃದ್ಧಿಸಾ
ನಂದವಿತ್ತಾರ ನೂರೊಂದು ಕುಲ ಕೋಟೆಗಳ ನರಕವನು ಹೊಂದಲೀಸರು ಪುಣ್ಯವು || ೬ ||

ಶ್ರೀ ವಿಷ್ಣುವಲ್ಲಭೆಯ ಮೂಲದಲಿ ತೀರ್ಥಗಳು
ಬಾವನ್ನಗಂಧಿಯಳ ಮಧ್ಯದಲಿ ಸುರನಿಕರ
ಪಾವನಿಯಳಾ ಹರಿಯ ಕೊನೆಯಲಿ ಶ್ರುತಿ ಸಮೂಹ ಲಾವಣ್ಯ ಗುಣರಾಸಿಯು
ಭಾವಶುದ್ಧಿಯಲಿ ಉದಯದಿ ಸ್ಮರಿಸಿ ನಿರುತದಿ
ನಾವ ಕಾರ್ಯಕೆ ಗೆಲುವು ಇಹಪರದ ಸೌಖ್ಯವಿ
ತ್ತಾವ ಕಾಲಕ್ಕೆ ಹೊರೆವ ಪ್ರಸನ್ನವೆಂಕಟ ದೇವನಂಗ ದೊಳೊಪ್ಪುವಾ || ೭ ||
***

SrI tuLasi mahimeyadu pogaLalaLivilla SrI
nAtha nArAyaNana arcanege sarvadA
prItikaraLAgi rAjipaLu kaliyugadalli nOntavara BAgyavento ||pa||

SrI madArcita kShIravAridhiya mathisutire
A mahAviShNuvina nEtradindali horaTa
prEmajaladudBavisi naLanaLisi divya AmOda pUrNaLAgi
BUmi pAvanava mADutali BUnirjarara
dhAma dhAmagaLalli vRundAvanadi nelesi
kAmita PalanIva kalyANi kRuShNanige nEmadiM priyaLAda. || 1 ||

I manuja dEhadali dAva prANiyu pitRu-
stOmavannuddharipenendare sulaBa sAdhya
kOmala daLavanoMdu tandu SrI mAdhavana caraNa tAmarasakarpisuvadu
tA munna mADidaGa pancakagaLODidavu
sAmAnyavalla tuLasiya vanava sOnki ban
dA marutadiMda dESa grAmagaLu pAvanavu dhImanta mAnyaLAda || 2 ||

tuLasi neLalalli ankuragaLeddalli pitRu-
gaLige annavittare kShayaPalavu UrdhvapunDra
taLadamRuttikeyaliTTare kOTi tIrthagaLa muLugedda Pala siddhavu
nilayadali patra mRuttike kAShThaviralalli
kali muTTalanji tolaguvanu maNisaragaLanu
koraLallire kaluSha saMharavu saha nija sale viShNupadaviyanIva || 3 ||

SatasAsiraparAdhaviralinnu mRuttikeli
pita kAyadavanige bahujana nODe viGnagaLa
sthitiya gatiyuDugi duShTagrahagaLellanukUlagatiyAda PalavIvavu
pratidinadi nirmAlyagaLa dharisi haripAda tI
rthavomme sEvisidavara mukti karataLavakku patitapAvani enisuvA || 4 ||

daruSanadi sparuSanadi dhyAnadiM kIrtaniyu
niruta praNAmagaLu stOtradArOpaNiM
paramajala SEcanArcana niShTheyinda nava parIkSheyanu mADalu
haricaraNa kamalarati doraki yuga kOTi sA-
sira kAla tirugi bandare satata mAngalya
hariya maneyalli nija haruShavannuMbuvaru murAri varadante padava || 5 ||

ondondu daLa kOTi svarNaBArake migilu
endu viSvAsadali taMdu sAsiranAma
dinda gOvindagarpisidarilliha Bavadundugavu mAnuShyarige
sundara tulasi mUlavannu toDakirda kaLe
yandegedu SAKOpaSAKadiM vRuddhisA
nandavittAra nUroMdu kula kOTegaLa narakavanu hoMdalIsaru puNyavu || 6 ||

SrI viShNuvallaBeya mUladali tIrthagaLu
bAvannagandhiyaLa madhyadali suranikara
pAvaniyaLA hariya koneyali Sruti samUha lAvaNya guNarAsiyu
BAvaSuddhiyali udayadi smarisi nirutadi
nAva kAryake geluvu ihaparada sauKyavi
ttAva kAlakke horeva prasannavenkaTa dEvananga doLoppuvA || 7 ||
***

ಶ್ರೀತುಳಸಿ162

ಶ್ರೀ ತುಳಸಿ ಮಹಿಮೆಯನು ಪೊಗಳಲಳವಲ್ಲ ಶ್ರೀನಾಥ ನಾರಾಯಣನ ಅರ್ಚನೆಗೆ ಸರ್ವದಾಪ್ರೀತಿಕರಳಾಗಿ ರಾಜಿಪಳು ಕಲಿಯುಗದಲ್ಲಿ ನೋಂತವರಭಾಗ್ಯವೆಂತೊ ಪ .

ಶ್ರೀಮದಾರ್ಜಿತ ಕ್ಷೀರವಾರಿಧಿಯ ಮಥಿಸುತಿರೆಆ ಮಹಾವಿಷ್ಣುವಿನ ನೇತ್ರದಿಂದಲಿ ಹೊರಟಪ್ರೇಮಜಲದುದ್ಭವಿಸಿ ನಳನಳಿಸಿ ದಿವ್ಯ ಆಮೋದ ಪೂರ್ಣಳಾಗಿಭೂಮಿ ಪಾವನವ ಮಾಡುತಲಿ ಭೂನಿರ್ಜರರಧಾಮಧಾಮಗಳಲ್ಲಿ ವೃಂದಾವನದಿ ನೆಲಸಿಕಾಮಿತ ಫಲವನೀವ ಕಲ್ಯಾಣಿ ಕೃಷ್ಣನಿಗೆ ನೇಮದಿಂ ಪ್ರಿಯಳಾದ 1

ಈ ಮನುಜ ದೇಹದಲಿದಾವಪ್ರಾಣಿಯು ಪಿತೃಸ್ತೋಮವನ್ನುದ್ಧರಿಪೆನೆಂದರೆ ಸುಲಭ ಸಾಧ್ಯಕೋಮಲ ದಳವನೊಂದು ತಂದು ಮಾಧವನಚರಣತಾಮರಸಕರ್ಪಿಸುವದುತಾ ಮುನ್ನ ಮಾಡಿದಘ ಪಂಚಕಗಳೋಡಿದವುಸಾಮಾನ್ಯವಲ್ಲ ತುಳಸಿಯ ವನವಸೋಂಕಿಬಂದಾ ಮರುತದಿಂದ ದೇಶ ಗ್ರಾಮಗಳು ಪಾವನವುಧೀಮಂತ ಮಾನ್ಯಳಾದ 2

ತುಳಸಿ ನೆಳಲಲ್ಲಿ ಅಂಕುರಗಳೆದ್ದಲ್ಲಿ ಪಿತೃಗಳಿಗನ್ನವಿತ್ತರಕ್ಷಯಫಲವು ಊಧ್ರ್ವಪುಂಡ್ರತಳದ ಮೃತ್ತಿಕೆಯಲಿಟ್ಟರೆ ಕೋಟಿ ತೀರ್ಥಗಳ ಮುಳುಗೆದ್ದಫಲ ಸಿದ್ಧವುನಿಲಯದಲಿ ಪತ್ರಮೃತ್ತಿಕೆಕಾಷ್ಠವಿರಲಲ್ಲಿಕಲಿಮುಟ್ಟಲಂಜಿ ತೊಲಗುವನು ಮಣಿಸರಗಳನುಗಳದೊಳಾಂತರಾಕಲುಷಸಂಹರವು ಸಹ ಸಲೆವಿಷ್ಣುಪದವಿಯನೀವ 3

ಶತಸಾಸಿರಪರಾಧವಿರಲಿನ್ನು ಮೃತ್ತಿಕೆಲಿಪಿತ ಕಾಯದನಿಗೆ ಬಹುಜನ ನೋಡೆ ವಿಘ್ನಗಳಗತಿಯುಡುಗಿ ದುಷ್ಟಗ್ರಹಗಳೆಲ್ಲನುಕೂಲಗತಿಯಾದ ಫಲವೀವವುಪ್ರತಿದಿನದಿ ನಾಭಿಕಕರ್ಣದಲಿ ಶಿರದಲ್ಲಿ ಶ್ರೀಪತಿಯ ನಿರ್ಮಾಲ್ಯದಳ ಧರಿಸಿ ಹರಿಪಾದ ತೀರಥವೊಮ್ಮೆ ಸೇವಿಸಿದವರ ಮುಕ್ತಿ ಕರತಳವು ಪತಿತಪಾವನಿಎನಿಸುವಾ 4

ದರುಶನದಿ ಸ್ಪರುಶನದಿ ಧ್ಯಾನದಿಂ ಕೀರ್ತನೆಯುನಿರುತ ಪ್ರಣಾಮಗಳು ಸ್ತೋತ್ರದಾರೋಪಣಿಂಪರಮಜಲ ಶೇಚನಾರ್ಚನ ನಿಷ್ಠೆಯಿಂದ ನವ ಪರೀಕ್ಷೆಯನುಮಾಡಲುಹರಿಚರಣ ಕಮಲರತಿ ದೊರಕಿ ಯುಗ ಕೋಟಿ ಸಾಸಿರಕಾಲತಿರುಗಿ ಬಂದರೆ ಸತತ ಮಾಂಗಲ್ಯಹರಿಯ ಮನೆಯಲ್ಲಿ ನಿಜ ಹರುಷವನ್ನುಂಬುವರು ಮುರಾರಿವರದಂತೆ ಪದವ 5

ಒಂದೊಂದುದಳಕೋಟಿ ಸ್ವರ್ಣಭಾರಕೆ ಮಿಗಿಲುಎಂದು ವಿಶ್ವಾಸದಲಿ ತಂದು ಸಾಸಿರನಾಮದಿಂದ ಗೋವಿಂದಗರ್ಪಿಸಿದರಿಲ್ಲಿಹ ಭವದಂದುಗವು ಮಾನಿಸರ್ಗೆಸುಂದರ ತುಲಸಿ ಮೂಲವನ್ನು ತೊಡಕಿರ್ದಕಳೆಯಂದೆಗೆದು ಶಾಖೋಪಶಾಖದಿಂ ವೃದ್ಧಿಸಾನಂದವಿತ್ತರಾ ನೂರೊಂದು ಕುಲ ನರಕವನು ಹೊಂದಲೀಸರುಪುಣ್ಯದಾ 6

ಶ್ರೀ ವಿಷ್ಣುವಲ್ಲಭೆಯ ಮೂಲದಲಿ ತೀರ್ಥಗಳುಬಾವನ್ನಗಂಧಿಯಳ ಮಧ್ಯದಲಿ ಸುರನಿಕರಪಾವನಿಯಳಾ ಹರಿಯ ಕೊನೆಯಲಿಶ್ರುತಿಸಮೂಹಲಾವಣ್ಯ ಗುಣರಾಸಿಯುಭಾವಶುದ್ಧಿಯಲಿ ಉದಯದಿ ಸ್ಮರಿಸಿ ನಿರುತದಿನಾವ ಕಾರ್ಯಕೆ ಗೆಲುವು ಇಹಪರದ ಸೌಖ್ಯವಿತ್ತಾವ ಕಾಲಕ್ಕೆಹೊರೆವಪ್ರಸನ್ನವೆಂಕಟ ದೇವನಂಗ ದೊಳೊಪ್ಪುವಾ7
*******

No comments:

Post a Comment