Wednesday, 13 November 2019

ಪುಂಡರೀಕದಳ ನಯನ ನಿಮ್ಮ ankita prasannavenkata

by ಪ್ರಸನ್ನವೆಂಕಟದಾಸರು
ರಾಗ - : ತಾಳ - 

ಪುಂಡರೀಕದಳ ನಯನ ನಿಮ್ಮ ಕೊಂಡಾಡಲಳವಲ್ಲ l
ಪಾಂಡುರಂಗಯ್ಯ ಕೃಷ್ಣರಾಯ ll ಪ ll

ಭೂಮಿಯ ಈರಡಿಮಾಡಿ ವ್ಯೋಮಕೊಂದು ಪಾದವನಿತ್ತೆ l
ರೋಮ ರೋಮದಲಿ ಬ್ರಹ್ಮರುದ್ರರಿರಲು l
ಸ್ವಾಮಿ ನಿನ್ನ ಪ್ರೇಮವ ತಾಳಿದಳೆಂದು ನಿಮ್ಮ l
ಕೋಮಲಾಂಗಿ ಬಲ್ಲಿದಳೊ ನೀ ಬಲ್ಲಿದನೊ ll 1 ll

ಹದಿನಾಲ್ಕು ಲೋಕವು ತನ್ನ ಉದರದೊಳಿಂಬಿಟ್ಟು 
ಕೊಂಡು ಸೃಜಿಸಿ ರುಗ್ಮಿಣಿ ತನ್ನ ಕುಚಗಳಲ್ಲಿ 
ಚದುರದಿಂದ ಎತ್ತಿ ಕುಣಿದಾಡುವ 
ಪದುಮಾಕ್ಷಿ ಬಲ್ಲಿದಳೊ ನೀ ಬಲ್ಲಿದನೊ ll 2 ll

ಶೃಂಗಾರ ತೋರುವ ನಿಮ್ಮ ಮಂಗಳದ ಶ್ರೀಪಾದವ
ಹಿಂಗದೆ ಭಜಿಸಲು ಸಂಗತಿಯನಿತ್ತೆಯೊ 
ರಂಗ ಪ್ರಸನ್ನವೆಂಕಟಕೃಷ್ಣ ನಿಮ್ಮ 
ಸಂಗಸುಖಿ ಬಲ್ಲಿದಳೊ ನೀ ಬಲ್ಲಿದನೊ ll
***

ಪುಂಡರೀಕದಳ ನಯನ ನಿಮ್ಮ ಕೊಂಡಾಡಲಳವಲ್ಲಪಾಂಡುರಂಗಯ್ಯ ಕೃಷ್ಣರಾಯ ಪ.

ಭೂಮಿಯಈರಡಿಮಾಡಿ ಮ್ಯೋಮಕೊಂದು ಪಾದವನಿತ್ತೆರೋಮ ರೋಮದಲಿ ಬ್ರಹ್ಮರುದ್ರರಿರಲುಸ್ವಾಮಿ ನಿಮ್ಮ ಪ್ರೇಮವ ತಾಳಿದಳೆಂದು ನಿಮ್ಮಕೋಮಲಾಂಗಿ ಬಲ್ಲಿದಳೊ ನೀ ಬಲ್ಲಿದನೊ 1

ಹದಿನಾಲ್ಕು ಲೋಕವು ತನ್ನ ಉದರದೊಳಿಂಬಿಟ್ಟುಕೊಂಡು ಸೃಜಿಸಿ ರುಕ್ಮಿಣಿ ತನ್ನ ಕುಚಗಳಲ್ಲಿಚದುರದಿಂದ ಎತ್ತಿ ಕುಣಿದಾಡುವಪದುಮಾಕ್ಷಿ ಬಲ್ಲಿದಳೊ ನೀ ಬಲ್ಲಿದನೊ 2

ಶೃಂಗಾರ ತೋರುವ ನಿಮ್ಮ ಮಂಗಳದ ಶ್ರೀಪಾದವಹಿಂಗದೆ ಭಜಿಸಲು ಸಂಗತಿಯನಿತ್ತೆಯೊರಂಗ ಪ್ರಸನ್ನವೆಂಕಟಕೃಷ್ಣ ನಿಮ್ಮಸಂಗಸುಖಿ ಬಲ್ಲಿದಳೊ ನೀ ಬಲ್ಲಿದನೊ 3
*******

No comments:

Post a Comment