Monday, 18 November 2019

ಶ್ರೀವಾಸುದೇವಕಾಯೊಈ ವಿಷಯ ankita prasannavenkata

by ಪ್ರಸನ್ನವೆಂಕಟದಾಸರು
ಶ್ರೀ ವಾಸುದೇವಕಾಯೊಈ ವಿಷಯ ಬಾಧೆಗಳನೊದೆದು ಕಳೆದೆಮ್ಮ್ಮಯ್ಯನೆ ಪ.

ತಂದೆ ತಾಯಿಗಳಿಲ್ಲ ಬಂಧು ಬಳಗಿಲ್ಲಭವದಂದುಗದಿ ಸಿಲುಕಿ ಬಲು ನೊಂದೆನಯ್ಯಇಂದಿರೆರಮಣ ನೀನೆ ತಂದೆ ಬಾಲಕನಕುಂದುನೋಡದೆ ಘಕ್ಕನೆತ್ತಿಕೊಂಡು1

ಒಂದು ಘಳಿಗೆಯೊಳೊಮ್ಮೆಹರಿಕೃಷ್ಣ ಮುಕುಂದಎಂದೆನ್ನ ಬಾಯಿಗೆ ಬರಲಿಲ್ಲವೊಮಂದನರರೋಲೈಸಿ ಮಸಿವರ್ಣನಾದೆಸಿರಿಕಂದರ್ಪಜನಕ ಕಡುಪಾಪಿ ನಾನಯ್ಯ 2

ವೈಭವಯುತರ ಕಂಡು ವೈಮನಸಿಯಾಗಿ ವೃಥಾಸುಯಿಗರೆದುಗರೆದು ಕಾಲವ ಕಳೆದೆನೊಧೈರ್ಯವಿಡಿದೊಮ್ಮೆ ನಿನ್ನಯ ಮೂರುತಿಯ ಮುಂದೆಮೈಗೆಡಹಿ ನಮಿಸಲೊಲ್ಲದ ಪಾಪಿಯ 3

ನೀರ ತಡಿಯಲಿ ಕುಳಿತು ನಾನಾ ಕುವಚನಗಳಪಾರವಿಲ್ಲದೆ ಬೊಗಳಿ ಬೇಸರುವೆನೊಓರಂತೆ ನಿನ್ನ ಕಥೆಕೇಳಿಕರ್ಣಾಮೃತದಸಾರಕೊಳದರ್ಭಕಗೆ ಸ್ಮರಣೆಯನಿತ್ತು4

ಘನ್ನ ಪಾತಕಿಯು ನಾನಾದರೇನೊ ದಯಾಪೂರ್ಣನೆಂಬೊ ಬಿರುದು ನಿನ್ನದಲ್ಲೆಮುನ್ನಿನಪರಾಧಗಳ ಕ್ಷಮಿಸಯ್ಯ ತಂದೆ ಪ್ರಸನ್ನ ವೆಂಕಟಾಚಲ ನಿವಾಸ ಕೃಷ್ಣ 5
*******

No comments:

Post a Comment