Wednesday, 13 November 2019

ಪ್ರಸನ್ನವದನ ಹಯಸೂದನ ಪಾಲಿಸು ankita prasannavenkata

by ಪ್ರಸನ್ನವೆಂಕಟದಾಸರು
ರಾಗ - : ತಾಳ -

ಪ್ರಸನ್ನವದನ ಹಯಸೂದನ ಪಾಲಿಸು ಹಯವದನ ll ಪ ll

ಚಂದ್ರಮಂಡಲ ಗ್ರಹಮಾಲಾನಂದ ವಿಶಾಲ
ಇಂದಿರೆರಮಣ ಖಗಗಮನ 
ಸ್ಕಂದನಾಂಗದರರವಿಂದ ಗದಾಕರ
ಸುಂದರಗಾತ್ರದಿ ವಂದ್ಯವಿಧಾತ್ರ ll 1 ll

ನಿಗಮೋದ್ಧಾರಕಾಘ ವಾರಕ ಶ್ರೀಜಗರಕ್ಷಕ
ಮೃಗಮುಖನೃದೇಹಿ ಧಾರ್ಮಿಕ
ದ್ಯುಗಶಶಿ ಸಮತೇಜ ದೃಗಯುತ ಗಜರಾಜ
ನಿಗಡ ಶಿಥಿಲಕಾರಿ ಬಿಗಡರ ಭಾರಿ ll 2 ll

ಗುರುವಿನ ಬಾಲ ಪಾಲನಶೀಲ ಸಾಗರಸುತೆಲೋಲ
ಗುರುವಾದಿರಾಜಾರ್ಚಿತ ಪಾದಾಬ್ಜ
ವರಸೋದೆ ಮಠವಾಸ ಸುರಮುನಿ ಪರಿತೋಷ
ಪರಸನ್ನವೆಂಕಟೇಶ ಹರಿ ತುರಗಾಸ್ಯ ll 3 ll
***

ಪ್ರಸನ್ನವದನ ಹಯಸೂದನ ಪಾಲಿಸು ಹಯವದನ ಪ.

ಚಂದ್ರಮಂಡಲ ಗ್ರಹಮಾಲಾನಂದ ವಿಶಾಲಇಂದಿರೆರಮಣ ಖಗಗಮನಸ್ಯಂದನಾಂಗದರರವಿಂದ ಗದಾಕರಸುಂದರಗಾತ್ರಧಿ ವಂದ್ಯವಿಧಾತ್ರ 1

ನಿಗಮೋದ್ಧಾರಕಾಘ ವಾರಕ ತ್ರಿಜಗರಕ್ಷಕಮೃಗಮುಖನೃದೇಹಿ ಧಾರ್ಮಿಕದ್ಯುಗಶಶಿ ಸಮತೇಜ ದೃಗಯುತ ಗಜರಾಜನಿಗಡ ಶಿಥಿಲಕಾರಿ ಬಿಗಡರ ಭಾರಿ 2

ಗುರುವಿನ ಬಾಲ ಪಾಲನಶೀಲ ಸಾಗರಸುತೆಲೋಲಗುರುವಾದಿರಾಜಾರ್ಚಿತ ಪಾದಾಬ್ಜವರಸೋದೆ ಮಠವಾಸ ಸುರಮುನಿ ಪರಿತೋಷಪರಸನ್ನವೆಂಕಟೇಶಹರಿತುರಗಾಸ್ಯ3
********

No comments:

Post a Comment