Thursday, 14 November 2019

ಬೆದರದಿರೆಲೆ ಆತ್ಮಮಧುಸೂದನನ ankita prasannavenkata

by ಪ್ರಸನ್ನವೆಂಕಟದಾಸರು
ಬೆದರದಿರೆಲೆ ಆತ್ಮಮಧುಸೂದನನ ಕೃಪೆ ಹೊಂದು ದುಷ್ಕøತಕೆಬೆದರದಿರೆಲೆ ಆತ್ಮ ಪ.

ಹರಿಮುಖ್ಯಪ್ರಾಣರ ಸ್ಮರಣೆಯೊಂದಿರಲಿದುರಿತನೊರಜುವಿಂಡು ಉರಿಯ ನುಂಗುವವೆ1

ಪರವನಿತೆಗೆ ಚಿತ್ತ ಬೆರೆಯದಲಿರಲಿಮರುಳು ಕೀನಾಶಭಟರ ಊಳಿಗಕ್ಕೆ 2

ಭೂತದಯ ವಿನಯ ಮಾತುಗಳಿರಲಿಪಾತಕದಾರಿದ್ರ್ಯಾವ್ರಾತ ಬೊಬ್ಬುಳಿಗೆ3

ದ್ವಿಜರಾಜಗಮನನ ದ್ವಿಜಭಜನಿರಲಿಸುಜನಪವಾದ ಶೀಲ ರಚಕ ಸಮೂಹಕೆ 4

ವಿಬುಧರು ಬರೆದಿತ್ತ ಅಭಯಪತ್ರಿರಲಿಶುಭಪಥ ತಡೆವ ಅಬುಧಸುಂಕಿಗರ್ಗೆ 5

ಸುವೈರಾಗ್ಯಮನೆ ದೃಢ ಕವಟ ಬಲ್ಕಿರಲಿಭವಾಂಬುಧಿ ಗೋಷ್ಪಾದವಹುದು ತಿಳಿಯದೆ 6

ಪ್ರಸನ್ವೆಂಕಟೇಶನ್ನ ದಾಸರೆ ರಂಭೆಯರುಹೇಸಿ ನೃಪಾಂಗನೇರು ಎಳೆಸಲಿ ಕಂಗೆಟ್ಟು 7
********

No comments:

Post a Comment