Monday, 18 November 2019

ಸಿರಿಸೊಕ್ಕಿ ಮರೆಯದೆ ಮುರವೈರಿಯಮರೆಹೋಗು ankita prasannavenkata

by ಪ್ರಸನ್ನವೆಂಕಟದಾಸರು
ಸಿರಿಸೊಕ್ಕಿ ಮರೆಯದೆ ಮುರವೈರಿಯಮರೆಹೋಗು ಮೊರೆಯಿಡು ಮರೆಯದೆ ಮನವೆ ಪ.

ಶರೀರವು ಸೆರೆಮನೆ ಸರಿಕಾಣ ಜೀವಕ್ಕೆಸಿರಿಪಂಚಶರನವಸರಕೆ ಮೆಚ್ಚಿಸಿರಿಪತಿ ಶರಣಾನುಸರಣೆ ಭಕುತಿಜ್ಞಾನಸರಕಿಲ್ಲ ಸರಿಯಿತಾಯುಷ್ಯಿರವು ವ್ಯರ್ಥಾಯಿತು 1

ಸತಿಸ್ನೇಹ ಸುತಮೋಹಾಶ್ರಿತ ಜನರನು ಬೇಡಿಸ್ಯಾತನೆಯ ಸುತ್ತಿಕೊಂಡು ಶಿಥಿಲಿಪಾಗಸತಿಇಲ್ಲ ಸುತರಿಲ್ಲಾಶ್ರಿತ ಸಹಾಯವಿಲ್ಲವೈವಸ್ವತ ಭೃತ್ಯಶತಕೆ ಈಷತ್ತೂ ಕೃಪೆಯಿಲ್ಲ 2

ಪುಸಿನುಡಿ ಪಿಸುಣರ ಪೆಸರಿಸದಲೆನಿತ್ಯಪ್ರಸಾದರ ಪ್ರಸಾದವ ಪ್ರಸನ್ನೀಕರಿಸೆಪೊಸತಾಪೋಪಶಮನ ಪ್ರಸನ್ನವೆಂಕಟಪತಿಯಪ್ರಸಿದ್ಧರ ಪ್ರಸರದ ಪ್ರಸಂಗದೆ 
*******

No comments:

Post a Comment