Wednesday, 13 November 2019

ನಿನಗೆ ನಾ ಬಯ್ಯಲಿಲ್ಲೊ ಕೃಷ್ಣಯ್ಯ ankita prasannavenkata

by ಪ್ರಸನ್ನವೆಂಕಟದಾಸರು
ನಿನಗೆ ನಾ ಬಯ್ಯಲಿಲ್ಲೊ ಕೃಷ್ಣಯ್ಯಅಣುಗರು ಹುಯ್ಯಲಿಡುವರನು ಬಯ್ದೆ ಪ.

ಮರುಳು ಮಗನೆ ನಿನಗೆ ಗೋಗಾಯ್ವದುರುಳರ ಸಂಗ ಸೊಬಗೆತರಳನಿನಗೆ ಕಳ್ಳ ಹರಳಿಗನೆಂದರೆಬೆರಳಿಟ್ಟೆ ಕಿವಿಯೊಳಗೆ ಹರಿಹರಿ 1

ಠವಳಿಕಾರರು ನಾರೇರು ನಿನ್ನೊಳು ಕಂದಹವ್ವಳಿಸುತಿಹ ಜಾರೇರುಗೋವಳರಾಯನೆ ನಿನಗವರ ಸಂಗತಿ ಹೀನಪವಳ ಚೆಂದುಟಿಯ ಕೂಸೆ ಹರಿಹರಿ 2

ಹುಸಿನುಡಿದರು ತಾರೊ ನನ್ನ ಕಂದಕೃಶನಾದೆ ಮುದ್ದು ತಾರೊನಸುನಗೆಯಲಿ ಮುನಿಯದೆ ಮನೆಯೊಳಗಿರೊಪ್ರಸನ್ವೆಂಕಟ ಕೃಷ್ಣಯ್ಯ ಹರಿಹರಿ 3
*******

No comments:

Post a Comment