Saturday, 16 November 2019

ಶಂಬರಾರಿಯತಾತಸಲಹೊ ಶ್ರೀನಾಥಶಂಭು ankita prasannavenkata

ಪ್ರಸನ್ನವೆಂಕಟದಾಸರು

ಶಂಬರಾರಿಯ ತಾತ ಸಲಹೊ ಶ್ರೀನಾಥ

ಶಂಭು ವೀರಂಚೇಶ ಶ್ರೀವೆಂಕಟೇಶ ll ಪ ll


ದಶರಥಸಂಜಾತ ದಶಶಿರಹರ್ತ

ವಸುಧೆತಸ್ಕರಛೇತ ವಸುಮತಿಪ್ರೀತ

ಬಿಸಜಾಕ್ಷಿಯಾಪತ್ತ ಬಂಧು ಸಮರ್ಥ

ಪಶುಪಾರಿವೃತಶಕ್ತಿಪರಿಹಾರ ಕರ್ತ ll 1 ll


ಪಾರಿಜಾತಕೆ ವಜ್ರಿ ಪರಾಭವಕಾರಿ

ಕ್ರೂರ ಖಳವೈರಿಕುಲದಸಂಹಾರಿ

ಚಾರುಮಹಿಮ ಶೌರಿ ಚಿರಾನಂದೋದಾರಿ

ಸಾರಭೃತ್ಯುಪಕಾರಿ ಸುಕಳಜಗಧಾರಿ ll 2 ll


ಸ್ವಾಮಿ ಪುಷ್ಕರವಾಸ ಶ್ರೀ ಶ್ರೀನಿವಾಸ

ಸೋಮಾರ್ಕಸಂಕಾಶ ಸುರಜನಕೋಶ

ಭೂಮಿಭಾರವಿನಾಶ ಬುಧಪರಿತೋಷ 

ಪ್ರೇಮಪೂರಿತಹಾಸ ಪ್ರಸನ್ವೆಂಕಟೇಶ ll 3 ll

***


ಶಂಬರಾರಿಯತಾತಸಲಹೊ ಶ್ರೀನಾಥಶಂಭು ವಿರಂಚೇಶ ಶ್ರೀ ವೆಂಕಟೇಶ ಪ.

ದಶರಥಸಂಜಾತ ದಶಶಿರಹರ್ತವಸುಧೆತಸ್ಕರಛೇತ ವಸುಮತಿಪ್ರೀತಬಿಸಜಾಕ್ಷಿಯಾಪತ್ತ ಬಂಧು ಸಮರ್ಥಪಶುಪಾರಿವೃತಶಕ್ತಿಪರಿಹಾರಕರ್ತ1

ಪಾರಿಜಾತಕೆ ವಜ್ರಿ ಪರಾಭವಕಾರಿಕ್ರೂರ ಖಳವೈರಿಕುಲದಸಂಹಾರಿಚಾರುಮಹಿಮಶೌರಿಚಿರಾನಂದೋದಾರಿಸಾರಭೃತ್ಯುಪಕಾರಿ ಸುಕಳಜಗಧಾರಿ 2

ಸ್ವಾಮಿ ಪುಷ್ಕರವಾಸ ಶ್ರೀ ಶ್ರೀನಿವಾಸಸೋಮಾರ್ಕಸಂಕಾಶ ಸುರಜನಕೋಶಭೂಮಿಭಾರವಿನಾಶ ಬುಧಪರಿತೋಷಪ್ರೇಮಪೂರಿತಹಾಸ ಪ್ರಸನ್ವೆಂಕಟೇಶ 3
********

No comments:

Post a Comment