Thursday 14 November 2019

ಬಾಲನ ಮೇಲೆ ನಿನ್ನ ಮೋಹವಮ್ಮ ankita prasannavenkata

by ಪ್ರಸನ್ನವೆಂಕಟದಾಸರು
ಬಾಲನ ಮೇಲೆ ನಿನ್ನ ಮೋಹವಮ್ಮ ನಾವುಹೇಳಿದ ಮಾತು ನೀ ಕೇಳೆಯಮ್ಮ ಪ.

ಚಿಣ್ಣಗಿಣ್ಣನೆಂಬುವÀ ಬಣ್ಣ ಬ್ಯಾಡೆ ನಮ್ಮಬೆಣ್ಣೆ ಕದ್ದು ಮೆದ್ದ ಕಟವಾಯಿ ನೋಡೆಸಣ್ಣಗಿಣ್ಣವನಿವನಾದರೆ ಪರರ ಚೆಲುವಹೆಣ್ಣಿನೊಳಗಾಡುವನೆ ಕುವರ 1

ಪುಟ್ಟಗಿಟ್ಟನೆಂಬುವ ಮಾತು ಬೇಡೆ ನಮ್ಮರಟ್ಟು ಮಾಡುವ ಜನರೊಳು ನೋಡೆಸಿಟ್ಟುಗಿಟ್ಟಿಗೆ ಕೃಷ್ಣ ಅಳುಕನಮ್ಮ ನಮ್ಮಬಟ್ಟ ಕುಚವಿಡಿವ ದಿಟ್ಟನಮ್ಮ 2

ಚಿಕ್ಕಗಿಕ್ಕವನೆಂಬುದುರೂಢಿಕಾಣೆ ನಮ್ಮಪಕ್ಕವ ಬಿಡನು ಬಾಲಕಾರ್ಯವೇನೆಅಕ್ಕೊ ಇಕ್ಕೊ ಎಂಬುವನ್ನಕ್ಕ ಕಳ್ಳ ನಮ್ಮಠÀಕ್ಕಿಸೆದ್ದೋಡುವ ಸಿಕ್ಕುವನಲ್ಲ 3

ಕಕ್ಕುಲಾತಿತೋರೆ ನಮ್ಮ ಮನೆಗಳ ಪೊಕ್ಕು ಸಣ್ಣಮಕ್ಕಳಾಟವಾಡದೆಮ್ಮ ನೋಡಿ ನಕ್ಕುತಕ್ಕೈಸಿ ಓಡುವ ಮಹಾಮಾಯಗಾರನಮ್ಮದಕ್ಕಲೀಸ ಪತಿವ್ರತಧರ್ಮಜಾರಕೃಷ್ಣ4

ಕೂಸುಗೀಸು ಇನ್ನೆನ್ನಬಾರದವಗೆಭವಘಾಸಿಯ ತಪ್ಪಿಸುವ ಎಂದಿಗೆಮಗೆಬೇಸರ ಗೀಸರದೆ ನೆನೆವರ ಒಡೆಯಲಕ್ಷ್ಮೀಶ ಪ್ರಸನ್ವೆಂಕಟ ರಂಗಯ್ಯ 5
********

No comments:

Post a Comment