Thursday, 14 November 2019

ಬಿಡಲಾರೆ ಬಿಡಲಾರೆ ನಿನ್ನಡಿದಾವರೆಯ ankita prasannavenkata

by ಪ್ರಸನ್ನವೆಂಕಟದಾಸರು
ಬಿಡಲಾರೆ ಬಿಡಲಾರೆ ನಿನ್ನಡಿದಾವರೆಯ ನೀಕೊಡು ಕಂಡ್ಯ ಅಭಯವಿಡಿದೆಮ್ಮ್ಮಯ ತಂದೆ ಪ.

ಕೂಗುವೆ ಕೂಗುವೆ ಕೃಪಾಸಾಗರನೆಂದ್ಹೇಳಿ ತಾಕೂಗಿದರೊದಗಿ ಕಾಯಿದೆ ನಾಗನ್ನಕೇಳಿತಂದೆ1

ಬಡವ ನಾ ಬಡವನು ಕಾಣೊ ಬಾಡದೊನಮಾಲಿ ಕಡುಬಡವ ಸುದಾಮನ ಕೈಯವಿಡಿದ್ಯೆಂದುಕೇಳಿತಂದೆ2

ಡೊಂಕುನಡೆದೆಡೊಂಕುನುಡಿದೆ ಶಂಕಿಲ್ಲದಲೆ ಮೂಡೊಂಕಿಯ ತಿದ್ದಿದ ಬಿರುದಾಂಕನಕೇಳಿತಂದೆ3

ಬಲ್ಲೆನೊ ಬಲ್ಲೆನೊ ನೀನಿದ್ದಲ್ಲಿ ವ್ರಜದಲ್ಲಿ ಗೋಗೊಲ್ಲರು ಪುಲ್ಗಲ್ಲಿಗೆ ಕೈವಲ್ಯವುಕೇಳಿತಂದೆ4

ಅವರೇವೆ ನಿನ್ನವರು ನಾನೇನವರ ಶಿಶುವಲ್ಲೆ ತನ್ನವರಹೊರೆವಪ್ರಸನ್ವೆÉಂಕಟ ತವರೂರಕೇಳಿತಂದೆ5
*********

No comments:

Post a Comment