Audio by Mrs. Nandini Sripad
ಶ್ರೀ ಪ್ರಸನ್ನ ವೆಂಕಟದಾಸರ ಕೃತಿ
ರಾಗ ಶಿವರಂಜಿನಿ ಖಂಡಛಾಪುತಾಳ
ಮಹತಿಗೆ ಮಹತು ಶ್ರೀಹರಿಯ ನಾಮ ।
ಬಹು ಭಾಗ್ಯವಂತರಿಗೆ ದೊರೆವುದೀ ನಾಮ ॥ ಪ ॥
ಹಿಂದೊದಗಿದಘರಾಶಿ ಬೀಸಿ ಬಿಸುಟುವ ನಾಮ ।
ಮುಂದೆ ಬಹ ದುರಿತಕಡ್ಡಾದ ನಾಮ ॥
ಮಂದಮತಿ ಕತ್ತಲೆಗೆ ಬಾಲಾರ್ಕ ಸಮ ನಾಮ ।
ದಂದುಗದ ಬಳ್ಳಿಯನು ಕಡಿವ ನಾಮ ॥ 1 ॥
ಮುಕುತಿ ನಗರವ ತುಂಬಿಸುವ ಅಭಯಕರ ನಾಮ ।
ಶಕುತರ ಮಾಲಿಕೆಗೆ ಅಭಯದ ನಾಮ ॥
ಅಕಳಂಕ ದಾಸರಿಗೆ ಆದ್ಯಂತಗತ ನಾಮ ।
ಭಕುತರೆಡರಿನ ಗಿರಿಗೆ ವಜ್ರ ನಾಮ ॥ 2 ॥
ಸರ್ವ ಶ್ರುತಿ ಮುನಿಗಳುಗ್ಗಡಿಸುತಿಹ ನಾಮ ।
ಉರ್ವಿಯೊಳು ನಂಬಿದರ ಪೊರೆವ ನಾಮ ॥
ಸರ್ವಜ್ಞರಾಯರು ನಿರ್ವಚನಿಸುತಿಹ ನಾಮ ।
ಸರ್ವೇಶ ಪ್ರಸನ್ನವೆಂಕಟನ ದಿವ್ಯ ನಾಮ ॥ 3 ॥
*************
by ಪ್ರಸನ್ನವೆಂಕಟದಾಸರು
ಮಹತಿಗೆ ಮಹತು ಹರಿನಾಮ ಬಹುಜನ್ಮ ಜಲಧಿ ಶೋಷಿಸುವ ಹರಿನಾಮ ಪ.
ಹಿಂದೊದಗಿದಘರಾಶಿ ಬೇಯಿಸಿ ಬಿಸುಟುವ ನಾಮಮುಂದೆ ಬಹ ದುರಿತಕಡ್ಡಹ ನಾಮಮಂದಮತಿ ಕತ್ತಲೆಗೆ ಬಾಲಾರ್ಕಸಮ ನಾಮದಂದುಗದ ಬಳ್ಳಿಯನು ಹರಿವ ನಾಮ 1
ಮುಕುತಿ ನಗರವ ತುಂಬಿಸುವ ಅಭಯಕರ ನಾಮಶಕುತ ಯಮಾಲಯಕೆÉ ಭಯಂಕರದ ನಾಮಅಕಳಂಕ ದಾಸರಿಗೆ ಆದ್ಯಂತಗತಿ ನಾಮಭಕುತರೆಡರಿನ ಗಿರಿಗೆ ವಜ್ರನಾಮ 2
ಸರ್ವ ಶ್ರುತಿಮುನಿಗಳುಗ್ಗಡಿಸುತಿಹ ನಾಮಉರ್ವಿಯೊಳು ನಂಬಿದರ ಪೊರೆವ ನಾಮಸರ್ವಜÕರಾಯಗುರು ನಿರ್ವಚನಿಸುವ ನಾಮಸರ್ವೇಶ ಪ್ರಸನವೆಂಕಟೇಶನ ಶ್ರೀನಾಮ 3
*******
No comments:
Post a Comment