Monday, 18 November 2019

ಬಿಡೆನೋ ನಿನ್ನಂಘ್ರಿ ಶ್ರೀನಿವಾಸ ಎನ್ನ ankita prasannavenkata BIDENO NINNANGHRI SRINIVASA

csrsum



ಬಿಡೆನೋ ನಿನ್ನಂಘ್ರಿ ಶ್ರೀನಿವಾಸ ಎನ್ನ
ದುಡಿಸಿ ಕೊಳ್ಳೆಲೋ ಶ್ರೀನಿವಾಸ ನಿನ್ನ
ನುಡಿಯೇ ಜಿತಲ್ಲೊ ಶ್ರೀನಿವಾಸ ನನ್ನ
ನಡೆತಪ್ಪು ಕಾಯೋ ಶ್ರೀನಿವಾಸ ||ಪ||

ಬಡಿಯೋ ಬೆನ್ನಲಿ ಶ್ರೀನಿವಾಸ ಎ
ನ್ನೊಡಲ ಹೊಯ್ಯದಿರೊ ಶ್ರೀನಿವಾಸ ನಾ
ಬಡವ ಕಾಣೆಲೋ ಶ್ರೀನಿವಾಸ ನಿ
ನ್ನೊಡಲ ಹೊಕ್ಕೆನೋ ಶ್ರೀನಿವಾಸ. ||೧||

ಪಂಜು ಪಿಡಿವೆನೋ ಶ್ರೀನಿವಾಸ ನಿ
ನ್ನೆಂಜಲ ಬಳದುಂಬೆ ಶ್ರೀನಿವಾಸ ನಾ
ಸಂಜೆ ಉದಯಕೆ ಶ್ರೀನಿವಾಸ ಕಾ
ಳಂಜಿಯ ಪಿಡಿವೇ ಶ್ರೀನಿವಾಸ. |೨||

ಸತ್ತಿಗೆ ಚಾಮರ ಶ್ರೀನಿವಾಸ ನಾ
ನೆತ್ತಿನಲಿವೆನೋ ಶ್ರೀನಿವಾಸ ನೆನ್ನ
ರತ್ನದ ಹಾವಿಗೆ ಶ್ರೀನಿವಾಸ ನಾ
ಹೊತ್ತು ಕುಣಿವೆನೋ ಶ್ರೀನಿವಾಸ. ||೩||

ಹೇಳಿದಂತಾಲಿಹೆ ಶ್ರೀನಿವಾಸ ನಿ
ನ್ನಾಳಿಗಾಳಾಗಿಹೆ ಶ್ರೀನಿವಾಸ ಅವ
ರೂಳಿಗವ ಮಾಳ್ಪೆ ಶ್ರೀನಿವಾಸ ಎನ್ನ
ಪಾಲಿಸೊ ಬಿಡದೇ ಶ್ರೀನಿವಾಸ. ||೪||

ನಿನ್ನ ನಾಮ ಹೋಳಿಗೆ ಶ್ರೀನಿವಾಸ ಕಳ್ಳ
ಕುನ್ನಿ ನಾನಾಗಿಹೆ ಶ್ರೀನಿವಾಸ ಕಟ್ಟಿ
ನಿನ್ನೊವರೊದ್ದರೆ ಶ್ರೀನಿವಾಸ ನನ
ಗಿನ್ನು ಲಜ್ಜೇತಕೆ ಶ್ರೀನಿವಾಸ. ||೫||

ಬೀಸಿಕೊಲ್ಲಲವರೆ ಶ್ರೀನಿವಾಸ ಮುದ್ರೆ
ಕಾಸಿ ಚುಚ್ಚಲವರೆ ಶ್ರೀನಿವಾಸ ಮಿಕ್ಕ
ಘಾಸಿಗಂಜೆನಯ್ಯ ಶ್ರೀನಿವಾಸ ಎಂಜ
ಲಾಸೆಯ ಬಂಟ ನಾ ಶ್ರೀನಿವಾಸ. ||೬||

ಹೇಸಿ ನಾನಾದರೆ ಶ್ರೀನಿವಾಸ ಹರಿ
ದಾಸರೊಳು ಪೊಕ್ಕೆ ಶ್ರೀನಿವಾಸ ಅವರ
ಭಾಷೆಯ ಕೇಳಿಹೆ ಶ್ರೀನಿವಾಸ ಆ
ವಾಸಿಯ ಸೈರಿಸೋ ಶ್ರೀನಿವಾಸ ||೭||

ತಿಂಗಳವನಲ್ಲ ಶ್ರೀನಿವಾಸ ವತ್ಸ
ರಂಗಳವನಲ್ಲ ಶ್ರೀನಿವಾಸ ರಾ
ಜಂಗಳ ಸವಡಿಪೆ ಶ್ರೀನಿವಾಸ ಭ
ವಂಗಳ ದಾಟುವೆ ಶ್ರೀನಿವಾಸ. ||೮||

ನಿನ್ನವ ನಿನ್ನವ ಶ್ರೀನಿವಾಸ ನಾ
ನನ್ಯವನರಿಯೆನೊ ಶ್ರೀನಿವಾಸ ಅಯ್ಯಾ
ಮನ್ನಿಸೊ ತಾಯ್ತಂದೆ ಶ್ರೀನಿವಾಸ ಪ್ರ
ಸನ್ನವೆಂಕಟಾದ್ರಿ ಶ್ರೀನಿವಾಸ. ||೯||
***


ಬಿಡೆನೋ ನಿನ್ನಂಘ್ರಿ ಶ್ರೀನಿವಾಸ
ಎನ್ನ ದುಡಿಸಿಕೊಳ್ಳಲೋ ಶ್ರೀನಿವಾಸ
ನಿನ್ನ ನುಡಿಯ ಜೋತೆಲ್ಲೋ ಶ್ರೀನಿವಾಸ
ನನ್ನ ನಡೆ ತಪ್ಪು ಕಾಯೋ ಶ್ರೀನಿವಾಸ II1II

ಬಡಿಯೋ ಬೆನ್ನಲ್ಲಿ ಶ್ರೀನಿವಾಸ
ಎನ್ನ ಒಡಲ ಹೊಯ್ಯದಿರೂ ಶ್ರೀನಿವಾಸ
ನಾ ಬಡವ ಕಾಣೆಲೂ ಶ್ರೀನಿವಾಸ
ನಿನ್ನ ಒಡಲ ಹೂಕ್ಕೆನೂ ಶ್ರೀನಿವಾಸII2 II

ಪಂಜು ಪಿಡಿವೇನೂ ಶ್ರೀನಿವಾಸ
ನಿನ್ನ ಎಂಜಲ ಬಳಿದುಂಬೆ ಶ್ರೀನಿವಾಸ
ನಾ ಸಂಜೆ ಉದಯಕೆ ಶ್ರೀನಿವಾಸ
ಕಾಳಜಿಯ ಪಿಡಿವೆ ಶ್ರೀನಿವಾಸ II3II

ಸತ್ತಿಗೆ ಚಾಮರ ಶ್ರೀನಿವಾಸ
ನಾ ನೆತ್ತಿ ಕುಣಿವೇನೂ ಶ್ರೀನಿವಾಸ
ನಿನ್ನ ರತ್ನದಾವಿಗೆ ಶ್ರೀನಿವಾಸ
ನಾ ಹೊತ್ತು ನಲಿವೇನೂ ಶ್ರೀನಿವಾಸ II4II

ಅವರೊಳಿಗವ ಮಾಳ್ಪೆ ಶ್ರೀನಿವಾಸ
ನನ್ನ ಪಾಲಿಸೋ ಬಿಡದೆ ಶ್ರೀನಿವಾಸ
ಹೇಳಿದಂತಾಗಲಿ ಶ್ರೀನಿವಾಸ
ನಿನ್ನಗಳಾಗಿವೆ ಶ್ರೀನಿವಾಸ II5II

ನಿನ್ನ ನಾಮ ಹೋಳಿಗೆ ಶ್ರೀನಿವಾಸ
ಕಳ್ಳ ಕುನ್ನಿ ನಾನಾಗಿಹೆ ಶ್ರೀನಿವಾಸ
ಕಟ್ಟಿ ನಿನ್ನವರೋದ್ದರೆ ಶ್ರೀನಿವಾಸ
ನನಗಿನ್ನೂ ಲಜ್ಜೆತಕೆ ಶ್ರೀನಿವಾಸ II6II

ಬೀಸಿ ಕೊಲ್ಲಲವರೆ ಶ್ರೀನಿವಾಸ
ಮುದ್ರೆ ಕಾಸಿ ಚುಚ್ಚುಲವರೆ ಶ್ರೀನಿವಾಸ
ಮಿಕ್ಕ ಘಾಸಿಗಂಜೆನಯ್ಯ ಶ್ರೀನಿವಾಸ
ಎಂಜಲ ಬಂಟ ನಾ ಶ್ರೀನಿವಾಸ II7II

ಹೇಸಿ ನಾನಾದರೆ ಶ್ರೀನಿವಾಸ
ಹರಿದಾಸರೂಳು ಪೊಕ್ಕೆ ಶ್ರೀನಿವಾಸ
ಅವರ ಭಾಷೆಯ ಕೇಳಿಹೆ ಶ್ರೀನಿವಾಸ
ಆ ವಾಸಿಯ ಸೈರಿಸೂ ಶ್ರೀನಿವಾಸ II8II

ತಿಂಗಳವನಲ್ಲ ಶ್ರೀನಿವಾಸ
ವತ್ಸರಂಗಳವನಲ್ಲ ಶ್ರೀನಿವಾಸ
ರಾಜಂಗಳ ಸವದಿಪೆ ಶ್ರೀನಿವಾಸ
ಭವಂಗಳ ದಾಟುವೆ ಶ್ರೀನಿವಾಸ II9II

ನಿನ್ನವ ನಿನ್ನವ ಶ್ರೀನಿವಾಸ
ನಾನನ್ಯರರಿವೇನೂ ಶ್ರೀನಿವಾಸ
ಅಯ್ಯ ಮನ್ನಿಸೂ ತಾಯಿತಂದೆ ಶ್ರೀನಿವಾಸ
ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ II10II
***

Bideno ninnanghri srinivasa

enna dudisikollalo srinivasa

ninna nudiya jotello srinivasa

nanna nade tappu kayo srinivasa II1II


badiyo bennalli srinivasa

enna odala hoyyadiru srinivasa

na badava kanelu srinivasa

ninna odala hukkenu srinivasaII2 II


panju pidivenu srinivasa

ninna enjala balidumbe srinivasa

na sanje udayake srinivasa

kalajiya pidive srinivasa II3II


sattige camara srinivasa

na netti kunivenu srinivasa

ninna ratnadavige srinivasa

na hottu nalivenu srinivasa II4II


avaroligava malpe srinivasa

nanna paliso bidade srinivasa

helidantagali srinivasa

ninnagalagive srinivasa II5II


ninna nama holige srinivasa

kalla kunni nanagihe srinivasa

katti ninnavaroddare srinivasa

nanaginnu lajjetake srinivasa II6II


bisi kollalavare srinivasa

mudre kasi cucculavare srinivasa

mikka ghasiganjenayya srinivasa

enjala banta na srinivasa II7II


hesi nanadare srinivasa

haridasarulu pokke srinivasa

avara bhaseya kelihe srinivasa

a vasiya sairisu srinivasa II8II


tingalavanalla srinivasa

vatsarangalavanalla srinivasa

rajangala savadipe srinivasa

bhavangala datuve srinivasa II9II


ninnava ninnava srinivasa

nanan’yararivenu srinivasa

ayya mannisu tayitande srinivasa

prasanna venkatadri srinivasa II10II
***

Bideno ninnanghri shreenivaasa |
Enna dudisikollelo shreenivaasa || a. Pa. ||

Ninnudiye jitello shreenivaasa |
Enna nadetappu kaayo shreenivaasa || a. Pa. ||

Badiyo bennali shreenivaasa |
Ennodala hoyyadiru shreenivaasa |
Naa badava kaanelo shreenivaasa |
Ninnodala hokkeno shreenivaasa || 1 ||

Panju pidiveno shreenivaasa |
Ninnenjala balidumbe shreenivaasa |
Naa sanje udayake shreenivaasa |
Kaalanjiya pidive shreenivaasa || 2 ||

Sattige chaamara shreenivaasa |
Naanetti kuniveno shreenivaasa |
Ninna ratnada haavige shreenivaasa |
Naa hottu naliveno shreenivaasa || 3 ||

Helidantaalihe shreenivaasa |
Nannaligalaagihe shreenivaasa |
Avarooligava maalpe shreenivaasa |
Enna paaliso bidade shreenivaasa || 4 ||

Ninna naama holige shreenivaasa |
Kalla kunni naanaagihe shreenivaasa |
Katti ninnavaroddare shreenivaasa |
Nanaginnu lajjetake shreenivaasa || 5 ||

Beesi kollalavare shreenivaasa |
Mudre kaasi cuccalavare shreenivaasa |
Mikka ghaasiganjenayya shreenivaasa |
Enjalaaseya bantanaa shreenivaasa || 6 ||

Hesi naanaadare shreenivaasa |
Haridaasarolu pokke shreenivaasa |
Avara bhaasheya kelihe shreenivaasa |
Aavaasiya sairiso shreenivaasa || 7 ||

Tingalavanalla shreenivaasa |
Vatsarangalavanalla shreenivaasa |
Raajangala savadipe shreenivaasa |
Bhavangala daatuve shreenivaasa || 8 ||

Ninnava ninnava shreenivaasa |
Naa anyavanariyeno shreenivaasa |
Ayyaa manniso taaytande shreenivaasa |
Prasanna venkataadri shreenivaasa || 9 ||
***



ಬಿಡೆನೊ ನಿನ್ನಂಘ್ರಿ ಶ್ರೀನಿವಾಸ ನನ್ನದುಡಿಸಿಕೊಳ್ಳೆಲೊ ಶ್ರೀನಿವಾಸ ನಿನ್ನುಡಿಯ ಜೀತಲ್ಲೊ ಶ್ರೀನಿವಾಸ ನನ್ನನಡೆ ತಪ್ಪು ಕಾಯೊ ಶ್ರೀನಿವಾಸ ಪ.

ಬಡಿಯೊ ಬೆನ್ನಲಿ ಶ್ರೀನಿವಾಸ ನನ್ನೊಡಲ ಹೊಯ್ಯದಿರೊ ಶ್ರೀನಿವಾಸ ನಾಬಡವ ಕಾಣೆಲೊ ಶ್ರೀನಿವಾಸ ನಿನ್ನೊಡಲ ಹೊಕ್ಕೆನೊ ಶ್ರೀನಿವಾಸ 1

ಪಂಜುವಿಡಿವೆನೊ ಶ್ರೀನಿವಾಸ ನಿನ್ನೆಂಜಲ ಬಳಿದುಂಬೆ ಶ್ರೀನಿವಾಸ ನಾಸಂಜೆ ಉದಯಕೆ ಶ್ರೀನಿವಾಸ ಕಾಳಂಜಿಯ ಪಿಡಿವೆನೊ ಶ್ರೀನಿವಾಸ 2

ಸತ್ತಿಗೆ ಚಾಮರ ಶ್ರೀನಿವಾಸ ನಾನೆತ್ತಿಕುಣಿವೆನೊ ಶ್ರೀನಿವಾಸ ನಿನ್ನರತ್ತುನ ಹಾವಿಗೆ ಶ್ರೀನಿವಾಸ ನಾಹೊತ್ತು ನಲಿವೆನೊ ಶ್ರೀನಿವಾಸ 3

ಹೇಳಿದಂತಾಲಿಹೆ ಶ್ರೀನಿವಾಸ ನಿನ್ನಾಳಿಗಾಳಾಗಿಹೆ ಶ್ರೀನಿವಾಸ ಅವರೂಳಿಗವ ಮಾಳ್ಪೆ ಶ್ರೀನಿವಾಸ ನನ್ನಪಾಲಿಸೊ ಬಿಡದೆ ಶ್ರೀನಿವಾಸ 4

ನಿನ್ನ ನಾಮ ಹೋಳಿಗೆ ಶ್ರೀನಿವಾಸ ಕಳ್ಳಕುನ್ನಿ ನಾನಾಗಿಹೆ ಶ್ರೀನಿವಾಸಕಟ್ಟಿನಿನ್ನವರೊದ್ದರೆ ಶ್ರೀನಿವಾಸ ನನಗಿನ್ನು ಲಜ್ಜ್ಯಾತಕೆ ಶ್ರೀನಿವಾಸ 5

ಬೀಸಿ ಕೊಲ್ಲಲವರೆ ಶ್ರೀನಿವಾಸ ಮುದ್ರೆಕಾಸಿ ಚುಚ್ಚಲವರೆ ಶ್ರೀನಿವಾಸ ಮಿಕ್ಕಘಾಸಿಗಂಜೆನಯ್ಯ ಶ್ರೀನಿವಾಸ ಎಂಜಲಾಸೆಯಬಂಟನಾ ಶ್ರೀನಿವಾಸ6

ಹೇಸಿ ನಾನಾದರೆ ಶ್ರೀನಿವಾಸಹರಿದಾಸರೊಳು ಪೊಕ್ಕೆ ಶ್ರೀನಿವಾಸಅವರಭಾಸೆಯ ಕೇಳಿಹೆ ಶ್ರೀನಿವಾಸ ಆವಾಶೆಯ ಸೈರಿಸೊ ಶ್ರೀನಿವಾಸ 7

ತಿಂಗಳವನಲ್ಲ ಶ್ರೀನಿವಾಸವತ್ಸರಂಗಳವನಲ್ಲೊ ಶ್ರೀನಿವಾಸ ರಾಜಂಗಳ ಸವಡಿಪೆ ಶ್ರೀನಿವಾಸ ಭವಂಗಳ ದಾಟುವೆ ಶ್ರೀನಿವಾಸ 8

ನಿನ್ನವ ನಿನ್ನವ ಶ್ರೀನಿವಾಸ ನಾನನ್ಯವನರಿಯೆನೊ ಶ್ರೀನಿವಾಸ ಅಯ್ಯಾಮನ್ನಿಸೊ ತಾಯ್ತಂದೆ ಶ್ರೀನಿವಾಸ ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ 9

***********


|ಬಿಡೆನೋ ನಿನ್ನಂಘ್ರಿ ಶ್ರೀನಿವಾಸ|
✍ ಬಾಗಲಕೋಟೆಯ ಶ್ರೀ ಪ್ರಸನ್ನ ವೆಂಕಟ ದಾಸರ ಅತ್ಯಂತ ಜನಪ್ರಿಯವಾದ ಕೃತಿ.  ಇಲ್ಲಿದಾಸರು ಶ್ರೀನಿವಾಸನ ಮುಂದೆನಿಂತು ಅವನೊಡನೆ ಮಾತನಾಡಿದಂತಿರುವ ಪ್ರಮೇಯ, ಪರಂಪರೆಗಳನ್ನು ಪ್ರಸರಿಸುವ ಬಹು ಸುಂದರವಾದ ಸುಲಲಿತವಾಗಿ ಹೇಳುವ ಒಂದು ಪ್ರಸಿದ್ಧ ಕೃತಿ.
"ಬಿಡೆನೋ ನಿನ್ನಂಘ್ರಿ ಶ್ರೀನಿವಾಸ".

ಇಲ್ಲಿ ದಾಸರು ಈ ಕೃತಿಯಲ್ಲಿ ಒಟ್ಟು ನಲವತ್ತು ಬಾರಿ "ಶ್ರೀನಿವಾಸ", "ಶ್ರೀನಿವಾಸ" ಎಂದು ಅವನ ನಾಮವನ್ನು ಪದೇಪದೇ ಹೇಳಿದ್ದಾರೆ.
ಯಾಕೆ ಶ್ರೀನಿವಾಸ ಪದವನ್ನು ಇಷ್ಟು ಬಾರಿ ಹೇಳಿದರು ಇದಕ್ಕೆ ಅವರು ಕೊಟ್ಟ ಪ್ರಾಶಸ್ತ್ಯ ವೇನು?
ಅಂದರೆ 
ಭಗವಂತನ ನಾಮ ಸಂತತ ಚಿಂತನೆ ಮಾಡಬೇಕೆಂದು ಶ್ರೀ ಮಧ್ವಾಚಾರ್ಯ ಗುರುಗಳ ವಾಣಿ.
"ಸಂತತಂ ಚಿಂತೆಯೇನಂತಂ".
ಭಗವಂತನ ನಾಮ ಸ್ಮರಣೆಗೆ ಸಮಾನವಾದ ಯಜ್ಞ ಇಲ್ಲ. ವ್ರತಗಳಿಲ್ಲ.ಧರ್ಮಗಳಿಲ್ಲ, ದಾನಗಳಿಲ್ಲ. ಭಗವನ್ನಾಮ ಕೀರ್ತನೆ, ಚಿಂತನೆ ,ಸ್ಮರಣೆ, ಅನುಸಂಧಾನವಿಲ್ಲದ ,ಎಲ್ಲಾ ಕರ್ಮಗಳು ಬಂಧಕಗಳೇ ಹೊರತು ಬಿಡುಗಡೆ ಆಗುವುದಕ್ಕೆ ಸಾಧ್ಯ ಇಲ್ಲ.

ಯಾರು ಭಗವಂತನ ನಾಮ ಸಂಕೀರ್ಣತೆ ಮಾಡುವರೋ ಆ ವ್ಯಕ್ತಿ ಬಹು ಪುಣ್ಯವಂತ.ಅವನ ಪುಣ್ಯಕ್ಕೆ ಈಡಿಲ್ಲ.
ಅವನಿಗೆ ಯಮದೂತರು,ಯಮ ಧರ್ಮರಾಯನ ಪಟ್ಟಣ,ಯಮರಾಜ ಇವರೆಲ್ಲರೂ ಬಹು  ದೂರ ದೂರ.

"ಈ ನಾಮಕ್ಕೆ ಇರುವ ಮಹಿಮೆ ಅಸದೃಶ."
ಈ ನಾಮ ಮಹಿಮೆಯಿಂದ ಪರಮ ಪಾಪಿಯಾದ ಅಜಾಮಿಳನು ಮೃತ್ಯು ಪಾಶದಿಂದ ಮುಕ್ತನಾಗಿ ವೈಕುಂಠ ಪುರವೈದಿದ...
ಪ್ರಹ್ಲಾದರಾಜರು,ಧ್ರುವ ರಾಯರು, ಗಜೇಂದ್ರ,ಇನ್ನೂ ಮುಂತಾದ ಹರಿ ಭಕ್ತರು ಈ ನಾಮ ಸಂಕೀರ್ತನೆಯಿಂದಲೆ ಸಂಸಾರ ಸಾಗರವನ್ನು ಬಹು ಸುಲಭವಾಗಿ ದಾಟಿದರು.

ಮಹರುದ್ರದೇವರು ರಾಮನಾಮವನ್ನು ನುಡಿಯುತ್ತಾ ಸ್ಮರಿಸುತ್ತ ಆನಂದ ಸಾಗರದಲ್ಲಿ ಮುಳುಗಿರುವರು.

ಶ್ರೀನಿವಾಸ ನಾಮ ಸ್ಮರಣೆ ಇಂದ ಜೀವಿಯು "ನಲವತ್ತರ ಬಂಧನದಿಂದ ಬಿಡುಗಡೆ ಹೊಂದುವನು".
ಅದಕ್ಕೆ ದಾಸರು ಈ ಕೃತಿ ಯಲ್ಲಿ ನಲವತ್ತು ಬಾರಿ "ಶ್ರೀನಿವಾಸ", "ಶ್ರೀನಿವಾಸ" "ಶ್ರೀನಿವಾಸ" ಎಂದು ಹೇಳಿದ್ದಾರೆ.
ಆ ನಲವತ್ತು ಬಂಧನಗಳು ಯಾವುವು?? ಅವುಗಳ ಬಗ್ಗೆ ನಂತರ ನೋಡೋಣ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ನಿನ್ನವ ನಿನ್ನವ ಶ್ರೀನಿವಾಸ|
ನಾ ನನ್ಯವ ಅರಿಯೆನೊ ಶ್ರೀನಿವಾಸ|
ಅಯ್ಯ ಮನ್ನಿಸೋ ತಾಯ್ತಂದೆ ಶ್ರೀನಿವಾಸ|
ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ|
🙏ಹರೇ ಶ್ರೀನಿವಾಸ🙏
ಕೃಪೆ:
ಹಿರಿಯರಾದ, ಶ್ರೀ ಕೌತಾಳಂ ಅಪ್ಪಣ್ಣಾಚಾರ್ಯರು ಹೇಳಿದ್ದು.
************

|ಬಿಡೆನೊ ನಿನ್ನಂಘ್ರಿ ಶ್ರೀನಿವಾಸ|
ಲೇಖನ ಮಾಲೆ ೨.
🙏🙏
ಶ್ರೀ  ವೆಂಕಟದಾಸರು
ಈ ಕೃತಿಯಲ್ಲಿ ಒಟ್ಟು ನಲವತ್ತು ಬಾರಿ ಶ್ರೀನಿವಾಸ ಶ್ರೀನಿವಾಸ ಎಂದು ಪ್ರತಿನುಡಿಯ ಕೊನೆಯಲ್ಲಿ ಹೇಳಿದ್ದಾರೆ.
ಭಗವಂತನ ನಾಮ ಮಹಿಮೆಯನ್ನು ಪುರಾಣಗಳು ಬಹಳ ಮುಕ್ತ ಕಂಠದಿಂದ ವರ್ಣಿಸಿವೆ.
ಯಾರೇ ಆಗಲಿ,ಯಾವ ಸ್ಥಿತಿ ಯಲ್ಲಿ ಇರಲಿ,ಹ್ಯಾಗೇ ಇರಲಿ ಭಗವಂತನ ನಾಮ ಸಂಕೀರ್ತನೆ ಭಕ್ತಿ ಶ್ರದ್ಧೆ ಯಿಂದ ಮಾಡಿದರೆ ಸಾಕು ಅಂಥಾ ವ್ಯಕ್ತಿಯ ಎಲ್ಲಾ ಪಾಪಗಳು ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾಗುವವು.
ಆ ಜೀವಿಯ ಸಕಲ ದುಃಖ ಗಳು ದೂರಾಗುವವು.ಕೈವಲ್ಯ ವು ಅವನ ಕೈವಶವಾಗುವದು.
ಇದನ್ನೆ 
ಮಾನವಿ ಪ್ರಭುಗಳು ಸಹ 
"ಶ್ರೀ ಮುಕುಂದನ ಪರಮಮಂಗಳ ನಾಮ ನರಕಸ್ಥರನು ಸಲುಹಿತು" ಎಂದು ಹೇಳಿದ್ದಾರೆ.
ಇನ್ನೂ ಭಗವಂತನ ನಾಮ ಮಹಿಮೆಯನ್ನು ಶ್ರೀ ವಿಜಯಪ್ರಭುಗಳು ಸಹ ಬಹುವಾಗಿ ಹೇಳಿದ್ದಾರೆ.
ನಂತರ ಅವುಗಳ ಬಗ್ಗೆ ನೋಡೋಣ.
|ಬಿಡೆನೊ ನಿನ್ನಂಘ್ರಿ ಶ್ರೀನಿವಾಸ| 
ಈ ಕೃತಿಯಲ್ಲಿ ದಾಸರು ಶ್ರೀನಿವಾಸ ನಾಮವೆಂಬ ಅಮೃತಪಾನವನ್ನು ಮಾಡಿ,ಬಹುವಾಗಿ ಪ್ರತಿ ಚರಣಕ್ಕೆ ನಾಲ್ಕು ಬಾರಿ ಒಟ್ಟಾರೆ ಹತ್ತು ಚರಣಗಳಿಗೆ ಸೇರಿ ನಲವತ್ತು ಬಾರಿ ಶ್ರೀನಿವಾಸ ಶ್ರೀನಿವಾಸ ನಾಮವನ್ನು ಹೇಳಿದ್ದಾರೆ.

ಶ್ರೀನಿವಾಸನ ನಾಮ ಸ್ಮರಣೆ ಇಂದ ಜೀವಿಯು ನಲವತ್ತರ (40)ಬಂಧನದಿಂದ ಮುಕ್ತ ನಾಗುವ.
ಅವು ಯಾವುವು ಎಂದರೆ.
👇
ತ್ರಿಗುಣಗಳು              03
ತತ್ವಗಳು                    24
ಅರಿಷಡ್ವರ್ಗಗಳು       06
ಪಂಚಮಹಾಪಾತಕಗಳು 05
ಹುಟ್ಟು ಸಾವುಗಳು    02     
                                     -------
                                     40
                                       ----
ಈ ಸೃಷ್ಟಿಗೆ ಬಂದ ಪ್ರತಿಯೊಂದು ಜೀವಿಯುಮೊಟ್ಟ ಮೊದಲ ಬಾರಿಗೆ ತ್ರಿಗುಣಗಳಿಂದ ಬಂಧಿತನಾಗುವನು.ಇದನ್ನು ಲಿಂಗ ಶರೀರವೆಂದು ಹೇಳುವರು.ಇದು ಮೊದಲ ಬಂಧನ.

ಈ ತ್ರಿಗುಣಗಳ ವಿಕಾರಗಳೇ ಇಪ್ಪತ್ತನಾಲ್ಕು ತತ್ವಗಳು.ಇದು ಎರಡನೆಯ ಬಂಧನ.

ಈ ತ್ರಿಗುಣಗಳ ಹಾಗು ೨೪ತತ್ವಗಳ ಬಂಧನದಿಂದ ಜೀವಿ ಪ್ರಾರಂಭದಲ್ಲಿ ಅರಿಷಡ್ವರ್ಗಗಳಿಗೆ ಬಲಿಯಾಗುವನು.
ಅವು ಯಾವುವೆಂದರೆ ಕಾಮ ಕ್ರೋಧ, ಮೋಹ ಮದ ಮತ್ಸರ ಲೋಭ.
ಇವೇ ಆರು ಅರಿಷಡ್ವರ್ಗಗಳು.
ಇದು ಮೂರನೆಯ ಬಂಧಕ.

ಈ ಅರಿಷಡ್ವರ್ಗಗಳ ಪ್ರಭಾವದಿಂದಾಗಿ ಜೀವಿ ಪಾಪ ಕರ್ಮಗಳನ್ನು ಬಹುವಾಗಿ ಆಚರಣೆ ಮಾಡುತ್ತಾ ಹೋಗುವನು.
ಪಾಪಕರ್ಮದಿಂದ ಪಾಪವು ಹೊರತಾಗಿ ಪುಣ್ಯ ಗಳಿಸಲು ಸಾಧ್ಯವೇ??
ಕೆಸರಿನಿಂದ ಕೆಸರು ತೊಳೆದಂತೆ ಹೊರತಾಗಿ ಬೇರೆ ಏನು ಆಗುವುದಿಲ್ಲ.
ಅರಿಷಡ್ವರ್ಗಗಳ ಪ್ರಭಾವದಿಂದ ಜೀವಿಯು ಪಂಚ ಮಹಾಪಾತಕಗಳನ್ನು ಮಾಡಲು ಹೇಸುವದಿಲ್ಲ.ಇದು ನಾಲ್ಕನೇ ಬಂಧಕ.

ಇದರಿಂದಾಗಿ ಜೀವಿಯು  ಮತ್ತೆ ಹುಟ್ಟು ಸಾವುಗಳ ಸಂಕೋಲೆಗೆ ಸಿಳುಕಿ ಬಳಲುವನು.
ಇದು ಐದನೆಯ ಬಂಧನ.
ಒಟ್ಟಾರೆ ಈ ನಲವತ್ತು ಬಂಧನಗಳಿಂದ ಪಾರಾಗಬೇಕಾದರೆ ಭಗವಂತನ ನಾಮ ಸ್ಮರಣೆ ಅತಿ ಅವಶ್ಯಕ.

ಈ ಎಲ್ಲಾ ಬಂಧನಗಳ ಬಿಡುಗಡೆ ಆಗುವದು ಭಗವಂತನ ನಾಮ ಸಂಕೀರ್ತನೆ ಇಂದ ಹೊರತುಪಡಿಸಿ ಬೇರೆ ಯಾವುದೇ ಮಾರ್ಗ ಇಲ್ಲ.

ಈ ನಲವತ್ತರ ಬಂಧನದಿಂದ ಬಿಡುಗಡೆ ಆಗಲು ಶ್ರೀನಿವಾಸನ ನಾಮ ಸ್ಮರಣೆ ಇಂದ ಮಾತ್ರ ಸಾಧ್ಯ ಎಂದು ದಾಸರು ತಮ್ಮ ಈ ಕೃತಿಯಲ್ಲಿ ಒಟ್ಟು ನಲವತ್ತು ಬಾರಿ "ಶ್ರೀನಿವಾಸ, ಶ್ರೀನಿವಾಸ" ಎಂದು ನುಡಿದಿದ್ದಾರೆ.
ಅದು  ಬಿಡುಗಡೆಆಗುವದು ಹೇಗೆ ಅಂತ ನಂತರ ನೋಡೋಣ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ನಿನ್ನವ ನಿನ್ನವ ಶ್ರೀನಿವಾಸ|
ನಾನನ್ಯವ ಅರಿಯೆನೋ ಶ್ರೀನಿವಾಸ|
ಅಯ್ಯಾ ಮನ್ನಿಸೋ ತಾಯ್ತಂದೆ ಶ್ರೀನಿವಾಸ|
ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ|
🙏ಹರೇ ಶ್ರೀನಿವಾಸ🙏
***********



|ಬಿಡೆನೊ ನಿನ್ನಂಘ್ರಿ ಶ್ರೀನಿವಾಸ|
ಲೇಖನ ಮಾಲೆ ೩
🙏🙏🙏🙏🙏
ಜೀವಿಗೆ ಬಂಧನವಾದ ಮತ್ತು ಬಂಧಕವಾದ ನಲವತ್ತು ಬಂಧನಗಳು ಯಾವುವೆಂದರೆ..

ತ್ರಿಗುಣಗಳು              03
ತತ್ವಗಳು                    24
ಅರಿಷಡ್ವರ್ಗಗಳು       06
ಪಂಚಮಹಾಪಾತಕಗಳು*05
ಹುಟ್ಟು ಸಾವುಗಳು           02
                                     -------
                                     40
      
ಈ ನಲವತ್ತರ ಬಂಧನದಿಂದ ಬಿಡುಗಡೆ ಯಾವಾಗ ಎಂದರೆ ಸತತವಾಗಿ, ಶ್ರೀನಿವಾಸನ  ನಾಮಸ್ಮರಣೆಯಿಂದ ಮಾತ್ರ ಸಾಧ್ಯ ಎಂದು ಸೂಚಿಸುವುದಕ್ಕಾಗಿ ಶ್ರೀ ಪ್ರಸನ್ನ ವೆಂಕಟ ದಾಸರು ಈ ಕೃತಿಯಲ್ಲಿ ಒಟ್ಟು ನಲವತ್ತು ಬಾರಿ "ಶ್ರೀನಿವಾಸ", "ಶ್ರೀನಿವಾಸ" ಎಂದು ಹೇಳಿದ್ದಾರೆ.
ಬಿಡುಗಡೆ ಹೇಗೆ ಎಂಬುದನ್ನು ತಿಳಿಯಲು ಪ್ರಯತ್ನ.
ಸತತವಾಗಿ, ಸಂತತವಾಗಿ,ನಿರಂತರವಾಗಿ ಶ್ರೀನಿವಾಸನ ನಾಮ  ಸ್ಮರಣೆ ಇಂದ ಜೀವಿಗೆ ಪ್ರತಿ ಬಂಧನವಾದ ಕಾಮ,ಕ್ರೊಧ,ಮದ,ಮತ್ಸರ,ಲೋಭ ಮತ್ತು ಮೋಹ ಇವುಗಳು ಮೊದಲು ದೂರವಾಗುವವು.
ಅರಿಷಡ್ವರ್ಗಗಳು ದೂರವಾದ ಮೇಲೆ ಜೀವಿಯು ಪಾಪ ಕರ್ಮಗಳನ್ನು ಮಾಡಲು ಸಾಧ್ಯವಿಲ್ಲ.
ಇದರಿಂದ ಅವನು ಪಾಪಗಳಿಂದ ದೂರವಾಗಿ ಭಗವಂತನಿಗೆ ಸಂಭಂದಿಸಿದ ಮತ್ತು ಭಗವಂತನ ಕುರಿತಾದ ಪ್ರಜ್ಞೆ ಯನ್ನು ಬೆಳೆಸುವ ಪುಣ್ಯ ಕರ್ಮಗಳನ್ನು ಭಗವಂತನ ಪ್ರೇರಣೆ ಇಂದ ಮಾಡುವನು.
ಇದರಿಂದ 
ಅವನಿಗೆ ಬಂಧಕ ಗಳಾದ ತ್ರಿಗುಣಗಳು ಮತ್ತು ೨೪ ತತ್ವಗಳಾಗಲಿ ಇವನಿಗೆ ಬಂಧಕವಾಗದೆ ಸಾಧನೆಯ ಕಡೆಗೆ ಕರೆದೊಯ್ಯುವದಕ್ಕೆ ಪೂರಕವಾಗುವವು.
ಅರಿಷಡ್ವರ್ಗಗಳಿಗೆ ಸಿಕ್ಕ ಜೀವಿಯ ನಯನೇಂದ್ರಿಯಗಳು ಕೇವಲ
ಪ್ರಪಂಚದ ಕೆಟ್ಟವಸ್ತುಗಳನ್ನು ನೋಡುತ್ತಾ ಆನಂದ ಪಡುವ.
ಇದರಂತೆಯೇ ಉಳಿದ ಇಂದ್ರಿಯಗಳ ಕಾರ್ಯ.
ಸತತವಾಗಿ ಶ್ರೀನಿವಾಸನ ನಾಮ ಸ್ಮರಣೆ ಇಂದ ಅ ಕೆಟ್ಟ ದೃಶ್ಯಗಳನ್ನು ಅಥವಾ ಕೆಟ್ಟದ್ದನ್ನು ನೋಡಲು ಮನಸ್ಸು ಬಾರದು.
ಯಾವುದೇ ಪದಾರ್ಥಗಳನ್ನು ಅ ಅಥವಾ ವಸ್ತುಗಳ ನ್ನು ನೋಡಿದಾಗ   ಅವುಗಳ ಅಂತರ್ಯಾಮಿಯಾದ ಮತ್ತು ಆ ವಸ್ತುಗಳನ್ನು ಸೃಷ್ಟಿಸಿದ ಭಗವಂತನ ಲೀಲೆಯನ್ನು ನೋಡಿ ಆನಂದ ಪಡುವನು.
ಇದರಂತೆಯೇ 
ಉಳಿದ ಇಂದ್ರಿಯಗಳ ಕೆಲಸವು ಸಹ, ಭಗವಂತನ ಕಡೆ ಚಿಂತನೆ  ಮಾಡುತ್ತಾ ಆನಂದ ಹೊಂದುವವು.ಕೊನೆಯಲ್ಲಿ ಆ ಜೀವಿಯ ಜೀವನವು ಧನ್ಯತೆಯನ್ನು ಹೊಂದುತ್ತದೆ. 
ಯಾವಾಗ ಈ ಜೀವನ ಧನ್ಯತೆ ಹೊಂದುತ್ತದೆ ಅವಾಗ ಹುಟ್ಟು ಸಾವುಗಳ ಬಂಧನ ದಿಂದ ಜೀವಿಯು ದೂರಾಗಿ ಮುಕ್ತ ನಾಗುವನು.
ಇಂತಹ 
ಅಪೂರ್ವ ಪ್ರಮೇಯ ಮತ್ತು ಭಗವಂತನ ಅನುಗ್ರಹ ವನ್ನು ಸೂಚಿಸಲು ದಾಸರು ಒಟ್ಟು ನಲವತ್ತು ಬಾರಿ ಪುನಃ ಪುನಃ "ಶ್ರೀನಿವಾಸ", "ಶ್ರೀನಿವಾಸ", ಎಂದು ಹೇಳುತ್ತಾ "ಬಿಡೆನೋ ನಿನ್ನಂಘ್ರಿ ಶ್ರೀನಿವಾಸ" ಎಂದು ಹೇಳಿ ತಮ್ಮ ದಾಸ ದೀಕ್ಷೆ ಮತ್ತು ಭಕ್ತಿಯನ್ನು ಇಲ್ಲಿ ಪ್ರಕಟ ಮಾಡಿದ್ದಾರೆ.
ಪ್ರಾರಂಭದಲ್ಲಿ    
"ಬಿಡೆನೋ ನಿನ್ನಂಘ್ರಿ ಶ್ರೀನಿವಾಸ" ಎಂದು ಹೇಳಿದ್ದಾರೆ
ಅಂದರೆ "ಹೇ ಶ್ರೀನಿವಾಸ!  ನಿನ್ನಂಘ್ರಿ ಯನ್ನು ಯಾವತ್ತಿಗೂ  ಯಾವಾಗಲೂ ಸಹ ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ. 
ಅಂಘ್ರಿ ಮತ್ತು ಶ್ರೀನಿವಾಸ ಪದದ ಅರ್ಥ ಚಿಂತನೆ ನಾಳೆ ನೋಡೊಣ.
ಶ್ರೀ ವಿಷ್ಣುವಿನ ನಾಮ ಸ್ಮರಣೆ ಯೇ ನಿಜವಾದ ಸಜ್ಜನ ಸಂಗ.
ಶ್ರೀವಿಷ್ಣು ವಿನ ನಾಮ ಸ್ಮರಣ ಮುಕ್ತಿ ಗೆ ದಾರಿ.ಈ ಹರಿ ನಾಮ ಸ್ಮರಣೆಗೆ ಸಮವಾದ ಸಾಧನೆ ಮತ್ತೊಂದು ಇಲ್ಲ.
ಭೂ ಪ್ರದಕ್ಷಿಣೆ, ಸಕಲ ತೀರ್ಥ ಯಾತ್ರೆಗಳಿಗಿಂತಲು ಮಿಗಿಲಾದುದು ಈ ಭಗವಂತನ ನಾಮ ಸ್ಮರಣೆ.
ಅಂತಹ ಭಗವಂತನ ನಾಮ ಸ್ಮರಣೆ ಸದಾ ಮಾಡಲು ಪ್ರತಿಯೊಂದು ಮನುಷ್ಯಜೀವಿಯು ಇಂದಿನಿಂದ ಈ ಕ್ಷಣದಿಂದ ಪ್ರಯತ್ನ ಮಾಡೋಣ.
🙏  ಶ್ರೀ ಕೃಷ್ಣಾರ್ಪಣಮಸ್ತು🙏 
 ನಿನ್ನವ ನಿನ್ನವ ಶ್ರೀನಿವಾಸ|
ನಾನನ್ಯವ ಅರಿಯೆನೋ ಶ್ರೀನಿವಾಸ|
ಅಯ್ಯಾ ಮನ್ನಿಸೋ ತಾಯ್ತಂದೆ ಶ್ರೀನಿವಾಸ|
ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ|
🙏ಹರೇ ಶ್ರೀನಿವಾಸ🙏
**********




No comments:

Post a Comment