Monday, 11 November 2019

ಜಯ ಪಾಂಡುರಂಗ ಹೋ ಜಲದ ನಿಭಾಂಗ ankita pranesha vittala

by ಪ್ರಾಣೇಶದಾಸರು
ಜಯ ಪಾಂಡುರಂಗ ಹೋ ಜಲದ ನಿಭಾಂಗ ಹೋ|ಜಗದಂತರಂಗ ಹೋ ಜಯ ಪಾಂಡುರಂಗ ಹೋ ಪ

ನೀಲಭೂಧರವಾಸಕೌಸ್ತುಭಭೂಷ ರಮೆಯಾಧೀಶಸುಮನಸ|ಪಾಲ ಗುಣಗಂಭೀರ ನವನೀತಚೋರ ಕುಜನಕುಠಾರ| ನರಹರಿ ||ಫಾಲಲೋಚನಬಂಧು ದೈತ್ಯನ ಕೊಂದು ವೇದವ ತಂದು ದ್ರುಹಿಣಗೆ |ಮೇಲು ಶರುಣುದಲಿತ್ತೆ,ಮಂದರಪೊತ್ತೆ ಸುಂದರ ಮೂರ್ತಿ 1

ನಿಗಮವಂದಿತ ರಾಮಹರಿಪೂರ್ಣ ಕಾಮ ಸದ್ಗುಣಧಾಮ, ವಾಮನ |ಮಗನ ಮೂಗಿಲಿ ಪುಟ್ಟಿ, ಹೇಮನ ಕುಟ್ಟಿ,ಅವನಿತಂದಿಟ್ಟಿ, ಈರೇಳು ||ಜಗದಿ ಪೂಜಿತನಾದಿ ಕೈಟಭ ಭೇದಿ ಇಭಪನ ಕಾಯ್ದಿ, ಪ್ರಣತರ |ಅಘವನೋಡಿಸುತಿಪ್ಪ ಹಲಾಯುಧತಲ್ಪಮನ್ಮಥನಪ್ಪ 2

ವೇದ ವಿಸ್ತರ ಮಾಡ್ಡೀ, ದಾನವ ಬೇಡ್ಡೀ, ದನುಜನಿಗ್ಯೋಡ್ಡೀ, ಕುರುಕುಲ |ಸೂದನ, ಕಿರೀಟ ಸೂತ, ಪವಮಾನ ತಾತ, ದುರ್ಬಲನಾಥ ಎನ್ನನು ||ಆದರದಿ ಕೈಪಿಡಿಯೋ, ದುರಿತವ ತಡೆಯೊ, ದುರ್ಮತಿ ಕಡಿಯೊ,ಅಗಣಿತ|ಮೋದಪ್ರಾಣೇಶ ವಿಠಲ, ನರಮೃಗ, ನಿಟಿಲನೇತ್ರ, ಅಕುಟಲ3
*******

No comments:

Post a Comment