Friday, 8 November 2019

ಎತ್ತಾರೆ ಹಿಂದಿನ ಮಾತು ankita pranesha vittala

by ಪ್ರಾಣೇಶದಾಸರು
ಎತ್ತಾರೆ ಹಿಂದಿನ ಮಾತು |
ಭಾರತೀಶನಿನ್ನಭೃತ್ಯರು ತಮ್ಮನುವರಿತು | 
ನೀ ಸಲಹದಿದ್ದರೆ ಹೀಗೆಂದು ಪ

ಮೂಗು ಹಿಡಕೊಂಡು ಕುಳಿತಿದ್ದಿ ನೂರತೊಂಭತ್ತೆಂಟು ಕಲ್ಪ |ಆಗಲೊಬ್ಬರೂ ನಿನ್ನನಾರೆಂದು ಕೇಳಾರೋ ||ಈಗ ದೇವರ ದಯೆಯಿಂದ ಹದಿನಾಲ್ಕು ಲೋಕಕ್ಕೆ ಮಂತ್ರಿ |ಯಾಗಿ ಸಂತೋಷದಿಂದ ಮೇಲು ಮೆರೆವುದಕ್ಕೀ ಗರ್ವವೆಂದು 1

ಊರ ಸೇರದಲೆ ಕಂಡ ಗಿಡದ ತೊಪ್ಪಲುಗಳ ತಿಂದು |ಅರಣ್ಯದೊಳು ಬಹುಕಾಲ ಬದುಕಿದ್ದು ಮತ್ತೂ ||ಶ್ರೀರಾಮನಾಳಾಗಿ ಶಿಲೆಯ ಪೊತ್ತುದು ಜಗವೆಲ್ಲಾ ಬಲ್ಲದು ಮುಂದೆ |ವಾರಿಜಾಸನ ಪದವಿಯಾಳೆಂದುಹರಿನುಡಿದುದಕೀಗರ್ವವೆಂದು 2

ತಿರಿದುಂಡು ಹನ್ನೆರಡಬ್ದ ವನವಾಸ ಅಜ್ಞಾತವೊಂದು |ವರುಷ ಮತ್ಸ್ಯಾಧಿಪನಾಗಾರದಲಿ ಪಾಕ ಮಾಡಿ ||ತರುಣೀ ಮಾನಭಂಗವ ನೋಡಿ ಸುಮ್ಮನಿದ್ದೆಯಾಗ ಕೃಷ್ಣ |ತರಿದು ದುರ್ಯೋಧನರ ರಾಜ್ಯ ನಿಮಗಿತ್ತುದಕೀ ಗರ್ವವೆಂದು 3

ಎಲ್ಲರೂ ಕಂಡದ್ದು ಹುರಳಿ ಗುಗ್ಗರಿ ತಿಂದು ಭಿಕ್ಷಾರ್ಥಿಯಾಗಿ |ಮುಳ್ಳು ಮರದಡಿಯಲ್ಲಿ ಕುಳಿತದ್ದು ಹಿರಿಬದರಿಯಲ್ಲಿ ||ಸುಳ್ಳಲ್ಲ ವೇದವ್ಯಾಸಾನಂತ ವೇದಾರ್ಥ ತಿಳಿಸಿ ಸಕಲ |ಬಲ್ಲವನೆಂದು ಪೆಸರೂ ಕೊಟ್ಟದೆವೇ ಈ ಗರ್ವವೆಂದು 4

ಏನೆಂಬುವ ಸರ್ವರಲ್ಲಿ ಹೊಕ್ಕು ಬಳಕೆ ಮಾಡುತಿದ್ದಿ |ಹೀನರು ನಿನಗೀಸು ನೀರ ಹಾಕಂದುಕೇಳಿ||ಪ್ರಾಣೇಶ ವಿಠಲನ್ನ ಭಜಿಸಿ ಪೂರ್ಣ ದಯಕೆ ಪಾತ್ರನಾಗಿ |ಮೀನಾಂಕಾರಿ ಮುಖರಿಂದರ್ಚನೆಗೊಂಬಕ್ಕೀ ಗರ್ವವೆಂದು 5
*******

No comments:

Post a Comment