Thursday, 14 November 2019

ಶರಣು ಶ್ರೀ ಮಾರುತನ ರಾಣಿಯೆ ankita pranesha vittala

by ಪ್ರಾಣೇಶದಾಸರು
ಭಾರತೀದೇವಿ ಸ್ತೋತ್ರಗಳು
ಶರಣು ಶ್ರೀ ಮಾರುತನ ರಾಣಿಯೆ |ಶರಣು ಮಂಗಳ ಶ್ರೋಣಿಯೇ ||ಶರಣು ಸ್ಮಿತ ಮುಖ ಉರಗವೇಣಿಯೆ |ಶರಣುಸರಸಿಜಪಾಣಿಯೇ ಪ

ಇಂದ್ರಸೇನೆ ಪುರಂದರಾರ್ಚಿತೆ |ಇಂದಿರಾಪತಿ ಕೃಷ್ಣನಾ ||ನಂದದಲಿ ಸೇವಿಸುವ ಭಕುತಿಯ |ಇಂದುಧರನಿಗೆ ಕೊಡುವಳೇ 1

ಗರುಡನುತ ಪದ ಸರಸೀರುಹೆ ವೃಕೋ |ದರನ ಪ್ರೀತಿಗೆ ಯೋಗ್ಯಳೇ ||ತರುಣಿ ಶಿರೋಮಣಿ ದುರ್ಮತಿಯ ಕಳೆದು |ಕರುಣದಲಿಕರಪಿಡಿವುದು 2

ವಿದ್ಯುನ್ನಾಮಕೆ ಧಾತಜಾತಳೆ |ಶ್ರದ್ಧೆ ದಾತೆ ನಿರಂತರ ||ತಿದ್ದಿ ಯನ್ನ ವಕ್ರಮತಿಯದ್ರುಹಿಣ|ವಿದ್ಯೆಪಾಲಿಸೆ ಭಾರತೀ 3

ಕಾಳೀ ದ್ರೌಪದಿಸ್ಥಾಣುಕನ್ಯಾ |ಶೈಲಜಾದಿ ನಮಸ್ಕøತೇ ||ಕಾಲಿಗೆರಗುವೆ ಯನ್ನಬಿನ್ನಪ|ಕೇಳಿಜ್ಞಾನವ ಪ್ರೇರಿಸೇ 4

ಗಜಗಮನೆ ನಳನಂದಿನಿ ಅನಘೆ |ಸುಜನಹೃದಯ ನಿಕೇತನೆ ||ತ್ರಿಜಗಪತಿಪ್ರಾಣೇಶ ವಿಠಲನ |ಭಜನೆಯೊಳು ಮನ ನಿಲ್ಲಿಸೇ 5
********

No comments:

Post a Comment