Wednesday 13 November 2019

ನಮಿಸೊ ಗಂಧವಹಗೆ ಪ್ರತಿದಿನ ನಿನ್ನ ankita pranesha vittala

by ಪ್ರಾಣೇಶದಾಸರು
ನಮಿಸೊ ಗಂಧವಹಗೆ ಪ್ರತಿದಿನ ನಿನ್ನ |ಶ್ರಮವ ಕಳೆದು ಅಭೀಷ್ಟಿಯ ಕೊಡುವ ಮನುಜ ಪ

ಹರಿಕರುಣಿಸದಿರೆಗುರುಕರುಣಿಸುವನು |ಗುರುಕರುಣಿಸದಿರೆಹರಿಜರೆವ ||ಧರೆಯೊಳು ವಾತಪ್ರಸಾದ ಸಂಪಾದಿಸಿ |ಶಿರಿವಲ್ಲಭಗೆ ಬೇಕಾದವರ ಕೇಳು ಮನುಜ 1

ಹನುಮನೊಲಿದನೆಂದು ಒಲಿದ ಸುಗ್ರೀವಗೆ |ಮನಸಿಜಪಿತನು ತನ್ನಯಚರಣ|ಘನವಾಹ ಸುತ ಭಜಿಸಿದರಿನ್ನವಗೆ ಪ್ರಭಂ |ಜನನೊಲಿಯದಕೆ ಕೊಂದನು ಕೇಳೆಲೊ ಮನುಜ 2

ದುರ್ಜನಾಂತಕಗೆ ಬೇಕಾದ ಕಾರಣದಿಂದ |ಅರ್ಜುನಾದಿಗಳು ಸುಖವ ಬಿಟ್ಟರು ||ಅಬ್ಜಾಪ್ತಸುತ ಅಸಮರ್ಥನೆ ರಣದೊಳು |ನಿರ್ಜಿತನಾಗಲು ತಿಳಕೊ ಇದು ಮನುಜ 3

ಸುರರೆಲ್ಲ ಕೂಡಿ ನ್ಯಾಯವ ಮಾಡಿ ನೋಡಲು |ಸರಿಯಾಗಲಿಲ್ಲವು ಮಾರುತಗೆ ||ಗಳವುದ್ಭವಿಸಲುಮಥನಕಾಲದಿ ಆದಿತ್ಯರ |ಮೊರೆಕೇಳಿಪ್ರಾಶನ ಮಾಡಿದ ಮನುಜ 4

ಶಮೆಯಲ್ಲಿ ದಮೆಯಲ್ಲಿ ಸರ್ವಗುಣದಲ್ಲಿ |ಪವಮಾನಗೆ ಸರಿಯುಂಟಾವನು ಜಗದಿ ||ಅಮಲ ಪ್ರಾಣೇಶ ವಿಠಲಗಲ್ಲದವನು |ಯಮ ಸದನಕೆ ಯೋಗ್ಯ ಯಮಗಲ್ಲೆಂಬ ಮನುಜ 5
******

No comments:

Post a Comment