Sunday 10 November 2019

ಅಂಗನಾಕುಲ ಶಿರೋಮಣಿ ಶ್ರೀಮಾ ankita pranesha vittala

by ಪ್ರಾಣೇಶದಾಸರು
ಅಂಗನಾಕುಲ ಶಿರೋಮಣಿ ಶ್ರೀಮಾ |ಶೃಂಗಾರವನಧಿಗರುಡಧ್ವಜೆಮಂಗಳಾದೇವಿ ಹಸೆಗೇಳು ಪ

ಕ್ಷೀರಸಾಗರಕನ್ಯಾವಿಧಿ|ಮಾರಾಂತಕ ಶಕ್ರಕರಾರ್ಚಿತೆ ||ವಾರಿಜಸದನೆ ಸಿರಿದೇವಿ |ಸಿರಿದೇವಿ ತ್ರೈಲೋಕಕೆ ಜನನೀ ರಕ್ಕಸಾರಿ ಹಸೆಗೇಳು 1

ಭಾರತಿಪಾರ್ವತಿ ಶಾಮಲ ಮುಖ |ನೂರು ಸುರರರಸಿಯರೆಲ್ಲರು ||ಮೀರಿಧರುಷದಲಿ ಪದಪಾಡಿ | ಹಸೆಯಬರೆದಿಹರೆಲೆ ನಾರಾಯಣನ ರಾಣೀ || ಹಸೆಗೇಳು 2

ಋಷಿಗಳು ವೇದ ಪುರಾಣಗಳುಪ |ನಿಷದ್ವಾಕ್ಯಗಳಿಂದ ತುತಿಸುವರು ||ವಸುಧೆಗಾನಂದ ಪಡಿಸಲು |ಶುಭಕುಂದರದನೆಆಸಿತಕುಂತಲೆಯೇ ಹಸೆಗೇಳು 3

ಕಡೆಗಣ್ಣಿನ ನೋಟದಿ ಲೋಕವ |ತಡೆಯದೆ ಪುಟ್ಟಿಸಿ ಪಾಲಿಸಿ ಪುನಃ ||ಕೆಡಿಸುವೆ ಸ್ವೇಚ್ಛೆಯಲಿ ವೈದರ್ಭೆ ಸತ್ರಾಜಿತೆಕೃತಿ|ಯೊಡತಿ ಜಯಮಾಯಾ ಹಸೆಗೇಳು 4

ಪ್ರಾಣೇಶ ವಿಠಲನೊಳು ದ್ವೇಷಿಪ |ಹೀನರ ಸಂಹರಕೋಸುಗ ಶರ ||ಪಾಣಿಯಾಗಿಹಳೆಶ್ರುತಿವೇದ್ಯೆ | ಶ್ರುತಿವೇದ್ಯೆ ದೇವದೇವಿಕಅಹಿವೇಣಿಶುಕವಾಣಿ | ಹಸೆಗೇಳು 5
******

No comments:

Post a Comment