Monday, 11 November 2019

ಗೋಪಿ ಹೇಳೆ ರಂಗಗೆ ಬುದ್ಧಿ ankita pranesha vittala

by ಪ್ರಾಣೇಶದಾಸರು
ಗೋಪಿಹೇಳೆ ರಂಗಗೆ ಬುದ್ಧಿ ಪ

ಗೋಪಿಹೇಳೆ ರಂಗಯ್ಯಗೆ ಬುದ್ಧಿ ಪುರದೊಳು |ರಾಪು ಮಾಡುವದು ವೆಗ್ಗಳವಮ್ಮ ಅ.ಪ.

ಪೋರರ ಒಡಗೂಡಿ ಬಂದು ಎಲ್ಲರು ನೋಡಸೀರೆಯಸೆರಗುಪಿಡಿವರೇನೇ ||ಜಾರೆ ಹೆಂಗಳೆರಾದರೊಳ್ಳತು ತಾಂ ತಡವಲುಈ ರೀತಿಯೆ ಪತಿಯಿದ್ದವರ ಕೂಡ 1

ಹಿರಿಯಣ್ಣಗಿಟ್ಟಿದ್ದ ಮೀಸಲ ತುಪ್ಪವಸುರಿದು ಗಡಿಗೆ ವಡದೋಡಿದ |ಗೋಪಿ||ಥರವೆ ನಿಮ್ಮಮ್ಮನಲ್ಲಿಗೆ ಬಾರೋ ಎಂದರೆಸೆರಗ ಕೊಸರಿಮಾನಕೊಂಬನೆ | ಗೋಪಿ 2

ಕತ್ತಲೊಳಗೆ ಮಕ್ಕಳಂತೆ ಸಣ್ಣವನಾಗಿಹತ್ತಿಲಿ ಬಂದೊರಗುವನಮ್ಮ |ಗೋಪಿ||ಇತ್ತತ್ತ ಬಾ ಕಂದಯೆಂದಪ್ಪಿಕೊಳಲವಕೃತ್ಯವ ಮಾಡಿ ಓಡುವನಮ್ಮ | ಗೋಪಿ 3

ಆಕಳ ಮೊಲೆಯುಂಡು ತರುವಾಯ ಕರುಬಿಟ್ಟುತಾ ಕೂಗುವನೆ ಕರಕೊಳಿರೆಂದು |ಗೋಪಿ||ಗೋಕುಲದೊಳು ಬಹು ದಿವಸವಾಯಿತು ದುಡ್ಡುತೂಕ ಕ್ಷೀರವಮಾರಕಾಣೆವೇ | ಗೋಪಿ 4

ಬಚ್ಚಲೊಳಗೆ ಪ್ರಾಯದವಳು ಕುಳಿತು ಎಣ್ಣೆಹಚ್ಚಿಕೊಂಡೆರಕೊಳ್ಳುತಿದ್ದೆವೆ |ಗೋಪಿ||ಎಚ್ಚರಿಸದೆ ಬಂದು ಎದುರಿಗೆ ನಿಲ್ಲುವಹುಚ್ಚನೆ ಬಹು ಜಾಲಗಾರನು | ಗೋಪಿ 5

ಪುರುಷಗೆ ಸಂಶಯ ನಮ್ಮ ಮನೆಗೆ ಕೃಷ್ಣಬರುವನೆಂಬು ಮಜ್ಜನಕೆ ಜಲ |ಗೋಪಿ||ಬೆರಸಿಟ್ಟರೆಲ್ಲವು ಚೆಲ್ಲಿ ಪೋಗುವಗಂಡಕರೆಕರೆಮಾಡುವ ಪರಿಪರಿ | ಗೋಪಿ 6

ಪೋಗಲಿನಿತೂ ಮುಂದೆ ಪ್ರಾಣೇಶ ವಿಠಲಗೆಹೀಗಿರುಯೆಂದು ನೀ ಪೇಳಮ್ಮಾ |ಗೋಪಿ||ಈಗುಸುರಿದ ಮಾತು ಸರಿಬಾರದಿದ್ದರೆಸಾಗಿರೆಂದಪ್ಪಣೆ ಕೊಡಿರೆಮ್ಮ | ಗೋಪಿ 7
********

No comments:

Post a Comment