Wednesday 16 October 2019

ರಂಗನೆಂಥವನೆಂಥವನಲೆ ತಂಗಿರಂಗನಂತರಂಗ ankita neleyadikeshava

ಶ್ರೀ ಕನಕದಾಸರ ಕೃತಿ 

 ರಾಗ ನಾದನಾಮಕ್ರಿಯಾ        ರೂಪಕತಾಳ 

ರಂಗನೆಂಥವನೆಂಥವನೆಲೆ ತಂಗಿ ॥ ಪ ॥
ರಂಗನೆಂಥವನಂಗ ತಿಳಿಯದು ಬ್ರಹ್ಮಾದಿಗಳಿಗೆ ॥ ಅ ಪ ॥

ಆಗಮವ ತಂದಿಹನೇ ರಂಗ ।
ಬೇಗದಿ ಗಿರಿಯ ಪೊತ್ತಿಹನೇ ॥
ಮೂಗಿಂದ ಭೂಮಿಯ ಕಿತ್ತಿಹನೇ , ಕಂದ ।
ಕೂಗಲು ಕಂಬದಿ ಬಂದ ಕಾಣಕ್ಕ ॥ 1 ॥

ಧರೆಯ ಈರಡಿ ಮಾಡಿದನೆ ಭೂ - ।
ಸುರರಿಗೆ ದಾನವ ನೀಡಿದನೇ ॥
ನೆರೆದು ಕಪಿಹಿಂಡು ಕೂಡಿದನೇ ಫಣಿ ।
ಶಿರದಲ್ಲಿ ಕುಣಿ ಕುಣಿದಾಡಿದನಕ್ಕ ॥ 2 ॥

ಉಟ್ಟದ್ದು ಬಿಟ್ಟು ತಾ ನಿಂತಿಹನೇ ರಂಗ ।
ಧಿಟ್ಟಾದ ಕುದುರೆಯನೇರಿದನೇ ॥
ದುಷ್ಟರನೆಲ್ಲ ಅಳಿದಿಹನೇ ನಮ್ಮ ।
 ಬಿಟ್ಟಾದಿಕೇಶವರಾಯ ಕಾಣಕ್ಕ ॥ 3 ॥
********

ರಂಗನೆಂಥವನೆಂಥವನಲೆ ತಂಗಿರಂಗನಂತರಂಗ ಹಲವಂಗ ತಿಳಿಯದು ಬ್ರಹ್ಮಾದಿಗಳಿಗೆ ಪ

ಆಗಮದ ತಂದಿಹನೆ - ರಂಗಬೇಗದಿ ಗಿರಿಯ ಪೊತ್ತಿಹನೆಮೂಗಿಂದ ಭೂಮಿಯನೆತ್ತಿದನೆ - ಕಂದಕೂಗಲು ಕಂಬದಿ ಬಂದ ಕಾಣಕ್ಕ1

ಧರೆಯಈರಡಿಮಾಡಿದನೆ - ಭೂಸುರರಿಗೆ ದಾನವ ನೀಡಿದನೆನೆರೆದಕಪಿಹಿಂಡುಕೂಡಿದನೆ -ಫಣಿಶಿರದಲಿ ಕುಣಿ ಕುಣಿದಾಡಿದನಕ್ಕ2

ಉಟ್ಟದ್ದು ಬಿಟ್ಟು ತಾ ನಿಂತಿಹನೆ - ರಂಗದಿಟ್ಟಾದ ಕುದುರೆಯನೇರಿದನೆದುಷ್ಟರನೆಲ್ಲ ಅಳಿದಿಹನೆ - ನಮ್ಮಬಿಟ್ಟಾದಿಕೇಶವರಾಯ ಕಾಣಕ್ಕ3
*******

No comments:

Post a Comment