ಪೂರ್ವಿ ರಾಗ ಅಷ್ಟತಾಳ
ನಡತೆ ಹೀನನಾದರೇನಯ್ಯ , ಜಗ-
ದೊಡೆಯನ ಭಕ್ತಿಯಿದ್ದರೆ ಸಾಲದೆ ಮಿಕ್ಕ ನಡತೆ ||ಪ||
ಪುಂಡರಾ ಪಾಂಡುನಂದನರು ಮತ್ತದರೊಳು
ಗಂಡರೈವರು ಭೋಗಿಪರು
ಖಂಡಿಸಿದರು ರಣದೊಳಗೆ ಗುರುಹಿರಿಯರ
ಪುಂಡರೀಕಾಕ್ಷನ ಒಲುಮೆಯೊಂದಲ್ಲದೆ ||೧||
ಒಂದೊಂದು ಪರಿ ಬುದ್ಧಿಯ ಪೇಳಿ ಹಿರಣ್ಯಕ
ಕಂದನ ನಿರ್ಬಂಧಿಸುತಿರೆ
ಅಂದು ಸಾಧಿಸಲು ಕಂಬದ ಬಳಿಯೆ ತನ್ನ
ತಂದೆಯನು ಕೊಲಿಸಿದನೆಂಬುವರು ಜನರು ||೨||
ದಾಸಿಯ ಜಠರದೊಳು ಜನಿಸಿದ ವಿದುರ ಸ-
ನ್ಯಾಸಿ ಎನಿಸಿಕೊಂಡ
ಸಾಸಿರ ನಾಮದೊಡೆಯ ವೇಂಕಟೇಶಾದಿ-
ಕೇಶವನಾ ಭಕುತಿಯೊಂದಿದರೆ ಸಾಕು||೩||
***
Nadate hinanadarenayya jaga
Dodeyana Bakuti iddare salade ||pa||
Pundara pandunandanaru mattadarolu
Kandorvalaivaru bogiparu
Kandisidaru ranadolu guruhiriyara
Pundarikakshana olumeyomdallade ||1||
Ondondu pari buddhiya heli hiranyaka
Kandana nirbamdhisutiralu
Andu sadhisalu kambada baliye tanna
Tandeya kolisidanembaru janaru ||2||
Dasiya jatharadolu janisida vidura sa
Nyasiyendenisi konda
Sasiranamadodeya krushna badadadi
Kesavana Bakutiyondiddare salade ||3||
***
ದೊಡೆಯನ ಭಕುತಿ ಇದ್ದರೆ ಸಾಲದೆ ।।ಪ।।
ಪುಂಡರಾ ಪಾಂಡುನಂದನರು ಮತ್ತದರೊಳು
ಕಂಡೋರ್ವಳೈವರು ಭೋಗಿಪರು
ಖಂಡಿಸಿದರು ರಣದೊಳು ಗುರುಹಿರಿಯರ
ಪುಂಡರೀಕಾಕ್ಷನ ಒಲುಮೆಯೊಂದಲ್ಲದೆ ।।೧।।
ಒಂದೊಂದು ಪರಿ ಬುದ್ಧಿಯ ಹೇಳಿ ಹಿರಣ್ಯಕ
ಕಂದನ ನಿರ್ಬಂಧಿಸುತಿರಲು
ಅಂದು ಸಾಧಿಸಲು ಕಂಬದ ಬಳಿಯೆ ತನ್ನ
ತಂದೆಯ ಕೊಲಿಸಿದನೆಂಬರು ಜನರು ।।೨।।
ದಾಸಿಯ ಜಠರದೊಳು ಜನಿಸಿದ ವಿದುರ ಸ
ನ್ಯಾಸಿಯೆಂದೆನಿಸಿಕೊಂಡ
ಸಾಸಿರನಾಮದೊಡೆಯ ಕೃಷ್ಣ ಬಾಡದಾದಿ
ಕೇಶವನ ಭಕುತಿಯೊಂದಿದ್ದರೆ ಸಾಲದೆ ।।೩।।
*******
No comments:
Post a Comment