by ನಿಡಗುರುಕಿ ಜೀವೂಬಾಯಿ
ಬಾರೈ ರಂಗ ಬಾರೈ ಕೃಷ್ಣ ಬಾರೈ ದೇವ ಕೃಷ್ಣತೋರೈ ನಿನ್ನಯ ಚಾರುಚರಣವತೋಯಜಾಕ್ಷ ಪ
ಘಲು ಘಲುರೆನ್ನುತ ರುಳಿಗೆಜ್ಜೆಯನಿಟ್ಟು ಬಾರೈ ದೇವ ಕೃಷ್ಣಕುಣಿಕುಣಿಯುತ ಬಾ ಕುಂತಿಸುತರಪ್ರಿಯ ಬಾರೈ ದೇವ ಕೃಷ್ಣಥಳಥಳಿಸುವ ಪೀತಾಂಬರ ಹೊಳೆಯುತ ಬಾರೈ ದೇವ ಕೃಷ್ಣನಡುವಿಲಿ ಹೊಳೆಯುತ ಪಟ್ಟೆವಲ್ಲಿಯು ಬಾರೈ ದೇವ ಕೃಷ್ಣ 1
ಕಂಕಣ ಕರಭೂಷಣಗಳು ಹೊಳೆಯುತ ಬಾರೈ ದೇವ ಕೃಷ್ಣಪಂಕಜನಾಭಪಾರ್ಥಸಖನೆ ಕೃಷ್ಣ ಬಾರೈ ದೇವ ಕೃಷ್ಣಶಂಖ ಚಕ್ರಗಳ ಧರಿಸುತ ಮುದದಲಿ ಬಾರೈ ದೇವ ಕೃಷ್ಣಶಂಕಿಸದೆಲೆ ಬಾ ಬಿಂಕವ ತೊರೆದು ಬಾರೈ ದೇವ ಕೃಷ್ಣ 2
ಮುಂಗುರುಳಲಿ ಮುತ್ತಿನರಳೆಲೆ ಹೊಳೆಯುತಬಾರೈ ದೇವ ಕೃಷ್ಣಶೃಂಗಾರದ ಕಿರೀಟವು ಹೊಳೆಯುತಬಾರೈ ದೇವ ಕೃಷ್ಣಸುಂದರ ಕಸ್ತೂರಿ ತಿಲಕವು ಹೊಳೆಯುತಬಾರೈ ದೇವ ಕೃಷ್ಣಕಂಧರದಲಿ ಶೋಭಿಪ ಪದಕಗಳಿಂದಬಾರೈ ದೇವ ಕೃಷ್ಣ 3
ಪೊಂಗೊಳಲೂದುತ ಹೆಂಗಳರೊಡನೆಬಾರೈ ದೇವ ಕೃಷ್ಣಮಂಗಳ ಮಹಿಮ ವಿಹಂಗವಾಹನ ಕೃಷ್ಣಬಾರೈ ದೇವ ಕೃಷ್ಣಅಂಗಳದೊಳಗಾಡುತ ನಲಿಯುತ ಬಲು ಚಂದದಿಬಾರೈ ದೇವ ಕೃಷ್ಣಇಂದಿರೆಯರಸನೆ ವಂದಿಸಿ ಬೇಡುವೆ ಬಾರೈ ದೇವ ಕೃಷ್ಣ 4
ಕಿಲಿಕಿಲಿನಗುತಲಿ ಕುಣಿಕುಣಿಯುತಬೇಗ ಬಾರೈ ದೇವ ಕೃಷ್ಣಕನಕಾಭರಣಗಳಿಂದೊಪ್ಪುತ ಬೇಗ ಬಾರೈದೇವ ಕೃಷ್ಣನಲಿನಲಿಯುತ ಬಾ ಮಣಿಯುತ ಬೇಡುವೆಬಾರೈ ದೇವ ಕೃಷ್ಣದಣಿಸದೆ ಕಮಲನಾಭವಿಠ್ಠಲ ಬೇಗ ಬಾರೈ ದೇವ ಕೃಷ್ಣ 5
*******

No comments:
Post a Comment