Friday, 27 December 2019

ಹಸಿವು ಬಹಳಾಗುತ್ತಿದೆ ಕೇಳಮ್ಮಯ್ಯಹಸನಾಗಿ ankita kamalanabha vittala

by ನಿಡಗುರುಕಿ ಜೀವೂಬಾಯಿ
ಹಸಿವು ಬಹಳಾಗುತ್ತಿದೆ ಕೇಳಮ್ಮಯ್ಯಹಸನಾಗಿ ಉಣಬಡಿಸೇ ಪ

ಬಿಸಿ ಬಿಸಿ ಕಡುಬು ಕಜ್ಜಾಯ ದೋಸೆಯು ಹುಗ್ಗಿಹಸನಾಗಿ ಬಡಿಸಮ್ಮ ಬಿಸಿ ಬಿಸಿಪರಮಾನ್ನಅ.ಪ

ನೀರೊಳು ಮುಳುಗಿ ಬಂದೆ ಭಾರವ ಪೊತ್ತುಕೋರೆಲಿ ಧರಣಿ ತಂದೆಪೋರನೊಡನೆ ವೈರಿಯಾದ ದೈತ್ಯನ ಕರು-ಳ್ಹಾರವ ಮಾಡುತ್ತಭಾಳಬಳಲಿ ಬಂದೆ1

ಪೊಡವಿ ದಾನವ ಬೇಡಿದೆ ರಾಜರ ಗೆದ್ದುಕೊಡಲಿ ಕಯ್ಯಲಿ ಪಿಡಿದೆಮಡದಿಯನರಸುತ ಅಡವಿಗಳ ಚರಿಸಿದೆಬಿಡದೆ ದೈತ್ಯರ ಸದೆ ಬಡಿದು ದಣಿದು ಬಂದೆ 2

ವಿಷವನುಣಿಸಿದ ದೈತ್ಯಳ ಅಸುವನೆ ಹೀರಿಅಸುರ ಶಕಟನ ಸೀಳಿದೆವಸುದೇವ ಸುತನು ಈ ಅಸುರ ಮರ್ದನನಾಗಿಬಸುರೊಳು ಬ್ರಹ್ಮಾಂಡ ಧರಿಸಿದ ಕಾರಣ 3

ಕಿಚ್ಚನುಂಗಿದ ಕಾರಣ ಹೊಟ್ಟೆಯ ಹಸಿವುಹೆಚ್ಚುತಲಿದೆ ನೋಡಮ್ಮಾಕಚ್ಚ ಬರುತಿಹ ಕಾಳಿ ಸರ್ಪನ ಹೆಡೆ ಮೇಲೆನರ್ತನ ಮಾಡುತಭಾಳಬಳಲಿ ಬಂದೆ4

ಬತ್ತಲೆ ತಿರುಗಿ ಬಂದೆ ತೇಜಿಯನೇರಿಸುತ್ತಿದೆ ಧರಣಿಯನುಕರ್ತೃ ಶ್ರೀಹರಿಕಮಲನಾಭ ವಿಠ್ಠಲನಿಗೆತೃಪ್ತಿಯ ಪಡಿಸಮ್ಮ ಮುಕ್ತಿಪಥವನೀವೇ 5
*******

No comments:

Post a Comment