Friday, 27 December 2019

ಕರುಣಿಸೈ ಹರಿಚರಣಸೇವೆ ನಿರುತ ankita kamalanabha vittala

by ನಿಡಗುರುಕಿ ಜೀವೂಬಾಯಿ
ಹನುಮ-ಭೀಮ-ಮಧ್ವ

ಕರುಣಿಸೈಹರಿಚರಣಸೇವೆ ನಿರುತ ಪ

ಪರಿಪರಿಯ ಕ್ಲೇಶಗಳ ಪರಿಹರಿಸುತ ಪೊರೆವದುರಿತದೂರ ಹರಿಯಚರಣಸೇವಕನೆಅ.ಪ

ಕಂಜಾಕ್ಷನ ದಯದಿ ಅಂಜದೆ ನೀರಧಿಯಹಿಂಜರಿಯದೆ ದಾಂಟಿ ಸಂಜೆ ಕಳೆಯೆ ಲಂಕೆರಂಜಿಸುವದು ಕಂಡು ಕಂಜಾಕ್ಷಿಗುಂಗುರ ಪ್ರ-ಭಂಜನನೀಡಿದೆಯೊ ಅಂಜನೆಯತನಯ1

ದುರಳ ದೈತ್ಯನಾದ ಜರೆಯ ಸುತನ ಸೀಳಿಹರಿಗರ್ಪಿಸಿ ಸರ್ವವನು ಧರಣಿ ಭಾರನಿಳುಹಿಹರಿಯ ಮನವನರಿತು ಪರಿಪರಿಲಿ ಸೇವಿಸುತಪರಮಭಕ್ತನಾದೆ ಪರಿಸರನೆ ಸಲಹೊ2

ಮುದ್ದು ಕೃಷ್ಣನ ಸೇವೆ ಶುದ್ಧಮನದಿ ಮಾಡಿಸದ್ವೈಷ್ಣವರ ಕುಲದ ಪದ್ಧತಿಯನರುಹಿಪದ್ಮನಾಭಕಮಲನಾಭ ವಿಠ್ಠಲನೊಲಿಸಿಸದ್ಗ್ರಂಥಗಳ ರಚಿಸಿ ಉದ್ಧರಿಸಿದೆ ಜಗವ 3
********

No comments:

Post a Comment