Friday, 27 December 2019

ಶ್ರೀಶ ಶ್ರೀಹಯವದನ ಮೂರ್ತಿಗೊಂದಿಸುವೆಸಾಸಿರ ankita kamalanabha vittala

by ನಿಡಗುರುಕಿ ಜೀವೂಬಾಯಿ
ಶ್ರೀಶ ಶ್ರೀಹಯವದನ ಮೂರ್ತಿಗೊಂದಿಸುವೆಸಾಸಿರ ನಾಮದ ಒಡೆಯನೀನೆಂದು ಪ

ನಿನ್ನ ನೋಡುವ ಇಚ್ಛೆಯಿಂದ ನಿನ್ನದಾಸರುಇನ್ನು ಗಾವುದ ದೂರದಿಂದ ಬರುತಿಹರುನಿನ್ನ ಭಕ್ತರ ಕೂಡಿ ನಿನ್ನ ಸೇವೆಯ ಮಾಡಿನಿನ್ನ ದರುಶನದಿಂದ ಧನ್ಯರಾಗುವರು 1

ಹರಿದಾಸರೆಲ್ಲರೂ ಪರಮಸಂಭ್ರಮದಿಂದಹರಿದಿನದಜಾಗರಹರಿಸ್ಮರಣೆಯಿಂದಪರಮವೈಭವದಿ ತನ್ನ ಸ್ಮರಿಸುತಿಹ ಸುಜನರನುಕರುಣದಿಂದಲಿಕಾವಸಿರಿರಮಣನೆಂತೆಂದು2

ಆಪತ್ತು ತಾಪತ್ರಯಂಗಳೆಲ್ಲವುನೀಗಿಶ್ರೀಪತಿಯೆ ರಕ್ಷಿಸು ರಕ್ಷಿಸೆಂದೆನುತಗೋಪತೀ ಕೃಷ್ಣನ್ನಪಾಡಿ ಪೊಗಳುವರನ್ನುಕಾಪಾಡುವನು ಸಕಲಪಾಪಗಳ ಹರಿಸಿ 3

ಸೋದೆಯಲಿ ನೆಲೆಸಿರುವ ವಾದಿರಾಜರಿಗೊಲಿದುಆದರದಿ ಅವರಿತ್ತ ಸೇವೆ ಕೈಗೊಂಡುಶೋಭ ಕೃತುನಾಮ ಸಂವತ್ಸರದಿ ಸುಜನರಿಗೆಶೋಭನಂಗಳನಿತ್ತು ನೀದಯದಿ ಪೊರೆವೆ 4

ಕಡು ಹರುಷದಿಂದಿತ್ತ ಕಡಲೆ ಹೂರಣ ಸವಿದುದೃಢ ಭಕ್ತರನು ಪೊರೆದೆ ಕಡುಹರುಷದಿಮೃಡನಸಖನಿನ್ನಂಘ್ರಿ ಬಿಡದೆ ಧ್ಯಾನಿಪ ಭಾಗ್ಯತಡೆಯದಲೆ ಪಾಲಿಸೈ ಕಮಲನಾಭ ವಿಠ್ಠಲ 5
******

No comments:

Post a Comment